Saturday, February 8, 2025

Latest Posts

ಅರಳಿ ಮರವನ್ನು ಹೇಗೆ ಪೂಜಿಸಬೇಕು..? ಯಾವ ದಿನ ಪೂಜಿಸಬೇಕು..?

- Advertisement -

ಹಿಂದೂಗಳಲ್ಲಿ ಅರಳಿ ಮರವನ್ನು ಪೂಜನೀಯ ಸ್ಥಾನದಲ್ಲಿ ಇರಿಸಲಾಗಿದೆ. ವಿವಾಹಿತೆಯರು ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕಿ, ಪೂಜೆ ಮಾಡಿದ್ರೆ, ಬಹುಬೇಗ ಸಂತಾನ ಪ್ರಾಪ್ತಿಯಾಗತ್ತೆ ಅನ್ನೋ ನಂಬಿಕೆ ಇದೆ. ಯಾಕಂದ್‌ರೆ ಈ ಮರದಿಂದ ಬರುವ ಆಮ್ಲಜನಕದಿಂದ, ಮಹಿಳೆಯರ ಹಾರ್ಮೋನಲ್ ಇಂಬ್ಯಾಲೆನ್ಸ್‌ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದರಿಂದಲೇ ಸಂತಾನ ಪ್ರಾಪ್ತಿಯಾಗುತ್ತದೆ. ಹಾಗಾದ್ರೆ ಅರಳಿ ಮರವನ್ನು ಹೇಗೆ ಪೂಜಿಸಬೇಕು..? ಯಾವ ದಿನ ಪೂಜಿಸಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಶನಿವಾರದ ದಿನ ಅರಳಿಮರದ ಕೆಳಗೆ ದೀಪ ಹಚ್ಚಿ, ಪ್ರದಕ್ಷಿಣೆ ಹಾಕಿ, ಯಾರು ಪೂಜೆ ಮಾಡುತ್ತಾರೋ, ಅವರಿಗೆ ಶೀಘ್ರದಲ್ಲೇ ಸಂತಾನ ಪ್ರಾಪ್ತಿಯಾಗುತ್ತದೆ. ಅಲ್ಲದೇ, ಅವರ ಆರೋಗ್ಯ ಉತ್ತಮವಾಗಿರುತ್ತದೆ. ಅವರ ಸಕಲ ಮನೋಕಾಮನೆಗಳು ಈಡೇರುತ್ತದೆ ಅನ್ನೋ ನಂಬಿಕೆ ಇದೆ. ಆದ್ರೆ ನೀವು ಪ್ರತಿದಿನ ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕುವಂತಿಲ್ಲ. ಯಾಕಂದ್ರೆ ಪ್ರತಿದಿನ ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕಿದ್ರೆ, ದರಿದ್ರ ಲಕ್ಷ್ಮೀ ಮನೆಗೆ ಬರುತ್ತಾಳೆಂದು ಹೇಳಲಾಗಿದೆ.

ಯಾಕಂದ್ರೆ ಲಕ್ಷ್ಮೀ ದೇವಿ ಅರಳಿ ಮರದಲ್ಲೇ ವಾಸವಿರುತ್ತಾಳೆ. ಆದರೆ ಶನಿವಾರದ ದಿನ ಮಾತ್ರ ಆಕೆಯೊಂದಿಗೆ ಆಕೆಯ ತಂಗಿ ಅದೃಷ್ಟಲಕ್ಷ್ಮೀ ಮತ್ತು ವಿಷ್ಣು ಅರಳಿ ಮರದಲ್ಲಿ ವಾಸವಿರುತ್ತಾರೆಂದು ಹೇಳಲಾಗಿದೆ. ಹಾಗಾಗಿ ಶನಿವಾರದ ದಿನ ಮಾತ್ರ ಅರಳಿ ಮರಕ್ಕೆ ಪೂಜೆ ಮಾಡಬೇಕು. ಅಲ್ಲದೇ, ಹೀಗೆ ಅರಲಿ ಮರಕ್ಕೆ ಪೂಜೆ ಸಲ್ಲಿಸಿದರೆ, ಯಾರ ಜಾತಕದಲ್ಲಿ ಶನಿದೋಷವಿರುತ್ತದೆಯೋ, ಅವರ ಜೀವನದಲ್ಲಿ ಆ ಶನಿದೋಷದ ಪರಿಣಾಮವಿರುವುದಿಲ್ಲ.

ಅಲ್ಲದೇ ಪಿತೃದೋಷ, ರಾಹು ದೋಷ, ಶನಿ ದೋಷ, ಕೇತು ದೋಷ ಎಲ್ಲವೂ ಸರಿಹೋಗಬೇಕು ಅಂದ್ರೆ ಶನಿವಾರದ ದಿನ ಅರಳಿಮರ ಪೂಜೆ ಮಾಡಬೇಕು. ಪೂಜೆ ಹೇಗೆ ಮಾಡಬೇಕು ಅಂದ್ರೆ, ಶನಿವಾರದ ದಿನ ಅರಳಿ ಮರಕ್ಕೆ ಜಲ ಅರ್ಪಣೆ ಮಾಡಬೇಕು. ಜೊತೆಗೆ ಹಸುವಿನ ಹಸಿ ಹಾಲನ್ನ ಕೂಡ ಅರ್ಪಿಸಬೇಕು. ಮತ್ತು 7 ಬಾರಿ ಮರಕ್ಕೆ ಪ್ರದಕ್ಷಿಣೆ ಮಾಡಿ, ಸೂರ್ಯ ದೇವನಿಗೆ ನಮಸ್ಕರಿಸಬೇಕು. ಅರಳಿ ಮರ ಮತ್ತು ಶಿವನ ಪೂಜೆ ಮಾಡಿ, ಪಿತೃ ದೇವಾಯ ನಮಃ ಅನ್ನೋ ಮಂತ್ರವನ್ನ ನಾಲ್ಕು ಬಾರಿ ಹೇಳಬೇಕು. ಅರಳಿ ಮರಕ್ಕೆ ಅರ್ಪಿಸಿದ ನೀರನ್ನು ಕಣ್ಣಿಗೆ ಹಚ್ಚಿಕೊಳ್ಳಬೇಕು. ಈ ರೀತಿ ಅರಳಿ ಮರದ ಪೂಜೆ ಮಾಡಬೇಕು.

ಅರಳಿ ಮರ ಮತ್ತು ಶನಿಗೆ ಸಂಬಂಧಿಸಿದ ಕಥೆಯೊಂದನ್ನ ಮುಂದಿನ ಭಾಗದಲ್ಲಿ ತಿಳಿಯೋಣ..

ಕಂಜೂಸು ವ್ಯಕ್ತಿ ಮತ್ತು ವಿಷ್ಣುವಿನ ಕಥೆ.. ಭಾಗ 1

ಕಂಜೂಸು ವ್ಯಕ್ತಿ ಮತ್ತು ವಿಷ್ಣುವಿನ ಕಥೆ.. ಭಾಗ 2

ಕಂಜೂಸು ವ್ಯಕ್ತಿ ಮತ್ತು ವಿಷ್ಣುವಿನ ಕಥೆ.. ಭಾಗ 3

- Advertisement -

Latest Posts

Don't Miss