Movie News: ತೆಲುಗು ನಟಿ ಸೌಮ್ಯ, ರಾಂಗ್ ರೂಟ್‌ನಲ್ಲಿ ಕಾರು ಚಲಾಯಿಸಿಕೊಂಡು ಬಂದು, ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ.
ಸೌಮ್ಯ ತಾಯಿಗೆ ಅನಾರೋಗ್ಯವಿದ್ದು, ಮಾತ್ರೆ ತೆಗೆದುಕೊಳ್ಳುವ ಸಲುವಾಗಿ, ಅರ್ಜೆಂಟ್‌ನಲ್ಲಿ ಗಾಡಿ ಓಡಿಸಿಕೊಂಡು ಬರುವಾಗ, ರಾಂಗ್ ರೂಟ್‌ನಲ್ಲಿ ಬಂದಿದ್ದಾರೆ. ಈ ವೇಳೆ ಅಡ್ಡಗಟ್ಟಿದ ಪೊಲೀಸರು, ನಟಿಯ ವಿರುದ್ಧ ಹೈದರಾಬಾದ್‌ನ ಬಂಜಾರ ಹೀಲ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
ರಾಂಗ್ ರೂಟ್‌ನಲ್ಲಿ ಬಂದ ಕಾರಣಕ್ಕೆ ದಂಡ ಕಟ್ಟಲು ಪೊಲೀಸರು ಹೇಳಿದಾಗ, ಈ ಬಗ್ಗೆ ಸೌಮ್ಯ ಕಿರಿಕ್ ಮಾಡಿದ್ದಾರೆ. ಹೋಮ್‌ಗಾರ್ಡ್ ಮತ್ತು ಸೌಮ್ಯ ಮಧ್ಯೆ ಗಲಾಟೆ ನಡೆದಿದೆ. ಘಟನೆಯಲ್ಲಿ ಹೋಮ್‌ಗಾರ್ಡ್ ಬಟ್ಟೆ ಹರೆದಿದೆ.
ಇನ್ನು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸೌಮ್ಯ ಕುಡಿದು ಗಾಡಿ ಚಲಾಯಿಸಿದ್ದಾರೆಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಮಾತನಾಡಿರುವ ಸೌಮ್ಯ, ನನಗೆ ಕುಡಿಯುವ ಅಭ್ಯಾಸವಿಲ್ಲ. ಅಮ್ಮನಿಗೆ ಔಷಧಿ ಬೇಕಿರುವ ಕಾರಣ ನಾನು ರಾಂಗ್‌ರೂಟ್‌ನಲ್ಲಿ ಬಂದು, ಬೇಗ ಔಷಧಿ ತೆಗೆದುಕೊಂಡು ಹೋಗಬೇಕು ಎಂದುಕೊಂಡಿದ್ದೆ. ಆದರೆ ನನ್ನನ್ನು ತಡೆಗಟ್ಟಿದ ಪೊಲೀಸರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ.
ದೇಶದ್ರೋಹಿಗಳಿಗೆ ವಿಧಾನಸಭೆಯಲ್ಲಿ ಜಾಗ ಕೊಟ್ಟಿರುವುದು ಆತಂಕಕಾರಿ ಬೆಳವಣಿಗೆ: ಬಸವರಾಜ್ ಬೊಮ್ಮಾಯಿ
ರಾಜ್ಯದ ರಕ್ಷಣೆಗಾಗಿ ಕಾಂಗ್ರೆಸ್ಸಿಗರೇ ವಿಧಾನಸೌಧ ಬಿಟ್ಟು ತೊಲಗಿ: ಬಿಜೆಪಿ ನಾಯಕರ ಆಕ್ರೋಶ
ಪಾಕ್ ಪರ ಘೋಷಣೆ ಕೂಗಿದವರನ್ನು ಒದ್ದು ಒಳಗೆ ಹಾಕಿ -ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹ