Hubballi News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಿವಿಧ ಆಸ್ಪತ್ರೆಗಳಿಗೆ ತಾತ್ಕಾಲಿಕವಾಗಿ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕ ಹಿಂತೆಗೆದುಕೊಳ್ಳಲಾಗಿದೆ.
ಸರ್ಕಾರದ ಅಧಿಕೃತ ಟಿಪ್ಪಣಿ ಅನುಸಾರ, ಮೌಲ್ಯಮಾಪನ ಸಮಿತಿ ಸದಸ್ಯರು ಚರ್ಚಿಸಿರುವಂತೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಿವಿಧ ಆಸ್ಪತ್ರೆಗಳಿ,ಗೆ ತಾತ್ಕಾಲಿಕವಾಗಿ ವೈದ್ಯಕೀಯ ಸಿಬ್ಬಂದಿಗಳ ನೇಮಕಾತಿಗೆ ಸಂಬಂಧಿಸಿದಂತೆ, ಮೀಸಲಾತಿ ಕಲ್ಪಿಸಿರುವುದರ ಕುರಿತು, ಕೂಲಂಕುಷವಾಗಿ ಪರಿಶೀಲಿಸಿ, ಅದರಂತೆ ಮತ್ತೊಮ್ಮೆ ಸರ್ಕಾರದ ಸುತ್ತೋಲೆಗಳು, ಆದೇಶಗಳು, ಟಿಪ್ಪಣೆಗಳ ರೀತೃ ಪರಿಶೀಲಿಸಿ ಹೊಸದಾಗಿ ನೇಮಕಾತಿ ಪ್ರಕಟಣೆ ಮಾಡಿ, ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ, ಪಾಲಿಕೆಯ ವಿವಿಧ ಆಸ್ಪತ್ರೆಗಳಿಗೆ ತಾತ್ಕಾಲಿಕವಾಗಿ ವೈದ್ಯರು ಮತ್ತು ಆರೆ ವೈದ್ಯಕೀಯ ಸಿಬ್ಬಂದಿಗಳ ನೇಮಕಾತಿ ಮಾಡುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ. ಹೆಚ್ಚಿನ ಮಾಹಿತಿಗೆ ಪಾಲಿಕೆಯ ಅಧೀಕೃತ ವೆಬ್ ಸೈಟ್ www.hdmc.mrc.gov.in ವೀಕ್ಷಿಸಬಹುದಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ಪೇದೆ ಆರೋಗ್ಯಕ್ಕಾಗಿ “ಲಕ್ಷ” ರೂಪಾಯಿ ನೀಡಿದ ಡಿಸಿಪಿ ರವೀಶ ಸಿಆರ್…!
ಬಿಜೆಪಿಗೆ ಮತ್ತೆ ಮಗ್ಗುಲ ಮುಳ್ಳಾದ ಪುತ್ತಿಲ ಪರಿವಾರ, ಲೋಕಸಭೆಗೆ ಪಕ್ಷೇತರವಾಗಿ ಸ್ಪರ್ಧಿಸಲು ಪ್ಲಾನ್ ರೆಡಿ!



