Bengaluru News: ಬೆಂಗಳೂರು: ಇತ್ತೀಚೆಗೆ ಇಬ್ಬರು ಯುವಕರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಮಾಗಡಿ ರಸ್ತೆ ಪೊಲೀಸ್ ಠಾಣೆ ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಶ್ರೀನಿವಾಸ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.
ಆರ್‌ಪಿಸಿ ಲೇಔಟ್‌ನ ರೈಲ್ವೆ ರಸ್ತೆಯಲ್ಲಿರುವ ತೇಜಸ್ವಿ ಬಾರ್‌ಗೆ ಅ.27ರ ರಾತ್ರಿ ಮದ್ಯ ಸೇವನೆಗೆ ಆಟೋ ಚಾಲಕ ಆನಂದ್ ಹಾಗೂ ಎಸ್‌ಎಲ್‌ವಿ ಕೇಬಲ್ ಏಜೆನ್ಸಿಯ ಕೆಲಸಗಾರರಾದ ದಯಾನಂದ್ ಮತ್ತು ಶಶಿಧರ್ ಪ್ರತ್ಯೇಕವಾಗಿ ತೆರಳಿದ್ದರು. ಮದ್ಯದ ಮತ್ತಿನಲ್ಲಿ ಈ ಮೂವರ ಮಧ್ಯೆ ಜಗಳವಾಗಿದೆ. ನಾನು ಇದೇ ಏರಿಯಾದವನು ಎಂದ ಆನಂದ್, ತನ್ನ ಆಟೋದಲ್ಲಿ ಬಲವಂತವಾಗಿ ಆ ಇಬ್ಬರನ್ನು ಕೂರಿಸಿಕೊಂಡು ಚಿಕ್ಕಪ್ಪ ಎಎಸ್‌ಐ ಶ್ರೀನಿವಾಸ್ ಮನೆ ಬಳಿಗೆ ಕರೆತಂದಿದ್ದಾನೆ.
ಈ ವೇಳೆ ‘ಕಳ್ಳ ಕಳ್ಳ’ ಎಂದು ಆನಂದ್ ಕೂಗಿದ್ದ. ಈ ವೇಳೆ ಮನೆಯಲ್ಲಿದ್ದ ಎಎಸ್‌ಐ ಶ್ರೀನಿವಾಸ್, ಏಕಾಏಕಿ ಮಚ್ಚು ತಂದು ಆ ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಿದ್ದರು. ಈ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಶ್ರೀನಿವಾಸ್ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಕಾಂಗ್ರೆಸ್‌ನಲ್ಲಿ ಸಿದ್ಧರಾಮಯ್ಯ ಹಾಗೂ ಡಿಕೆಶಿ ಎರಡು ಬಣಗಳಿವೆ: ಮಾಜಿ ಸಚಿವ ಶ್ರೀರಾಮುಲು
ಹಾಸನಾಂಬ ದೇಗುಲದ ಕಳಸ ಪ್ರತಿಷ್ಠಾಪನೆಗೆ ಕರಿಯಲಿಲ್ಲವೆಂದು ಜಿಲ್ಲಾಧಿಕಾರಿ ವಿರುದ್ಧ ಶಾಸಕರು ಗರಂ