Wednesday, January 22, 2025

Latest Posts

ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ಳಲಿರುವ ಬಾಹುಬಲಿ ಜೋಡಿ

- Advertisement -

ಬಾಹುಬಲಿ ಖ್ಯಾತಿಯ ಕ್ಯೂಟ್ ಜೋಡಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಮತ್ತೆ ಜೊತೆಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಈಗ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಅಂತಿಮವಾಗಿ ಬಾಹುಬಲಿ-2 ಚಿತ್ರದ ನಂತರ ಈ ಜೋಡಿಯು ಯಾವುದೇ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಕೇವಲ ಸಿನಿಮಾಗೆ ಸಂಬಂಧಿಸಿದ ಸುದ್ದಿ ಮಾತ್ರವಲ್ಲದೆ ಇವರಿಬ್ಬರ ವೈಯಕ್ತಿಕ ಜೀವನದ ಕೆಲ ವಂದತಿಗಳು ಕೂಡಾ ಸದಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಈ ಜೋಡಿ ವಿವಾಹವಾಗಲಿದ್ದಾರೆ ಎಂಬ ಮಾತುಗಳು ಕೂಡಾ ಕೇಳಿ ಬಂದಿತ್ತು.

ಸದ್ಯ ರೆಬೆಲ್ ಸ್ಟಾರ್ ಪ್ರಭಾಸ್ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದ ಚಿತ್ರಿಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಅನುಷ್ಕಾ ಮಾತ್ರ ಚಿತ್ರರಂಗದಿಂದ ಕೊಂಚ ಬಿಡುವು ತೆಗೆದುಕೊಂಡು ದೂರ ಉಳಿದಿದ್ದಾರೆ. ಇದೀಗ ಈ ಜೋಡಿ ಮತ್ತೆ ಒಂದಾಗಿ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯದಲ್ಲೇ ಅಧಿಕೃತ ಘೋಷಣೆ ಕೂಡ ಆಗಲಿದೆ ಎಂದು ತಿಳಿದು ಬಂದಿದೆ.

ನಿರ್ದೇಶಕ ಮಾರುತಿ ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಈ ಸಿನಿಮಾದಲ್ಲಿ ಪ್ರಭಾಸ್ ನಾಯಕನಾದರೆ, ಅನುಷ್ಕಾ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರು ಈಗಾಗಲೇ ಇಬ್ಬರಿಗೂ ಸಿನಿಮಾದ ಕಥೆಯನ್ನು ಹೇಳಿದ್ದಾರೆ. ಈ ಚಿತ್ರದಲ್ಲಿ ನಟಿಸಲು ಈ ಜೋಡಿ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.

ಸದ್ಯ ‘ರಾಜ ಡಿಲಕ್ಸ್’ ಎಂದು ಹೆಸರು ಇಟ್ಟಿರುವ ಚಿತ್ರದಲ್ಲಿ ಪ್ರಭಾಸ್‌, ಅನುಷ್ಕಾ ಶೆಟ್ಟಿ ಜೋಡಿ ಒಟ್ಟಾಗಿ ನಟಿಸಲಿದ್ದಾರೆ. ಈ ಮೂಲಕ ಮತ್ತೊಮ್ಮೆ ಕಮಾಲ್‌ ಮಾಡಲು ಪ್ರಭಾಸ್‌ ಮತ್ತು ಅನುಷ್ಕಾ ಶೆಟ್ಟಿ ಸಜ್ಜಾಗಿದ್ದಾರೆ. ಇದು ಇಬ್ಬರ ಅಭಿಮಾನಿಗಳಿಗೆ ರಸದೌತಣ ನೀಡುವ ಮುನ್ಸೂಚನೆ ನೀಡಿದೆ.

- Advertisement -

Latest Posts

Don't Miss