Sunday, September 8, 2024

Latest Posts

ಸೂರ್ಯನ ಪ್ರತಾಪಕ್ಕೆ ಕರಗಿದ ಹಾಂಗ್ ಕಾಂಗ್

- Advertisement -

ದುಬೈ:ಸೂರ್ಯ ಕುಮಾರ್ ಯಾದವ್ ಅವರ ಸ್ಫೋಟಕ ಬ್ಯಾಟಿಂಗ್ ನೆರೆವಿನಿಂದ ಟೀಮ್ ಇಂಡಿಯಾ ಏಷ್ಯಾಕಪ್ ಟೂರ್ನಿಯಲ್ಲಿ ಹಾಂಗ್ ಕಾಂಗ್ ವಿರುದ್ಧ 40 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ ಸತತ  ಎರಡನೆ ಗೆಲುವು ದಾಖಲಿಸಿದೆ.

ಇಲ್ಲಿನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹಾಂಗ್ ಕಾಂಗ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ (21 ರನ್) ಮತ್ತು ಕೆ.ಎಲ್.ರಾಹುಲ್ (36 ರನ್) ಮೊದಲ ವಿಕೆಟ್ ಗೆ 38 ರನ್ಗಳ ಆರಂಭ ನೀಡಿದರು.

ನಂತರ ಬಂದ ವಿರಾಟ್ ಕೊಹ್ಲಿ ಮತ್ತು ಸೂರ್ಯ ಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಸ್ಪೋಟಕ ಬ್ಯಾಟಿಂಗ್ ಮಾಡಿದ ಸೂರ್ಯ ಕುಮಾರ್ 22 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರೆ, ವಿರಾಟ್ ಕೊಹ್ಲಿ  40 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.

ಕೊನೆಯಲ್ಲಿ ವಿರಾಟ್ ಕೊಹ್ಲಿ ಅಜೇಯ 59, ಸೂರ್ಯಕುಮಾರ್ ಅಜೇಯ 68 ರನ್ ಗಳಿಸಿದರು. ಭಾರತ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು.

193 ರನ್ ಗುರಿ ಬೆನ್ನತ್ತಿದ ಹಾಂಗ್ ಕಾಂಗ್ ಪರ ನಿಜಖಾತ್ ಖಾನ್ 10, ಯಾಸೀಮ್ ಮುರ್ತಾಜಾ 9,ಬಾಬರ್ ಹಾಯತ್ 41, ಕಿನ್ಚಿಟ್ ಶಾ 30, ಅಐಜಾಜ್ ಖಾನ್ 14, ಜೀಶನ್ ಅಲಿ ಅಜೇಯ 26 ರನ್್, ಸ್ಕಾಟ್ ಮೆಕೆನ್ಜಿ ಅಜೇಯ 16 ರನ್ ಗಳಿಸಿದರು.

ಹಾಂಗ್ ಕಾಂಗ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ಭಾರತ ಪರ ಭುವನೇಶ್ವರ್,ಆರ್ಷದೀಪ್,ರವೀಂದ್ರ ಜಡೇಜಾ ಮತ್ತು ಆವೇಶ್ ಖಾನ್ ತಲಾ 1 ವಿಕೆಟ್ ಪಡೆದರು.

- Advertisement -

Latest Posts

Don't Miss