ರಷ್ಯಾದ ಚರ್ಚ್ ಮೇಲೆ ಭಯೋತ್ಪಾದಕ ದಾಳಿ: 15 ಪೊಲೀಸರು ಸೇರಿ ಹಲವರ ಸಾವು

International News: ರಷ್ಯಾದಲ್ಲಿ ಚರ್ಚ್ ಮತ್ತು ಯಹೂದಿಗಳ ಪ್ರಾರ್ಥನಾ ಮಂದಿರದ ಮೇಲೆ ದಾಳಿ ನಡೆಸಿದ್ದು, 15 ಪೊಲೀಸರು ಸೇರಿ, ಹಲವರು ಸಾವಿಗೀಡಾಗಿದ್ದಾರೆ.

ಉಗ್ರರು ಈ ದಾಳಿ ನಡೆಸಿದ ಹಿನ್ನೆಲೆ ಈ ಅನಾಹುತವಾಗಿದ್ದು, ಚರ್ಚ್‌ಗೆ ಬಂದಿದ್ದ ಭಕ್ತರ ಮೇಲೆ ಹಿಗ್ಗಾಮುಗ್ಗಾ ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲದೇ ಪೊಲೀಸ್ ಸ್ಟೇಶನ್‌ ಮೇಲೂ ದಾಳಿಗಳಾಗಿದೆ. ಹೀಗಾಗಿ 15 ಜನ ಪೊಲೀಸರು ಸೇರಿ, ಹಲವರು ಸಾವನ್ನಪ್ಪಿದ್ದು, 13ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಅಲ್ಲದೇ, ಈ ಘಟನೆ ನಡಡೆಯುವಾಗ, ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ದಾಳಿಕೋರರು ಸಾವನ್ನಪ್ಪಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ರಷ್ಯಾದ ಸಾರ್ವಜನಿಕ ಸ್ಥಳದಲ್ಲಿ ಉಗ್ರರಿಂದ ಎರಡನೇಯ ಬಾರಿ ನಡೆದ ದಾಳಿ ಇದಾಗಿದ್ದು, ಈ ದಾಳಿಗೆ ಕಾರಣ, ಉಕ್ರೇನ್. ಉಕ್ರೇನ್ ರಷ್ಯಾದಲ್ಲಿ ಅಶಾಂತಿ ಹುಟ್ಟಿಸಲು ಕಾರಣವಾಗಿದೆ ಎಂದು ರಷ್ಯಾ ಅಧ್ಯಕ್ಷ ಪುಟೀನ್ ಆರೋಪಿಸಿದ್ದಾರೆ.

ಮೋದಿ, ಅಮಿತ್ ಶಾರಿಂದ ಸಂವಿಧಾನದ ಮೇಲೆ ನಿರಂತರ ದಾಳಿ: ರಾಹುಲ್

Sonia Gandhi ; ಸೋನಿಯಾ, ರಾಹುಲ್ ಗಾಂಧಿ ಕ್ಷಮೆಗೆ ಬಿಜೆಪಿ ಆಗ್ರಹ

ನೂತನ ಸಂಸದರಿಂದ ಪ್ರಮಾಣ ವಚನ- ಲೋಕಸಭೆಯಲ್ಲಿ ಕನ್ನಡದ ಸೊಗಡು

About The Author