ಹೊಸದಿಲ್ಲಿ: ಡೇವಿಡ್ ಮಿಲ್ಲರ್ ಹಾಗೂ ವಾನ್ ಡೆರ್ ಡುಸನ್ ಅವರ ಸೋಟಕ ಬ್ಯಾಟಿಂಗ್‍ಗೆ ತತ್ತರಿಸಿದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್‍ಗಳ ಸೋಲು ಅನುಭವಿಸಿದೆ.
ಸತತ 12ನೇ ಪಂದ್ಯ ಗೆದ್ದಿದ್ದ ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದ್ದು ದಾಖಲೆ ಬರೆಯುವ ಕನಸು ಭಗ್ನಗೊಂಡಿತು.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್‍ಗಳಲ್ಲಿ 4ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತು. ದ.ಆಫ್ರಿಕಾ ತಂಡ 19.1 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.
ಮಿಲ್ಲರ್, ಡುಸೆನ್ ಅಬ್ಬರದ ಬ್ಯಾಟಿಂಗ್
212 ರನ್‍ಗಳ ಬೃಹತ್ ಮೊತ್ತ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತಮ ಆರಂಭ ಸಿಗದೇ ಆಘಾತ ಅನುಭವಿಸಿತು. ಕ್ವಿಂಟಾನ್ ಡಿಕಾಕ್ (22) ಅಕ್ಷರ್ ಪಟೇಲ್‍ಗೆ ವಿಕೆಟ್ ಒಪ್ಪಿಸಿದರು. ನಾಯಕ ಟೆಂಬಾ ಬಾವುಮಾ 10, ಡ್ವೇನ್ ಪ್ರಿಟೋರಿಯಸ್ 29 ರನ್ ಗಳಿಸಿ ಪೆವಿಲಿಯನ್ ಸೇರಿದರು. 81 ರನ್‍ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜೊತೆಗೂಡಿದ ರಾಸಿ ವೆನ್ ಡೆರ್ ಡುಸೆನ್ ಮತ್ತು ಡೇವಿಡ್ ಮಿಲ್ಲರ್ ಭಾರತೀಯ ಬೌಲರ್‍ಗಳನ್ನು ಚೆಂಡಾಡಿದರು.
ಸ್ಫೋಟಕ ಬ್ಯಾಟಿಂಗ್ ಮಾಡಿದ ಡೇವಿಡ್ ಮಿಲ್ಲರ್ ಕೇವಲ 22 ಎಸೆತದಲ್ಲಿ ಅರ್ಧ ಶತಕ ಪೂರೈಸಿದರು. ಇವರಿಗೆ ಒಳ್ಳೆ ಸಾಥ್ ನೀಡಿದ ರಾಸಿ ವೆನ್ ಡೆರ್ ಡುಸೆನ್ 37 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.
ಕೊನೆಯಲ್ಲಿ 6 ಎಸೆತದಲ್ಲಿ 4 ರನ್ ಬೇಕಿದ್ದಾಗ ಚಾಹಲ್ ಎಸೆತದಲ್ಲಿ ವಾನ್ ಡೆರ್ ಡುಸೆನ್ ಬೌಂಡರಿ ಹೊಡೆಯುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ದಕ್ಷಿಣ ಆಫ್ರಿಕಾ 19.1 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ದ.ಆಫ್ರಿಕಾ ಅತಿ ಹೆಚ್ಚು ರನ್ ಚೇಸಿಂಗ್ ಮಾಡಿದ ಸಾಧನೆ ಮಾಡಿತು.
ಇಶನ್ ಕಿಶನ್ ಅರ್ಧ ಶತಕ
ಭಾರತ ಪರ ಕಣಕ್ಕಿಳಿದ ಇಶನ್ ಕಿಶನ್ ಹಾಗೂ ಋತುರಾಜ್ ಗಾಯಕ್ವಾಡ್ ಮೊದಲ ವಿಕೆಟ್‍ಗೆ 57 ರನ್‍ಗಳ ಭರ್ಜರಿ ಆರಂಭ ನೀಡಿದರು.
23 ರನ್ ಗಳಿಸಿದ್ದ ಋತುರಾಜ್ ಗಾಯಕ್ವಾಡ್ ಪಾರ್ನೆಲ್‍ಗೆ ವಿಕೆಟ್ ಒಪ್ಪಿಸಿದರು. ಮೂರನೆ ಕ್ರಮಾಂಕದಲ್ಲಿ ಬಂದ ಶ್ರೇಯಸ್ ಅಯ್ಯರ್ 36 ರನ್ ಗಳಿಸಿ ಪ್ರಿಟೋರಿಯಸ್ ಎಸೆತದಲ್ಲಿ ಬೌಲ್ಡ್ ಆದರು. ಸ್ಪೋಟಕ ಬ್ಯಾಟಿಂಗ್ ಮಾಡಿದ ಇಶನ್ ಕಿಶನ್ 37 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಒಟ್ಟು ಬೌಂಡರಿ 11 ಬೌಂಡರಿ , 3 ಸಿಕ್ಸರ್ ಸಹಿತ ಒಟ್ಟು 76 ರನ್ ಗಳಿಸಿ ಮಹಾರಾಜ್‍ಗೆ ವಿಕೆಟ್ ಒಪ್ಪಿಸಿದರು.
ನಾಯಕ ರಿಷಭ ಪಂತ್ 29, ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಅಜೇಯ 31 ಹಾಗೂ ದಿನೇಶ್ ಕಾರ್ತಿಕ್ ಅಜೇಯ 1 ರನ್ ಗಳಿಸಿದರು. ಭಾರತ ನಿಗದಿತ 20 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ ಗಳಿಸಿತು.
8ನೇ ಟಿ20 ನಾಯಕನಾಗಿ ಪಂತ್
ದ.ಆಫ್ರಿಕಾ ವಿರುದ್ಧ ಹಂಗಾಮಿ ನಾಯಕನಾಗಿ ಕಾರ್ಯನಿರ್ವಹಿಸುವ ಮೂಲಕ ರಿಷಭ ಪಂತ್ ಟಿ20 ಆವೃತ್ತಿಯಲ್ಲಿ ತಂಡದ 8ನೇ ನಾಯಕ ಎಂಬ ಗೌರವಕ್ಕೆ ಪಾತ್ರರಾದರು. ಇದರೊಂದಿಗೆ ಪಂತ್ ನಾಯಕತ್ವ ವಹಿಸಿದ ತಂಡದ ಎರಡನೆ ಕಿರಿಯ ನಾಯಕ ಎನಿಸಿದರು. 2007ರಲ್ಲಿ ಮಾಜಿ ನಾಯಕ `ಧೋನಿ ತಂಡದ ಅತಿ ಕಿರಿಯ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು.