Friday, June 20, 2025

Latest Posts

Tech News: ನಿಮ್ಮ ಮನೆಯ ಹಿರಿಯರಿಗೆ ಈ ರೀತಿಯ ಸ್ಮಾರ್ಟ್ ಊರುಗೋಲು ತಂದು ಕೊಡಿ

- Advertisement -

Tech News: ಮನೆಯಲ್ಲಿ ಹಿರಿಯರು ಇದ್ದಾಗ ಅವರಿಗೆ ನಡೆಯಲು ಕಷ್ಟವಾಗುತ್ತದೆ ಎಂದು ನಾವು ಅವರಿಗೆ ಸಾಮಾನ್ಯವಾಾದ ಊರುಗೋಲು ತಂದುಕ“ಡುತ್ತೇವೆ. ಆದರೆ ಇಂದಿನ ಕಾಲದಲ್ಲಿ ಎಲ್ಲವೂ ಸ್ಮಾರ್ಟ್ ಆಗಿರುವಾಗ, ಊರುಗೋಲು ಸ್ಮಾರ್ಟ್ ಆಗಿರೋದು ಬೇಡ್ವಾ. ಹೌದು.. ಈಗ ನಿಮಗೆ ಸ್ಮಾರ್ಟ್ ಆಗಿರುವ ಊರುಗೋಲು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಈ ಸ್ಮಾರ್ಟ್ ಊರುಗೋಲಿನ ವಿಶೇಷತೆ ಏನು ಅಂದ್ರೆ ನಿಮ್ಮ ಮನೆಯ ಹಿರಿಯರು ನಡೆಯುವಾಗ ಬಿದ್ದರು, ಅಥವಾ ಯಾವುದೇ ತ“ಂದರೆಗೆ ಒಳಗಾದರೆ, ಅವರು ಈ ಊರುಗೋಲಿಗೆ ಇರುವ ಬಟನ್ ಪ್ರೆಸ್ ಮಾಡಿದ್ರೆ ಸಾಕು, ಆ ಶಬ್ದ ಇಡೀ ಮನೆಗೆ ಕೇಳಿ, ಸೈರನ್ ಕೇಳಿದವರು ಹಿರಿಯರ ಬಳಿ ಓಡಿಹೋಗಬಹುದು.

ಎರಡನೇಯದಾಗಿ ರಾತ್ರಿ ಅಥವಾ ಕತ್ತಲಲ್ಲಿ ಊರುಗೋಲು ಹಿಡಿದು ಹೋಗುವಾಗ, ಇದಕ್ಕೆ ಅಳವಡಿಸಿರುವ ಟಾರ್ಚ್ ಬಳಸಬಹುದು. ಬೇರೆ ಟಾರ್ಚ್ ಬಳಸಬೇಕು ಅಂತೇನಿಲ್ಲ.

ಮೂರನೇಯದಾಗಿ ಇದರಲ್ಲಿ ಎಫ್‌ಎಂ ಮತ್ತು ಹಾಡು, ನ್ಯೂಸ್ ಎಲ್ಲವನ್ನು ಕೇಳಬಹುದು. ಹಿರಿಯರಿಗೆ ಬೇಕಾದ ಹಳೆಯ ಹಾಡುಗಳನ್ನು ಸಹ ಇದರಲ್ಲಿ ಕೇಳಬಹುದು.

ಇನ್ನು ನಾಲ್ಕನೇಯದಾಗಿ ಇದನ್ನು ಎಷ್ಟು ಬೇಕೋ ಅಷ್ಟು ಉದ್ದ, ಗಿಡ್ಡ ಮಾಡಬಹುದು. 120 ಕೆಜಿ ತಡೆದುಕ“ಳ್ಳಬಲ್ಲ ಶಕ್ತಿ ಈ ಊರುಗೋಲಿಗಿದೆ. ಇನ್ನು ಇದನ್ನು ಚಾರ್ಚ್ ಮಾಡಿ ಬಳಸಬೇಕು. ಇದಕ್ಕೆ ಬೆಲೆ ಎಷ್ಟು ಅಂದ್ರೆ 2ರಿಂದ 3 ಸಾವಿರದ ತನಕ ಇರುತ್ತದೆ.

- Advertisement -

Latest Posts

Don't Miss