Hubballi News: ಹುಬ್ಬಳ್ಳಿ: ಇಷ್ಟು ದಿನ ಪವಾಡ, ಭಕ್ತಿ, ದಾಸೋಹ, ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಚಿರಪರಿಚಿತವಾಗಿದ್ದು, ಸಿದ್ಧಾರೂಢ ಮಠದಲ್ಲಿ ಈಗ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಮಠದ ಪಾಕಶಾಲೆ ಮೇಲೆ ಅಳವಡಿಸಿದ ಸೋಲಾರ್ ಪ್ಯಾನೆಲ್ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎನ್ನಲಾಗಿದೆ.
30 ವರ್ಷಗಳ ನಂತರ ಶ್ರೀ ಮಠದ ಅಜೀವ ಪೋಷಕರು, ಆಶ್ರಯದಾತರು ಸದಸ್ಯರ ಸಭೆಯಲ್ಲಿ ಭಕ್ತರು ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿದ್ದಾರೆ.
ಮಠದ ಪಾಕಶಾಲೆಯಲ್ಲಿ ಬಾಯ್ಲರ್‌ನಿಂದ ಅಡುಗೆ ಮಾಡಲಾಗುತ್ತಿತ್ತು. ಇದರಿಂದಾಗಿ ವಿದ್ಯುತ್ ಹೊರೆ ಸಹ ಮಠಕ್ಕೆ ಜಾಸ್ತಿಯಾಗುತ್ತಿತ್ತು. ಹೀಗಾಗಿ ಸೌರ ಶಕ್ತಿ ಬಳಸಿಕೊಂಡು ಅಡುಗೆ ತಯಾರಿಸಲು ನಿರ್ಧಾರ ಮಾಡಿದ ಆಡಳಿತ ಮಂಡಳಿ, ಸೋಲಾರ್ ಕಂಪನಿಗಳಿಗೆ ಟೆಂಡರ್ ಆಹ್ವಾನ ನೀಡಿತ್ತು. ಇದರಂತೆ ಬೆಳಗಾವಿ ಮೂಲದ ಯೂನಿಸನ್ ಎಂಬ ಕಂಪನಿ, ಒಟ್ಟು 57 ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಿಸುವುದಾಗಿ ಬಿಡ್ ಸಲ್ಲಿಸಿತ್ತು.
ನಂತರ ಆಡಳಿತ ಮಂಡಳಿ ಈ ಕಂಪನಿಗೆ ಗುತ್ತಿಗೆ ನೀಡಿತ್ತು. ಈಗ ಕಾಮಗಾರಿ ಮುಗಿದು ಉದ್ಘಾಟನೆ ಸಹ ಆಗಿತ್ತು. ಆದರೆ ಈ ಕಾಮಗಾರಿಯೇ ಅವ್ಯವಹಾರ ಎನ್ನುವ ಗಂಭೀರ ಆರೋಪ ಟ್ರಸ್ಟ್ ವಿರುದ್ಧ ಹೊರಹಾಕಿದ್ದಾರೆ. ಈ ಹಿಂದೆ ಅಧ್ಯಕ್ಷರಿರುವ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಡಿ.ಡಿ.ಮಾಳಗಿಯವರ ಮತ್ತು ಟ್ರಸ್ಟ್ ನವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.
ಡಿ.ಡಿ.ಮಾಳಗಿ ಸ್ವಹಿತಾಸಕ್ತಿಯಿಂದ ತಮಗೆ ಬೇಕಾದವರಿಗೆ ಟೆಂಡರ್ ನೀಡಿದ್ದು, ಇದರಲ್ಲಿ ಅನಧಿಕೃತವಾಗಿ 52 ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಶ್ರೀ ಮಠದ ಅಜೀವ ಪೋಷಕರು, ಆಶ್ರಯದಾತರು ವ ಸದಸ್ಯರ ಸಭೆಯಲ್ಲಿ ಟ್ರಸ್ಟ್ ನ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಇನ್ನೂ ಅವ್ಯವಹಾರದ ಆರೋಪ ಕೇಳಿ ಬರುತ್ತಲೇ, ಏಕಾಏಕಿ ಅಧ್ಯಕ್ಷ ಸ್ಥಾನಕ್ಕೆ ಡಿ.ಡಿ.ಮಾಳಗಿ ಅವರು ರಾಜೀನಾಮೆ ನೀಡಿ ಆಸ್ಪತ್ರೆ ಸೇರಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಸೋಲಾರ್ ಪ್ಯಾನೆಲ್ ಜೋಡಣೆಗೆ ಮುಖ್ಯ ಆಡಳಿತಾಧಿಕಾರಿಗಳ ಪತ್ರ ಸಂಖ್ಯೆ 1885/2018ರ ಪ್ರಕಾರ 57,90,000 ರೂ.ಗೆ ಟೆಂಡರ್ ನೀಡಿದ್ದು, ಏಳು ಕಂತುಗಳಲ್ಲಿ ಸುಮಾರು 52,50,000 ಹಣವನ್ನು ನೀಡಲಾಗಿತ್ತು.
ಶ್ರೀ ಮಠದ ಅಜೀವ ಪೋಷಕರು, ಆಶ್ರಯದಾತರು ವ ಸದಸ್ಯರ ಸಭೆಯಲ್ಲಿ ಭಕ್ತರ ಪ್ರಶ್ನೆ
57 ಲಕ್ಷ ರೂಪಾಯಿ ಖರ್ಚು ಮಾಡಿದರೂ ಕೂಡ ಸೋಲಾರ್ ಕೆಲಸ ಮಾಡುತ್ತಿಲ್ಲ ಸದ್ಯದ ಪರಿಸ್ಥಿತಿ ಯಾವುದೇ ಸೋಲಾರ್ ಕೆಲಸ ಮಾಡುತ್ತಿಲ್ಲ ಎನ್ನುವ ಆರೋಪ ಸಭೆಯಲ್ಲಿ ಮಾಡಿದಾಗ ಸೋಲಾರದ ಬಗ್ಗೆ ಸ್ಪಷ್ಟವಾಗಿ ಮಾಹಿತಿ ಇಲ್ಲ ತಿಳಿದುಕೊಂಡು ಹೇಳುತ್ತೇನೆ ಎನ್ನುವ ಮಾತು ಶ್ರೀ ಸಿದ್ದಾರೋಡ್ ಮಠದ ಟ್ರಸ್ಟ್ ನ ನೂತನ ಪದಾಧಿಕಾರಿಗಳು ತಿಳಿಸಿರುವಂತದ್ದು.
ಈ ಎಲ್ಲಾ ವ್ಯವಹಾರ ಚೆಕ್ ಮೂಲಕ ಮತ್ತು ಕಮಿಟಿ ಗಮನಕ್ಕೆ ತಂದು ನಡೆಸಲಾಗಿದೆ. ಇನ್ನೂ ಅನಾರೋಗ್ಯ ಕಾರಣಕ್ಕಾಗಿ ಡಿಡಿ ಮಾಳಗಿ ರಾಜಿನಾಮೆ ನೀಡಿದ್ದು, ಯಾವುದೇ ಅವ್ಯವಹಾರ ನಡೆದಿಲ್ಲ. ಆಡಳಿತ ಮಂಡಳಿಯ ಕಾರ್ಯವೈಖರಿಗೆ ಮಸಿ ಬಳಿಯಲು ಹುನ್ನಾರ ನಡೆಸುತ್ತಿದೆ ಎಂದು ಮಠದ ಪದಾಧಿಕಾರಿಗಳ ಸಮರ್ಥಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಶ್ರೀ ಸಿದ್ಧಾರೂಢ ಮಠದ ಕೆಲಸ ಕಾರ್ಯಗಳಲ್ಲಿ ಅವ್ಯವಹಾರ ಭ್ರಷ್ಟಾಚಾರದ ಮಾಡಿದವರ ವಿರುದ್ಧ ಕೂಲಂಕುಶವಾಗಿ ಪರಿಶೀಲನೆ ಮಾಡಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಭಕ್ತರು ಆಕ್ರೋಶ ಹೊರಗೆ ಹಾಕಿದ್ದಾರೆ.
‘ಇದು ಜೋಶಿ ಘನತೆ, ಗೌರವಕ್ಕೆ ತಕ್ಕುದಲ್ಲ. ಅವರು ತಮ್ಮ ಮಾತು ವಾಪಸ್ ಪಡೆಯಬೇಕು’
ನನಗೆ ಆರ್ಸಿಬಿ ಪರ ಆಡಲು ಇಷ್ಟವಿಲ್ಲದಿದ್ದರೂ ಬ್ಲಾಕ್ಮೇಲ್ ಮಾಡಿ ಆಡಿಸಿದರು: ಪ್ರವೀಣ್ ಕುಮಾರ್




