ಹವಾಮಾನ ವರದಿ ನೀಡಲು ಬಂದ ಪುಟ್ಟ ಅತಿಥಿ.. ವೀಡಿಯೋ ವೈರಲ್

ನಾವು ಟಿವಿಗಳಲ್ಲಿ ವರದಿ ನೀಡಲು ಬರುವ ಆ್ಯಂಕರ್ ಮತ್ತು ರಿಪೋರ್ಟರ್‌ಗಳಿಗೆ ಕಿರಿಕಿರಿಯಾಗುವ, ಅಥವಾ ಯಾರಾದರೂ ಡಿಸ್ಟರ್ಬ್ ಮಾಡುವ ವೀಡಿಯೋಗಳನ್ನ ನೋಡಿರ್ತೀವಿ. ವಿದೇಶಗಳಲ್ಲಂತೂ ಇದು ಕಾಮನ್. ಆದ್ರೆ ಇಂದು ವೈರಲ್ ಆದ ವೀಡಿಯೋದಲ್ಲಿ ಆ್ಯಂಕರ್ ತಮ್ಮ ಮೂರು ತಿಂಗಳ ಪುಟ್ಟ ಕಂದಮ್ಮನನ್ನು ಹಿಡಿದು, ಹವಾಮಾನ ವರದಿ ನೀಡಿದ್ದಾರೆ.

ಯುಎಸ್‌ನ ಚಾನೆಲ್‌ನಲ್ಲಿ ಈ ಘಟನೆ ನಡೆದಿದ್ದು, ಈ ವೀಡಿಯೋವನ್ನ ವ್ಯಕ್ತಿಯೊಬ್ಬರು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಈ ವೀಡಿಯೋದಲ್ಲಿ ರಿಪೋರ್ಟರ್ ರಿಪೋರ್ಟ್ ಕೊಡುತ್ತಿದ್ದರೂ, ಮಗು ಯಾವುದೇ ತೊಂದರೆ ನೀಡದೇ, ಸುಮ್ಮನೆ ಇತ್ತು. ಇದು ನೋಡುಗರಿಗೆ ಖುಷಿ ಕೊಡುವಂತಿತ್ತು. ಇನ್ನು ಈ ಅಮ್ಮನ ಹೆಸರು ರಬೇಕಾ ಆಗಿದ್ದು, ಈಕೆಗೆ 42 ವರ್ಷ ವಯಸ್ಸು. ಈಕೆ ಯುಎಸ್‌ನ ಟಿವಿ ಚಾನೆಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಕೊರೊನಾ ಕಾರಣಕ್ಕಾಗಿ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕಾರಣಕ್ಕೆ ಮಗುವನ್ನು ಸಂಭಾಳಿಸುತ್ತ, ತಮ್ಮ ಆಫೀಸು ಕೆಲಸವನ್ನ ಮಾಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ರಬೇಕಾ, ನಾನು ಇನ್ನೇನು ಕೆಲಸ ಶುರು ಮಾಡಬೇಕು ಅನ್ನುವಷ್ಟರಲ್ಲಿ ನನ್ನ ಮಗಳು ನಿದ್ದೆಯಿಂದ ಎದ್ದು, ಅಳತೊಡಗಿದಳು. ಆಕೆಯನ್ನು ಸಮಾಧಾನ ಮಾಡಲು ಆಕೆಯನ್ನು ಎತ್ತುಕೊಂಡೇ ಇರಬೇಕು. ಹಾಗಾಗಿ ನಾನು ಆಕೆಯನ್ನ ಹೀಗೆ ಹಿಡಿದುಕೊಂಡೇ, ರಿಪೋರ್ಟ್ ನೀಡುತ್ತೇನೆ. ಆಕೆಗೆ ಪೂರ್ತಿ ನಿದ್ದೆಯಾದ ಕಾರಣ, ಆಕೆ ಯಾವ ರೀತಿಯ ಡಿಸ್ಟರ್ಬ್ ಮಾಡುವುದಿಲ್ಲವೆಂದು ಹೇಳಿದ್ದರು. ಅದೇ ರೀತಿ ಮಗು ಕೂಡ ರಿಪೋರ್ಟ್ ನೀಡುವ ವೇಳೆ ಯಾವುದೇ ರೀತಿ ತೊಂದರೆ ಕೊಡಲಿಲ್ಲ.  

About The Author