ಲಂಡನ್:ಇಂದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ.ಮೂರು ಪಂದ್ಯಗಳ ಸರಣಿಗೆ ದಿ ಓವೆಲ್ ಮೈದಾನ ಆತಿಥ್ಯ ವಹಿಸಲಿದೆ.
ಟಿ20 ಸರಣಿ ಗೆದ್ದಿರುವ ರೋಹಿತ್ ಪಡೆ ಏಕದಿನ ಸರಣಿಯನ್ನೂ ವಶಪಡಿಸಿಕೊಳ್ಳಲು ಯೋಜನೆ ರೂಪಿಸಿದೆ. ಇತ್ತಿ ಟಿ20 ಸರಣಿ ಕೈಚೆಲ್ಲಿರುವ ಇಂಗ್ಲೆಂಡ್ ಸೇಡು ತೀರಿಸಿಕೊಳ್ಳಲು ಕಾದು ಕುಳಿತಿದೆ.
ಆಂಗ್ಲರ ವಿರುದ್ಧದ ಸರಣಿಯಲ್ಲಿ ಹೆಚ್ಚೆನು ಬದಲಾವಣೆ ಇರುವುದಿಲ್ಲ. ಭಾರತ ಆಕ್ರಮಣಕಾರಿ ನಡೆಯನ್ನು ಮುಂದುವರೆಸದೆ ಇರಲು ಯಾವುದೇ ಕಾರಣಗಳಿಲ್ಲ.
2023ರ ಏಕದಿನ ವಿಶ್ವಕಪ್ನಲ್ಲಿ ಭಾರತ ನೆಚ್ಚಿನ ತಂಡ ಆಗಬೇಕಿದ್ದಲ್ಲಿ ಭಾರತ ತನ್ನ ಆಟದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಆ ಬದಲಾವಣೆ ಈ ಸರಣಿ ಮೂಲಕ ಆಗಬೇಕಿದೆ.
ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿಯಲಿರುವ ಶಿಖರ್ ಧವನ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬೇಕಿದೆ. ಮೊದಲ ಪಂದ್ಯಕ್ಕೆ ವಿರಾಟ್ ಕೊಹ್ಲಿ ಗಾಯಗೊಂಡಿರುವುದರಿಂದ ಶ್ರೇಯಸ್ ಅಯ್ಯರ್ ಅವರ ಸ್ಥಾನ ತುಂಬಲಿದ್ದಾರೆ.
ಇನ್ನು ತಂಡದ ಇತರೆ ಆಟಗಾರರಾದ ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ಜಡೇಜಾ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.
ಸೇಡಿಗಾಗಿ ಕಾದು ಕುಳಿತಿರುವ ಬಟ್ಲರ್ ಪಡೆಗೆ ಇಂಗ್ಲೆಂಡ್ ಗೆ ಸ್ಟೋಕ್ಸ್, ಮತ್ತು ರೂಟ್ ಬಲ ಬಂದಿದೆ. ಪೂರ್ಣಾವಧಿ ನಾಯಕನಾದ ನಂತರ ಜೋಸ್ ಬಟ್ಲರ್ ನಾಯಕತ್ವ ಜೊತೆಗೆ ವೈಯಕ್ತಿಕ ಪ್ರದರ್ಶನದ ಮೇಲೆ ಗಮನ ನೀಡಬೇಕಿದೆ. ಆತಿಥೇಯರಿಂದ ಕಠಿಣ ಸವಾಲು ಎದುರಾಗಲಿದ್ದು ರೋಹಿತ್ ಪಡೆಯ ಪ್ರದರ್ಶನ ಕುತೂಹಲ ಕೆರೆಳಿಸಿದೆ.