ಡಯಟ್ ಪ್ರಿಯರಿಗಾಗಿ ಇಂದು ನಾವು ಎರಡು ರೀತಿಯ ಚಹಾ ರೆಸಿಪಿಯನ್ನ ತಂದಿದ್ದೇವೆ. ಒಂದು ಲೆಮನ್ ಟೀ ಮತ್ತೊಂದು ಹರ್ಬಲ್ ಟೀ. ಇವೆರಡು ಚಹಾ ತಯಾರಿಸಿಕೊಳ್ಳಲು ಬೇಕಾಗುವ ಸಾಮಗ್ರಿಗಳೇನು..? ಇವೆರಡನ್ನ ತಯಾರಿಸುವುದಾದರೂ ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಲೆಮನ್ ಟೀ- ಚಿಕ್ಕ ತುಂಡು ಶುಂಠಿ, ಒಂದು ಏಲಕ್ಕಿ, ನಾಲ್ಕು ಕಾಳು ಮೆಣಸು, ಚಹಾ ಪುಡಿ, ನೀರು, ಬೇಕಾದ್ದಲ್ಲಿ ಮಾತ್ರ ಸಕ್ಕರೆ ಬಳಸಿ. ಅರ್ಧ ನಿಂಬೆ ಹಣ್ಣು. ಇವಿಷ್ಟು ಲೆಮನ್ ಟೀ ಮಾಡಲು ಬೇಕಾಗುವ ಸಾಮಗ್ರಿ. ಶುಂಠಿ, ಏಲಕ್ಕಿ, ಕಾಳು ಮೆಣಸನ್ನ ಕುಟ್ಟಿ ತರಿ ತರಿಯಾಗಿ ಪುಡಿ ಮಾಡಿ. ಈಗ ಪಾತ್ರೆಯಲ್ಲಿ ನೀರು, ಅರ್ಧ ಚಮಚ ಚಹಾ ಪುಡಿ, ಸಕ್ಕರೆ ಹಾಕಿ ಕುದಿಸಿ. ನೆನಪಿರಲಿ ಈ ಚಹಾಕ್ಕೆ ಚಹಾದ ಪುಡಿ ಕಡಿಮೆ ಹಾಕಬೇಕು. ಅದಕ್ಕಾಗಿ ಅರ್ಧ ಚಮಚವಷ್ಟೇ ಚಹಾದ ಪುಡಿ ಬಳಸಿ. ಇದಕ್ಕೆ ತಯಾರಿಸಿಟ್ಟುಕೊಂಡ ಮಸಾಲೆಯನ್ನ ಹಾಕಿ, ಮತ್ತೆ 2 ನಿಮಿಷ ಕುದಿಸಿ. ಈಗ ಈ ಚಹಾಯವನ್ನು ಕಪ್ಗೆ ಸರ್ವ್ ಮಾಡಿ. ಕೊನೆಯಲ್ಲಿ ಅರ್ಧ ನಿಂಬೆಹಣ್ಣನ್ನು ಈ ಚಹಾಕ್ಕೆ ಸೇರಿಸಿದರೆ ಲೆಮನ್ ಟೀ ರೆಡಿ. ಇದಕ್ಕೆ ನೀವು ಪುದೀನಾ ಕೂಡ ಸೇರಿಸಿಕೊಳ್ಳಬಹುದು.
ಎರಡನೇಯದಾಗಿ ಹರ್ಬಲ್ ಟೀ- ಚಿಕ್ಕ ತುಂಡು ಹಸಿ ಶುಂಠಿ, 5 ತುಳಸಿ ಮತ್ತು ಪುದೀನಾ ಎಲೆ, ಚಿಕ್ಕ ತುಂಡು ದಾಲ್ಚೀನಿ, ಚಿಟಿಕೆ ಅರಿಶಿನ ಪುಡಿ. ಅರ್ಧ ಸ್ಪೂನ್ ಗ್ರೀನ್ ಟೀ ಪುಡಿ. ಇವಿಷ್ಟು ಹರ್ಬಲ್ ಟೀ ಮಾಡಲು ಬೇಕಾಗುವ ಸಾಮಗ್ರಿ. ಶುಂಠಿ, ತುಳಸಿ, ಪುದೀನಾ ಮತ್ತು ದಾಲ್ಚೀನಿಯನ್ನು ಕುಟ್ಟಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಪಾತ್ರೆಯಲ್ಲಿ ನೀರಿನ ಜೊತೆ ಈ ಪುಡಿಯನ್ನು ಸೇರಿಸಿ ಮಂದ ಉರಿಯಲ್ಲಿ 2 ನಿಮಿಷ ಕುದಿಸಿ. ಇದಕ್ಕೆ ಅರಿಶಿನ ಮತ್ತು ಗ್ರೀನ್ ಟೀ ಪುಡಿ ಹಾಕಿ ಮತ್ತೆ ಎರಡು ನಿಮಿಷ ಮಂದ ಉರಿಯಲ್ಲಿ ಕುದಿಸಿದರೆ ಹರ್ಬಲ್ ಟೀ ರೆಡಿ. ಇನ್ನು ಇಲ್ಲಿ ಹೇಳಿರುವ ವಸ್ತುಗಳಲ್ಲಿ ಯಾವುದಾದರೂ ವಸ್ತುವನ್ನ ಬಳಸಿದ್ದಲ್ಲಿ ನಿಮಗೆ ಅಲರ್ಜಿ ಎಂದಾದ್ದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಬಳಸುವುದು ಉತ್ತಮ.