ಆರ್‌ಸಿಬಿ ಆಟಗಾರ್ತಿ ಪೆರ್ರಿಗೆ ಒಡೆದ ಕಾರಿನ ಗಾಜು ಗಿಫ್ಟ್ ಕೊಟ್ಟ ಟಾಟಾ ಮೋಟರ್ಸ್..

Sports News: ಆರ್‌ಸಿಬಿ ಆಟಗಾರ್ತಿಯರ ಟೀಂ ಮೊದಲ ಬಾರಿ ಫೈನಲ್ ತಲುಪಿದೆ. ಫೈನಲ್ ಪ್ರವೇಶಕ್ಕೆ ಕಾರಣರಾಗಿರುವ ಆರ್‌ಸಿಬಿ ಆಟಗಾರರಲ್ಲಿ ಆಟಗಾರ್ತಿ ಪೆರ್ರಿ ಕೂಡ ಒಬ್ಬಳು. ಈಕೆಗೆ ಟಾಟಾ ಮೋಟರ್ಸ್ ಒಡೆದ ಕಾರಿನ ಗಾಜು ಗಿಫ್ಟ್ ಆಗಿ ಕೊಟ್ಟಿದೆ. ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಪೆರ್ರಿಗೆ ಈ ಗಿಫ್ಟ್ ನೀಡಲಾಗಿದೆ.

ಹಾಗಾದ್ರೆ ಯಾಕೆ ಪೆರ್ರಿಗೆ ಒಡೆದ ಗಾಜು ಕೊಟ್ಟಿದ್ದಾರೆಂಬ ಕುತೂಹಲ ನಿಮಗಿರಬಹುದು. ಬರೀ ಗಾಜು ಅಲ್ಲ ಒಡೆದ ಗಾಜಿಗೆ ಫ್ರೇಮ್ ಬೇರೆ ಹಾಕಿಸಿ, ಗಿಫ್ಟ್‌ ನೀಡಲಾಗಿದೆ. ಯಾಕಂದ್ರೆ ಪೆರ್ರಿ ಬಾರಿಸಿದ ಸಿಕ್ಸ್‌ಗೆ, ಟಾಟಾ ಮೋಟರ್ಸ್ ಕಾರಿನ ಗಾಜು ಒಡೆದಿತ್ತು. ಅದೇ ಗಾಾಜನ್ನು ಟಾಟಾ ಮೋಟರ್‌ಸ್ ಫ್ರೇಮ್ ಹಾಕಿಸಿ, ಪ್ರಶಸ್ತಿಯನ್ನಾಗಿ ನೀಡಿದೆ.

ಆರ್‌ಸಿಬಿ ವಿಮೆನ್ಸ್ ತಂಡ ಫೈನಲ್‌ಗೆ ಬಂದಿದ್ದು, ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮಾರ್ಚ್ 17ಕ್ಕೆ ಐಪಿಎಲ್ ಫೈನಲ್ ಪಂದ್ಯವಿದ್ದು, ದೆಹಲಿ ಕ್ಯಾಪಿಟಲ್ಸ್ ವಿರುದ್ಧ ನಮ್ಮ ಹೆಣ್ಣು ಮಕ್ಕಳು ತೊಡೆತಟ್ಟಲಿದ್ದಾರೆ. ಆರ್‌ಸಿಬಿ ಈ ಬಾರಿ ಗೆದ್ದು ಕಪ್ ತರಲಿ ಎಂದು ಕನ್ನಡಿಗರು ಹಾರೈಸಿದ್ದಾರೆ.

ಈಶ್ವರಪ್ಪ ಅವರು ಪಕ್ಷದ ಹಿತ ಬಿಟ್ಟು ಬೇರೆ ಯೋಚನೆ ಮಾಡಿದವರೇ ಅಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಬೆಳಗಾವಿಯಲ್ಲಿ ವಿರೋಧದ ಅಲೆಯಿಲ್ಲ. ಕೋರೆಯವರು ನಮ್ಮ ಪರವಾಗಿದ್ದಾರೆ: ಮಾಜಿ ಸಿಎಂ ಶೆಟ್ಟರ್..!

ಚುನಾವಣಾ ಬಾಂಡ್ ಎನ್ನುವುದು ಬಿಜೆಪಿಯ ಕೈಯಲ್ಲಿರುವ ರಾಜಕೀಯ ಸುಲಿಗೆಯ ಬ್ರಹ್ಮಾಸ್ತ್ರವೇ?: ಸಿಎಂ

About The Author