ತನ್ನ 7ವರ್ಷದ ಮಗಳಿಗೆ ಹೊಡೆದ ಆರೋಪವಿದ್ದ ಕಾರಣಕ್ಕೆ, ಆ ಮಗುವಿನ ತಂದೆ ತಾಯಿ ಶಾಲೆಗೆ ಬಂದು, ಶಿಕ್ಷಕನ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ತಮಿಳುನಾಡಿನ ತೂಟಿಕೋರಿನ್ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ತಮ್ಮ ಮಗುವಿಗೆ ಹೊಡೆದ ಆರೋಪವಿದ್ದ ಕಾರಣ, ಪತಿ ಪತ್ನಿ ಇಬ್ಬರೂ ಸೇರಿ, ಶಿಕ್ಷಕನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕೃತ್ಯಕ್ಕೆ ಮಗುವಿನ ಅಜ್ಜ ಕೂಡ ಸಾಥ್ ಕೊಟ್ಟಿದ್ದಾರೆ.
ಶಿಕ್ಷಕನ ಮೇಲೆ ಹಲ್ಲೆಯಾಗುವಾಗ, ಶಿಕ್ಷಕ ಈ ದೃಶ್ಯವನ್ನ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾನೆ. ಈ ಸಾಕ್ಷಿಯನ್ನಿರಿಸಿಕೊಂಡು, ಪೊಲೀಸ್ ಕಂಪ್ಲೇಂಟ್ ಕೂಡ ನೀಡಿದ್ದಾರೆ. ಮಗುವಿನ ತಾಯಿ ಶಿಕ್ಷಕನ ಮೇಲೆ ಹಲ್ಲೆ ಮಾಡುವಾಗ, ಮಗುವಿಗೆ ಹೊಡೆಯುವುದು ತಪ್ಪು ಎಂದು ನಿಮಗೆ ಗೊತ್ತಿಲ್ಲವೇ..? ನಿಮಗೆ ಈ ಹಕ್ಕನ್ನು ಕೊಟ್ಟವರ್ಯಾರು..? ನಾನು ಈಗ ನಿಮಗೆ ಚಪ್ಪಲಿಯಿಂದ ಹೊಡೆಯುತ್ತೇನೆ ನೋಡಿ, ಎಂದು ಹೇಳಿ ಹೊಡೆದಿದ್ದಾಳೆ.
ಅಲ್ಲದೇ, ಮಗುವಿನ ಅಪ್ಪ ಕೂಡ ಶಿಕ್ಷಕನನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾನೆ. ಅಲ್ಲದೇ, ಶಿಕ್ಷಕನ ಮೇಲೆ ಕಲ್ಲು ತೂರಲು ಹೋಗಿದ್ದಾನೆ. ಇನ್ನು ಶಿಕ್ಷಕನ ಮೇಲೆ ಹಲ್ಲೆಯಾಗುತ್ತಿರುವುದನ್ನ ಕಂಡ ಸಹ ಶಿಕ್ಷಕರು, ಶಿಕ್ಷಕನನ್ನು ಉಳಿಸಲು ಹರ ಸಾಹಸ ಪಟ್ಟಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಸ್ಥಳೀಯ ಪೊಲೀಸರು, ಕೆಲಸದಲ್ಲಿದ್ದ ಸರ್ಕಾರಿ ಶಿಕ್ಷಕನ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ, ಮಗುವಿನ ತಂದೆ ತಾಯಿ ಮತ್ತು ಅಜ್ಜನ ಮೇಲೆ ಕೇಸ್ ದಾಖಲಿಸಿ, ಅರೆಸ್ಟ್ ಮಾಡಲಾಗಿದೆ. ಮಗು ತನ್ನ ಪಕ್ಕದಲ್ಲಿ ಕುಳಿತ ಮಗುವಿನೊಂದಿಗೆ ಹೊಡೆದಾಟ ಮಾಡುತ್ತಿತ್ತು. ಮತ್ತು ಶಿಕ್ಷಕರು ಮಾಡುವ ಪಾಠದ ಕಡೆ ಗಮನ ಕೊಡಲಿಲ್ಲ.
ಅದಕ್ಕಾಗಿ ಶಿಕ್ಷಕ, ಆಕೆಗೆ ಬೇರೆ ಕಡೆ ಕೂರಲು ಹೇಳಿದರು. ಅವಳು ಬೇರೆ ಕಡೆ ಕೂರಲು ಹೋದಾಗ, ಅಲ್ಲೇ ಬಿದ್ದಿದ್ದಾಳೆ. ಮತ್ತು ಮನೆಗೆ ಹೋಗಿ, ತನಗೆ ಶಿಕ್ಷಕರು ಹೊಡೆದರು ಎಂದು ಅಜ್ಜನ ಬಳಿ ಆರೋಪ ಮಾಡಿದ್ದಾಳೆಂದು ಹೇಳಿದ್ದಾರೆ. ಸದ್ಯ ಪೊಲೀಸರು ಮಗುವಿನ ತಂದೆ ತಾಯಿ ಮತ್ತು ಅಜ್ಜನನ್ನು ಅರೆಸ್ಟ್ ಮಾಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
‘ಹಾಸನದಲ್ಲಿ ಪೊಲೀಸರಿಗಿಂತ ಡಿವೈಎಸ್ಪಿ ಮತ್ತು ರೌಡಿಗಳ ಆಡಳಿತ ನಡೆಯುತ್ತಿದೆ’
ಕರ್ನಾಟಕ ಒಳ್ಳೆ ದಿಕ್ಕಿನಲ್ಲಿ ನಡೆಯಬೇಕಾದ್ರೆ, ಕಾಂಗ್ರೇಸ್ ನವರ ಗ್ಯಾರೆಂಟಿಗಳು ಅನ್ ಗ್ಯಾರೆಂಟಿ