ಟಿ20 ಸರಣಿ :ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ

ಹೊಸದಿಲ್ಲಿ: ಮುಂಬರುವ ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ಕ್ರಿಕೆಟ್ ತಂಡ ಅಭ್ಯಾಸ ಆರಂಭಿಸಿದೆ.  ಭಾನುವಾರ ರಾಷ್ಟ್ರರಾಜಧಾನಿಗೆ ಟೀಮ್ ಇಂಡಿಯಾ ಆಟಗಾರರು ಆಗಮಿಸಿದರು.

ಜೂ.9ರಿಂದ ಸರಣಿ ಆರಂಭವಾಗಲಿದ್ದು  ದ.ಆಫ್ರಿಕಾ ವಿರುದ್ಧ  5 ಟಿ20 ಪಂದ್ಯಗಳನ್ನು ಆಡಲಿದೆ.

ಸೋಮವಾರ  ತಂಡದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ  ಟೀಮ್ ಇಂಡಿಯಾ ಅಭ್ಯಾಸ ನಡೆಸಿದೆ.  ನಾಯಕ ಕೆ.ಎಲ್.ರಾಹುಲ್ ಜೊತೆ ಯುವ ಆಟಗಾರರಾದ ಆರ್ಷದೀಪ್ ಸಿಂಗ್, ಉಮ್ರಾನ್ ಮಲ್ಲಿಕ್ ಅಭ್ಯಾಸ ನಡೆಸುತ್ತಿದ್ದಾರೆ.

ಅನುಭವಿಗಳಾದ `ಭುವನೇಶ್ವರ್ ಕುಮಾರ್ ಮತ್ತು ದಿನೇಶ್ ಕಾರ್ತಿಕ್ 3 ವರ್ಷಗಳ ಬಳಿಕ ತಂಡ ಸೇರಿಕೊಂಡಿದ್ದಾರೆ.

ಈ ಟೂರ್ನಿಯಲ್ಲಿ ಯುವ ಆಟಗಾರರಾದ  ಉಮ್ರಾನ್ ಮಲ್ಲಿಕ್, ಆರ್ಷದೀಪ್ ಸಿಂಗ್, ಆವೇಶ್ ಖಾನ್  ಮತ್ತು ಹರ್ಷಲ್ ಪಟೇಲ್ ಕೇಂದ್ರಬಿಂದುವಾಗಿದ್ದಾರೆ.

ಯಜ್ವಿಂದರ್ ಚಾಹಲ್ ಹಾಗೂ ಕುಲದೀಪ್ ಯಾದವ್ ಮತ್ತೆ ತಂಡಕ್ಕೆ ಮರಳಿದ್ದಾರೆ. ಮತ್ತೊರ್ವ ಯುವ ಸ್ಪಿನ್ನರ್ ರವಿ ಬಿಷ್ಣೋಯಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಹೋರಾಡಲಿದ್ದಾರೆ.

About The Author