ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಅಭಿನಂದನೆ ತಿಳಿಸಿದ್ದಾರೆ. ಇಂದು ಟ್ವೀಟ್ ಮಾಡಿರುವ ಕೊಹ್ಲಿ, “ಅಭಿನಂದನೆಗಳು ಮೋದಿಜಿ, ನಿಮ್ಮ ದೂರದೃಷ್ಟಿಯ ಮೂಲಕ ಭಾರತ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಿರಿ ಎಂದು ನಾವು ನಂಬಿದ್ದೇವೆ. ಜೈ ಹಿಂದ್” ಅಂತ ಬರೆದುಕೊಂಡಿದ್ದಾರೆ.
ಟೀಮ್ ಇಂಡಿಯಾ ಮಾಜಿ ಓಪನರ್ ವೀರೇಂದ್ರ ಸೇಹ್ವಾಗ್ ಕೂಡ, ‘ಭಾರತ ಗೆದ್ದಿದೆ. ಪ್ರಚಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ಇಂದು ತನ್ನ ಆದೇಶ ನೀಡಿದೆ. ಈ ಅಭೂತಪೂರ್ವ ಗೆಲುವಿನ ನಾಯಕ ನರೇಂದ್ರ ಮೋದಿಯವರಿಗೆ ಅಭಿನಂದನೆ. ನಿಮ್ಮ ಎರಡನೇ ಇನ್ನಿಂಗ್ಸ್ ಇನ್ನೂ ಉತ್ತಮವಾಗಿರಲಿ, ಭಾರತ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ’ ಅಂತಾ ಬರೆದುಕೊಂಡಿದ್ದಾರೆ.
ಜೊತೆಗೆ ಟೀಮ್ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಟ್ವೀಟ್ ಮಾಡಿದ್ದು . ‘ಈ ಅಭೂತಪೂರ್ವ ಗೆಲುವು ಸಾಧಿಸಿದ ಮೋದಿಯವರಿಗೆ ಅಭಿನಂದನೆ. ಈ ಗೆಲುವು ಕೇವಲ ಭರವಸೆ, ಸ್ಥಿರತೆ, ಪ್ರಗತಿಗಳ ಚಿಹ್ನೆ ಮಾತ್ರವಲ್ಲ. ಬದಲಾಗಿ, ನಂಬಿಕೆಯಿಲ್ಲದವರ ಮೇಲೆನ ನಂಬಿಕೆಯ ಗೆಲುವಾಗಿದೆ. ನಿಮಗೆ ನನ್ನ ಹೃದಯಪೂರ್ವಕ ಅಭಿನಂದನೆ. ನಮಗೆಲ್ಲರಿಗೂ ಮಾರ್ಗದರ್ಶಕ ಶಕ್ತಿಯಾಗಿರುವುದಕ್ಕೆ ಧನ್ಯವಾದಗಳು’ ಅಂತಾ ಬರೆದುಕೊಂಡಿದ್ದಾರೆ.
ಕಣ್ಣೀರಿನಲ್ಲಿ ಪ್ರಜ್ವಲ್ ರೇವಣ್ಣ ಅಭಿಮಾನಿಗಳು… ಈ ವಿಡಿಯೋ ತಪ್ಪದೇ ನೋಡಿ.