ಶಮಿ, ರವೀಂದ್ರ ಜಡೇಜಾಗೆ ತಲಾ 3 ವಿಕೆಟ್:  ಲೀಸೆಸ್ಟರ್ ವಿರುದ್ಧ ಭಾರತ ಮೇಲುಗೈ 

ಲೀಸೆಸ್ಟರ್ :  ಮೊಹ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ಅವರ ದಾಳಿಗೆ ತತ್ತರಿಸಿದ ಆತಿಥೇಯ ಲೀಸೆಸ್ಟರ್ ತಂಡ ಮೊದಲ ಇನ್ನಿಂಗ್ಸ್‍ನಲ್ಲಿ  244 ರನ್‍ಗಳಿಗೆ ಆಲೌಟ್ ಆಗಿದೆ.

ಮೊದಲ ದಿನದಾಟದ ಪಂದ್ಯದಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್‍ನಲ್ಲಿ  8 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿತ್ತು. ಎರಡನೆ ದಿನದಾಟದ ಪಂದ್ಯದಲ್ಲಿ  ಭಾರತ 8 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ಮೊದಲ ಇನ್ನಿಂಗ್ಸ್‍ನಲ್ಲಿ  ಆರಂಭಿಸಿದ ಲೀಸೆಸ್ಟರ್ ತಂಡದ ಪರ  ಪಂತ್ 76, ರಿಷಿ ಪಟೇಲ್ 34, ರೊಮನ್ ವಾಕರ್ 34 ರನ್ ಗಳಿಸಿದರು.  ಭಾರತ ಶಮಿ 3, ರವೀಂದ್ರ ಜಡೇಜಾ 3, ಶಾರ್ದೂಲ್ ಠಾಕೂರ್ ಮತ್ತು ಮೊಹ್ಮದ್ ಸಿರಾಜ್ ತಲಾ 2 ವಿಕೆಟ್ ಪಡೆದರು.

ಎರಡನೆ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡದ ಪರ ಶ್ರೀಕರ ಭಾರತ್ ಅಜೇಯ 31, ಶುಭಮನ್ ಗಿಲ್ 38, ಹನುಮ ವಿಹಾರಿ ಅಜೇಯ 9 ರನ್ ಗಳಿಸಿದರು. ಭಾರತ 1 ವಿಕೆಟ್ ನಷ್ಟಕ್ಕೆ  80 ರನ್ ಗಳಿಸಿದೆ.  ಭಾರತ 82 ರನ್‍ಗಳ ಮುನ್ನಡೆ ಪಡೆದಿದೆ.

About The Author