Friday, April 18, 2025

Latest Posts

ರಾಜಕೀಯ ದೊಂಬರಾಟ ನಡೆಸುತ್ತಿರುವ ಬಚ್ಛೆಗೌಡ ಕುಟುಂಬದವರು-ಸಚಿವ ಎಂಟಿಬಿ ನಾಗರಾಜ್

- Advertisement -

ಹೊಸಕೋಟೆ :

ರಾಜಕೀಯ ದೊಂಬರಾಟ ನಡೆಸುತ್ತಿರುವ ಬಚ್ಛೆಗೌಡ ಕುಟುಂಬದವರು ಎಂದು ಸಚಿವ ಎಂಟಿಬಿ ನಾಗರಾಜ್ ವಾಗ್ದಾಳಿ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮುಗಬಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೇಳೆ ವಾಗ್ದಾಳಿ ನಡೆಸಿದ್ದಾರೆ.

ಈ ಹಿಂದಿನ ಚುನಾವಣೆಗಳಲ್ಲಿ ದೊಣ್ಣೆ ಮಚ್ಚು ಹಿಡಿದುಕೊಂಡು ಮತಕೇಳುತ್ತಿದ್ದವರು ಈಗ ಮತದಾರರ ಮನೆ ಬಾಗಿಲಿಗೆ ಬಂದು ಕೈ ಕಾಲು ಮುಗಿಯುತ್ತಿದ್ದಾರೆ. ನಾಟಕದಲ್ಲಿ 5 ಪಾತ್ರಗಳನ್ನು ನಿರ್ವಹಿಸುವ ಸೂತ್ರಧಾರಿಯಂತೆ ಚುನಾವಣೆಗೆ ಒಂದರಂತೆ ಪಕ್ಷವನ್ನು ಬದಲಾಯಿಸುವವರು. ಜನರ ಹಿತ ದೃಷ್ಟಿಯಿಂದ ರಾಜಕೀಯಕ್ಕೆ ಬಂದಿಲ್ಲ ಬದಲಿಗೆ ಅವರ ಉದ್ದಾರಕ್ಕೆ ಬಂದಿದ್ದಾರೆ. ಬಚ್ಛೆಗೌಡರ 4 ವರ್ಷ ಹಾಗೂ ಶರತ್ ಬಚ್ಛೆಗೌಡರ ಇಷ್ಟು ವರ್ಷದ ಆಡಳಿತದಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂಬುದು ಜನರಿಗೆ ತಿಳಿಸಲಿ ಅದನ್ನು ಬಿಟ್ಟು ಅಪ್ಪ ಬಿಜೆಪಿ ಮಗ ಕಾಂಗ್ರೆಸ್ ಇದು ಇವರ ರಾಜಕೀಯ ದೊಂಬರಾಟ ಎಂದು ವಾಗ್ದಾಳಿ ನಡೆಸಿದರು.

ಮಂಡ್ಯದತ್ತ ಮೋದಿ

ಭಾರತ ಮತ್ತು ರಷ್ಯಾ ನಡುವಿನ ವಹಿವಾಟಿನಿಂದಾಗಿ ಡಾಲರ್ ಕುಸಿತ

ಮತ್ತೆ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಮುಂದಾದ ಮೆಟಾ ಕಂಪನಿ

- Advertisement -

Latest Posts

Don't Miss