Friday, December 5, 2025

Latest Posts

Tech News: ಈ ಸಲ ದೀಪಾವಳಿಗೆ ಈ ವಸ್ತುಗಳಿಂದ ಮನೆ ಕ್ಲೀನ್ ಮಾಡಿ

- Advertisement -

Tech News: ದೀಪಾವಳಿಗೆ ಮನೆ ಎಲ್ಲ ಕ್ಲೀನ್ ಮಾಡುವುದು ವಾಡಿಕೆ. ಎಲ್ಲ ಹಬ್ಬಗಳಿಗೂ ಮನೆ ಕ್ಲೀನ್ ಮಾಡುತ್ತಾರೆ. ಆದರೆ ದೀಪಾವಳಿ ಲಕ್ಷ್ಮೀ ಪೂಜೆ ಅಂದ್ರೆ ಸ್ವಲ್ಪ ಸ್ಪೆಶಲ್. ಹಾಗಾಗಿ ಇಂದು ನಾವು ಮನೆ ಕ್ಲೀನ್ ಮಾಡಲು ಸುಲಭವಾಗಿಸಬಹುದಾದ ಕೆಲವು ವಸ್ತುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಸ್ಟೀಮ್ ಕ್ಲೀನರ್: ಸ್ಟೀಮ್ ಕ್ಲೀನರ್ ಬಳಸಿ, ನೀವು ಸೋಫಾ, ಮ್ಯಾಟ್ ಎಲ್ಲವನ್ನೂ ಕ್ಲೀನ್ ಮಾಡಬಹುದು. ಇದರಲ್ಲಿ ನೀರು ಹಾಕಿ, ಸ್ವಿಚ್ ಆನ್ ಮಾಡಿದ್ರೆ, ವಿದ್ಯುತ್ ಮೂಲಕ, ನೀವು ಸೋಫಾ, ಬೆಡ್, ಮ್ಯಾಟ್ ಹಲವು ವಸ್ತುಗಳನ್ನು ಕ್ಲೀನ್ ಮಾಡಬಹುದು. ಇದರಲ್ಲಿ ಬೇರೆ ಬೇರೆ ರೀತಿಯ ಕ್ಲೀನಿಂಗ್ ಬ್ರಶ್ ಇದ್ದು, ಸ್ಟೋವ್ ಕೂಡ ಕ್ಲೀನ್ ಮಾಡಬಹುದು.

ಮೆಶ್ ಕ್ಲೀನಿಂಗ್ ಬ್ರಶ್: ನಿಮ್ಮ ಮನೆಯಲ್ಲಿ ನೆಟ್ ಡೋರ್ ಇದ್ದರೆ, ಅಥವಾ ಕಿಟಕಿಗೆ ನೆಟ್ ಕವರ್ ಹಾಕಿದರೆ, ಅದನ್ನು ಸುಲಭವಾಗಿ ಕ್ಲೀನ್ ಮಾಡಲು ಆಗುವುದಿಲ್ಲ. ಹಾಗಾಗಿ ನೀವು ಮೆಶ್ ಕ್ಲೀನಿಂಗ್ ಬ್ರಶ್ ಖರೀದಿಸಿದರೆ, ಸುಲಭವಾಗಿ ನೆಟ್ ಕವರ್ ಕ್ಲೀನ್ ಮಾಡಬಹುದು.

ಫರ್ನಿಚರ್ ಮೂವಿಂಗ್ ಟೂಲ್: ಮನೆ ಕ್ಲೀನ್ ಮಾಡುವಾಗ, ಸೋಫಾ, ವಾಶಿಂಗ್ ಮಷಿನ್, ಫ್ರಿಜ್ ಎಲ್ಲವನ್ನೂ ಆಚೆ ಈಚೆ ಸರಿಸಬೇಕು. ಇದು ಸ್ವಲ್ಪ ಕಷ್ಟದ ಕೆಲಸ. ಆದರೆ ನೀವು ಫರ್ನಿಚರ್ ಮೂವಿಂಗ್ ಟೂಲ್ ಬಳಸಿ, ಈ ವಸ್ತುಗಳನ್ನೆಲ್ಲಾ ಯಾರ ಸಹಾಯವೂ ಇಲ್ಲದೇ, ಆರಾಮವಾಗಿ ಆಚೆ ಈಚೆ ಇಡಬಹುದು.

ಮ್ಯಾಗ್ನೇಟಿಕ್ ವಿಂಡೋ ಕ್ಲೀಯರ್: ಮ್ಯಾಗ್ನೇಟಿಕ್ ವಿಂಡೋ ಕ್ಲೀಯರ್ ಸೂಪರ್ ಟೂಲ್ ಅಂತಾನೇ ಹೇಳಬುಹುದು. ಯಾಕಂದ್ರೆ ಗಾಜಿನಿಂದ ಕವರ್ ಆಗಿರುವ ಮೂವಿಂಗ್ ಕಿಟಕಿ ಕ್ಲೀನ್ ಮಾಡೋದು 1 ಸಾಹಸವೇ ಸರಿ. ಮುಂದೆ ಗಾಜು ಕ್ಲೀನ್ ಮಾಡಿದ್ರೆ ಹಿಂದೆ ಗಲೀಜಾಗುತ್ತದೆ. ಹಿಂದೆ ಕ್ಲೀನ್ ಮಾಡಲು ಹೋದ್ರೆ, ಮುಂದಿನ ಕಿಟಕಿ ಶೈನ್ ಕಡಿಮೆ ಎನ್ನಿಸುತ್ತದೆ. ಆದರೆ ನೀವು ಮ್ಯಾಗ್ನೇಟಿಕ್ ವಿಂಡೋ ಕ್ಲೀಯರ್ ಖರೀದಿ ಮಾಡಿದ್ರೆ, ಇದರ ಸಹಾಯದಿಂದ ಸುಲಭವಾಗಿ ಮತ್ತು ಸ್ವಚ್ಛವಾಗಿ ನೀವು ವಿಂಡೋ ಕ್ಲೀನ್ ಮಾಡಬಹುದು.

- Advertisement -

Latest Posts

Don't Miss