ಸೌಥಾಂಪ್ಟನ್: ಅಂತಿಮ ಟೆಸ್ಟ್ ಪಂದ್ಯ ಕೈಚೆಲ್ಲಿದ ಟೀಮ್ ಇಂಡಿಯಾ ಇಂದಿನಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡಲಿದೆ.
ಟಿ20 ವಿಶ್ವಕಪ್ಗೆ ಇನ್ನು ಕೆಲವೆ ತಿಂಗಳು ಬಾಕಿ ಇರುವುದರಿಂದ ತಂಡವನ್ನು ಸಜ್ಜುಗೊಳಿಸಬೇಕಾಗಿದ್ದು ಸೂಕ್ತ ಆಟಗಾರರನ್ನು ಕಣಕ್ಕಿಳಿಸುವ ಕಾರ್ಯಕೈಗೊಳ್ಳಬೇಕಿದೆ.
ಟಿ20 ವಿಶ್ವಕಪ್ ಗೂ ಮುನ್ನ ಭಾರತಕ್ಕೆ 15 ಪಂದ್ಯಗಳು ಸಿಗಲಿದ್ದು ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ ಪ್ರತಿ ಪಾತ್ರಕ್ಕೂ ಸೂಕ್ತ ಆಟಗಾರನನ್ನು ಆಯ್ಕೆ ಮಾಡಬೇಕಿದೆ.
ಐದನೆ ಟೆಸ್ಟ್ ಪಮದ್ಯವನ್ನು ಸೋತಿದ್ದರಿಂದ ಭಾರತ ಭಾರೀ ಸವಾಲನ್ನು ಎದುರಿಸಲಿದೆ.
ಇಂಗ್ಲೆಂಡ್ ತಂಡ ಒಳ್ಳೆಯ ಲಯದಲ್ಲಿದ್ದು ಭಾರತವನ್ನು ಸೋಲಿಸುವ ಉತ್ಸಾಹದಲ್ಲಿದೆ. ಹೊಸ ಜೋಸ್ ಬಟ್ಲರ್ ತಮ್ಮ ತಂಡವನ್ನು ವಿಶ್ವಕಪ್ ಗೆ ಸಜ್ಜುಗೊಳಿಸಲು ಪಣತೊಟ್ಟಿದ್ದಾರೆ.
ಕೋವಿಡ್ ನಿಂದ ಚೇತರಿಸಿಕೊಂಡಿರುವ ರೋಹಿತ್ ಶರ್ಮಾ ಮೊದಲ ಟಿ20 ಪಂದ್ಯ ಆಡೋದು ಅನುಮಾನದಿಂದ ಕೂಡಿದೆ.
ಕೊಹ್ಲಿ, ಪಂತ್, ಜಸ್ಪ್ರೀತ್ ಬುಮ್ರಾ,ಜಡೇಜಾ ಮತ್ತು ಶ್ರೇಯಸ್ ಅಯ್ಯರ್ ಮೊದಲ ಟಿ20 ಪಂದ್ಯ ಆಡುತ್ತಿಲ್ಲ. ಹೀಗಾಗಿ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಗೆ ಅವಕಾಶ ಸಿಗಬಹುದು. ಐರ್ಲೆಂಡ್ ವಿರುದ್ಧ ಅಬ್ಬರಿಸಿದ್ದ ದೀಪಕ್ ಹೂಡಾ ಆಡುವ ಹನ್ನೊಂದರ ಬಳಗದಲ್ಲಿ ಆಡಲಿದ್ದಾರೆ. ಸೂರ್ಯ ಕುಮಾರ್ ಯಾದವ್ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ.
ಬೌಲಿಂಗ್ ವಿಭಾಗದಲ್ಲಿ ಅನುಭವಿ ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ಐರ್ಲೆಂಡ್ ವಿರುದ್ಧ ದುಬಾರಿ ಬೌಲರ್ ಗಳಾಗಿದ್ದರಿಂದ ಒತ್ತಡವಿದೆ. ಯುವ ವೇಗಿ ಉಮ್ರಾನ್ ಮಲ್ಲಿಕ್ ಬೌಲಿಂಗ್ ನಲ್ಲಿ ಸುಧಾರಿಸಿಕೊಳ್ಳಬೇಕಿದೆ.
ಚಹಲ್ ಸ್ಪಿನ್ ಮ್ಯಾಜಿಕ್ ಮಾಡಬೇಕಿದೆ.
ಬೆನ್ ಸ್ಟೋಕ್ಸ್, ಜಾನಿ ಬೇರ್ ಸ್ಟೊಗೆ ವಿಶ್ರಾಂತಿ ನೀಡಿದ್ದರೂ ತಂಡ ಬಲಿಷ್ಠವಾಗಿದೆ. ಲಿವೀಂಗ್ ಸ್ಟೋನ್, ಸ್ಯಾಮ್ ಕರ್ರನ್, ಅಲಿ, ಜಾಸನ್ ರಾಯ್, ಮಲಾನ್ ರಂತಹ ಸ್ಟಾರ್ ಆಟಗಾರರಿದ್ದಾರೆ.