ಪಾಕ್ ಕುತಂತ್ರದ ವಾಸನೆ ದೇಶಾದ್ಯಂತ ದಿಢೀರ್ ಭದ್ರತೆ

ದೇಶಾದ್ಯಂತ ಸಂಜೆಯಿಂದ ದಿಢೀರ್ ಭದ್ರತೆಯನ್ನ ಹೆಚ್ಚಳ ಮಾಡಲಾಗಿದೆ.. ಬೆಂಗಳೂರು ಸೇರಿದಂತೆ ಸಾವಿರಾರು ಕಡೆ ಕಟ್ಟೆಚ್ಚರವನ್ನ ವಹಿಸಲಾಗಿದೆ. ಭಯೋತ್ಪಾದಕರು ದೇಶಾದ್ಯಂತ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆ ಮುನ್ನಚ್ಚರಿಕಾ ಕ್ರಮವಾಗಿ ಬೆಂಗಳೂರಿನಾದ್ಯಂತ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370, 35ಎ ರದ್ದು ಮಾಡಿದ ಹಿನ್ನಲೆ ಪಾಕಿಸ್ತಾನ ಗಡಿಯಲ್ಲಿ ಸೇನಾ ಜಮಾವಣೆಯನ್ನ ಹೆಚ್ಚಿಸಿದೆ.. ಇಂದು ಕೇಂದ್ರ ಸಚಿವ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.. ಈ ಬೆನ್ನಲ್ಲೇ ದೇಶದ ಒಳಗೆ ಸ್ಲೀಪರ್ ಸೆಲ್ ನಲ್ಲಿ ಅಡಗಿರುವ ಉಗ್ರರು ಯಾವುದೇ ಕ್ಷಣದಲ್ಲಿ ವಿದ್ವಂಸಕ ಕೃತ್ಯ ಎಸಗಬಹುದಾಗಿದ್ದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚನೆ ಕೊಟ್ಟಿದೆ.

About The Author