Temple: ಮಂಗಳದೋಷವಿದ್ದರೆ, ಬೇಗ ವಿವಾಹವಾಗುವುದಿಲ್ಲ. ವಿವಾಹವಾದರೂ ಜೀವನ ಚೆನ್ನಾಗಿರುವುದಿಲ್ಲ. ಅಥವಾ ಎರಡೆರಡು ಮದುವೆಯಾಗುತ್ತದೆ. ಜಾತಕ ತೋರಿಸಿದಾಗ, ನಿಮ್ಮ ಜಾತಕದಲ್ಲಿ ಮಂಗಳ ದೋಷವಿದೆಯಾ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆ ರೀತಿ ಮಂಗಳದೋಷವಿದ್ದಲ್ಲಿ, ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರಂತೆ. ಹಾಾಗಾದ್ರೆ ಯಾವುದು ಆ ದೇವಸ್ಥಾನವೆಂದು ತಿಳಿಯೋಣ ಬನ್ನಿ..
ಮಹಾರಾಷ್ಟ್ರದ ಅಲಮ್ನೇರ್ ಎಂಬಲ್ಲಿ ಮಂಗಳನ ದೇವಸ್ಥಾನವಿದೆ. ಇದನ್ನು ಅಲಮ್ನೇರ್ ಮಂಗಲ್ ದೇವಸ್ಥಾನ ಅಂತ ಕರೆಯುತ್ತಾರೆ. ಮಂಗಳ ದೋಷವಿದ್ದಾಗ, ಮದುವೆ ತಡವಾಗುತ್ತದೆ. ಅಲ್ಲದೇ, ಮದುವೆಯಾದ ಬಳಿಕ ಇಬ್ಬರಲ್ಲಿ ಒಬ್ಬರು ಬೇಗ ಮರಣ ಹೊಂದುತ್ತಾರೆ. ಅಥವಾ ದೂರವಾಗುತ್ತಾರೆ ಅಂತಾ ಹೇಳಲಾಗುತ್ತದೆ. ಹಾಗಾಗಿ ಮೊದಲು ಯಾವುದಾದರೂ ಗಿಡಕ್ಕೆ ಮದುವೆ ಮಾಡಿಸಿ, ಬಳಿಕ ಅದನ್ನು ಕಡಿದು, ವಧು ವರನಿಗೆ ವಿವಾಹ ಮಾಡಿಸಲಾಗುತ್ತದೆ.
ಏನೇ ಮಾಡಿದರೂ ದಾಂಪತ್ಯ ಜೀವನ ಚೆನ್ನಾಗಿಲ್ಲವೆಂದಲ್ಲಿ, ಈ ದೇವಸ್ಥಾನಕ್ಕೆ ಬಂದು, ಪೂಜೆ ಅಭಿಷೇಕ ಮಾಡಿಸಿದ್ದಲ್ಲಿ, ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಈ ದೇವಸ್ಥಾನಕ್ಕೆ ಬೇರೆ ಬೇರೆ ರಾಜ್ಯಗಳಿಂದಲೂ ಜನ ಬಂದು, ವಿಶೇಷ ಪೂಜೆ ಮಾಡಿಸುತ್ತಾರೆ.