Friday, October 18, 2024

Latest Posts

Team India: ಗೆದ್ದ ಟೀಂ ಇಂಡಿಯಾ : ತವರಿಗೆ ಬಾರದ ವಿಶ್ವಕಪ್!

- Advertisement -

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಇತಿಹಾಸದಲ್ಲಿ ಎರಡನೇ ಬಾರಿಗೆ T20 ವಿಶ್ವಕಪ್ ಟ್ರೋಫಿಯನ್ನು ಗೆದ್ದಿದೆ. ಒಂದು ಹಂತದಲ್ಲಿ ವಿಶ್ವಕಪ್ ಸೋತೆ ಬಿಟ್ಟೆವು ಎಂದು ಕೋಟ್ಯಂತರ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ, ಹಾರ್ದಿಕ್ ಪಾಂಡ್ಯಾ, ಜಸ್ಪ್ರೀತ್ ಬೂಮ್ರಾ ಹಾಗೂ ಅರ್ಷ್​ದೀಪ್ ಅಟ್ಯಾಕ್​ನಿಂದ ಭಾರತ ವಿಶ್ವಕಪ್ ಗೆದ್ದಿತು. ಕೆರಿಬಿಯನ್ ನಾಡಿನಲ್ಲಿ ರೋಹಿತ್ ಶರ್ಮಾ ಬಳಗ ವಿಶ್ವಕಪ್ ಎತ್ತಹಿಡಿದು ವಿಜಯೋತ್ಸವ ಆಚರಿಸಿತು. ಆದರೆ, ವಿಶ್ವಕಪ್ ಗೆದ್ದು ಎರಡು ದಿನಗಳಾದ್ರೂ ಟೀಂ ಇಂಡಿಯಾ ಆಟಗಾರರು ಭಾರತಕ್ಕೆ ಬಂದಿಲ್ಲ.

ಚಾಂಪಿಯನ್ ತಂಡವನ್ನು ಸ್ವಾಗತಿಸಲು ತವರಿನಲ್ಲಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ, ಬೆರಿಲ್ ಚಂಡಮಾರುತ ಟೀಂ ಇಂಡಿಯಾ ತವರಿಗೆ ಹಿಂತಿರುಗುವ ಯೋಜನೆಗೆ ಅಡ್ಡಿಪಡಿಸಿದೆ. ಹೀಗಾಗಿ, ಟೀಂ ಇಂಡಿಯಾ ಬಾಯ್ಸ್ ಗಯಾನಾದ ಬಾರ್ಬಡೋಸ್‌ನಲ್ಲಿ ಸಿಲುಕಿಕೊಂಡಿದ್ದಾರೆ.

ಅಟ್ಲಾಂಟಿಕ್‌ನಲ್ಲಿ ಹುಟ್ಟಿಕೊಂಡ ಬೆರಿಲ್ ಚಂಡಮಾರುತವು ಗರಿಷ್ಠ 210 ಕಿಮೀ ವೇಗದ ಗಾಳಿಯೊಂದಿಗೆ ತೀವ್ರಗೊಂಡಿದೆ ಎಂದು ವರದಿಗಳು ಬಹಿರಂಗಪಡಿಸಿವೆ. ಚಂಡಮಾರುತವು ಬಾರ್ಬಡೋಸ್‌ನ ಪೂರ್ವ-ಆಗ್ನೇಯಕ್ಕೆ 570 ಕಿಮೀ ದೂರದಲ್ಲಿದೆ. ಆದ್ದರಿಂದ, ಬ್ರಿಡ್ಜ್‌ಟೌನ್‌ನಲ್ಲಿರುವ ವಿಮಾನ ನಿಲ್ದಾಣವನ್ನು ಸಂಜೆ ಮುಚ್ಚಲಾಗುವುದು ಎಂದು ವರದಿಗಳು ತಿಳಿಸಿವೆ. ಭಾರತದ ಪ್ರಯಾಣದ ಯೋಜನೆಯನ್ನು ಆಧರಿಸಿ, ತಂಡವು ನ್ಯೂಯಾರ್ಕ್‌ನಿಂದ ದುಬೈ ಮೂಲಕ ಏಮಿರೇಟ್ಸ್ ವಿಮಾನವನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ತಂಡವು ಈಗ ಚಾರ್ಟರ್ ಫ್ಲೈಟ್‌ನಲ್ಲಿ ಮನೆಗೆ ಹಿಂತಿರುಗಲಿದೆ ಎಂದು ಬಿಸಿಸಿಐ ಮೂಲವು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದೆ. ಭಾರತೀಯರ ಟೀಂ ಗ್ರೂಪಿನಲ್ಲಿ ಆಟಗಾರರು, ಸಹಾಯಕ ಸಿಬ್ಬಂದಿಗಳು, ಆಟಗಾರರ ಕುಟುಂಬದವರು ಮತ್ತು ಅಧಿಕಾರಿಗಳು ಸೇರಿದಂತೆ 70 ಸದಸ್ಯರಿದ್ದಾರೆ.

ತಂಡವು ಬ್ರಿಡ್ಜ್‌ಟೌನ್​​ನಿಂದ ನ್ಯೂಯಾರ್ಕ್‌ಗೆ ಹೊರಟ ನಂತರ ದುಬೈ ಮೂಲಕ ಭಾರತವನ್ನು ತಲುಪಬೇಕಿತ್ತು. ಆದರೆ ಈಗ ಇಲ್ಲಿಂದ ನೇರವಾಗಿ ದೆಹಲಿಗೆ ಚಾರ್ಟರ್ ಫ್ಲೈಟ್ ಪಡೆಯುವ ಯೋಜನೆ ಇದೆ. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಚಿಂತನೆಯೂ ಇದೆ ಎಂದು ಸುದ್ದಿ ಮೂಲವೊಂದು ತಿಳಿಸಿದೆ. ಒಟ್ನಲ್ಲಿ ಭಾರತ ತಂಡ ಹಾಗೂ ವಿಶ್ವಕಪ್ ತವರಿಗೆ ಮರಳುವುದು ತಡವಾಗುತ್ತಿದೆ. ಬೆರಿಲ್ ಚಂಡಮಾರುತದಿಂದ ಬಾರ್ಬಡೋಸ್‌ನಲ್ಲಿ ಸಿಲುಕಿಕೊಂಡಿರುವ ಭಾರತ ತಂಡ ಹಾಗೂ ಒಟ್ಟೂ ಸದಸ್ಯರು ಸುರಕ್ಷಿತವಾಗಿ ತವರಿಗೆ ಮರಳಲಿ ಎನ್ನುವಂತಾಗಿದೆ.

- Advertisement -

Latest Posts

Don't Miss