Wednesday, April 16, 2025

Latest Posts

ಚೆನ್ನಮ್ಮನ ನೆಲದಿಂದ ಬಂದ ಪಿಎಸ್‌ಐ ಅನ್ನಪೂರ್ಣ ಅವರ ಹಿನ್ನೆಲೆಯೇ ಬಲು ರೋಚಕ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ 5 ವರ್ಷದ ಅಂಗವಿಕಲ ಬಾಲಕಿಯ ಮೇಲೆ ರೇಪ್ ಮಾಡಿ, ಮರ್ಡರ್ ಮಾಡಿದ್ದು, ಅತ್ಯಾಚಾರಿಯನ್ನು ಕೂಡ ಈಗಾಗಲೇ ಎನ್‌ಕೌಂಟರ್ ಮಾಡಲಾಗಿದೆ. ಜೊತೆಗೆ ಮಗುವಿನ ಅಂತ್ಯಕ್ರಿಯೆಯೂ ನಡೆದಿದೆ.

ಇತ್ತ ಅವಳಿ ನಗರದ ಪೊಲೀಸ್ ಕಮಿಷನರ್ ಶಶಿಕುಮಾರ್ ಜೊತೆ ಲೇಡಿ ಸಿಂಗ್ಂ ಅನ್ನಪೂರ್ಣ ಅವರ ಕೆಲಸಕ್ಕೆ ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆದರೆ ಈ ಲೇಡಿ ಸಿಂಗ್ಂ ಅನ್ನಪೂರ್ಣಾ ಅವರ ಹಿನ್ನೆಲೆಯೇ ಬಲು ರೋಚಕವಾಗಿದೆ. ಆ ಬಗ್ಗೆ ಚಿಕ್ಕ ರಿಪೋರ್ಟ್ ಇಲ್ಲಿದೆ ನೋಡಿ.

ಸದ್ಯ ರಾಜ್ಯದ ಮನೆ ಮನೆಯ ಮಾತಾಗಿರುವ ಪಿಎಸ್ಐ ಅನ್ನಪೂರ್ಣ ಅವರಿಗೆ ಮುಂದಿನ ತಿಂಗಳೇ ಮದುವೆ ಫಿಕ್ಸ್ ಆಗಿದೆ. ಆದರೂ ಈ ಹೆಣ್ಣು ಮಗಳು ತನ್ನ ಜೀವವನ್ನು ಲೆಕ್ಕಿಸದೇ, ಅತ್ಯಾಚಾರಿ ಕಲ್ಲೆಸೆದರೂ ಅದನ್ನು ನಿರ್ಲಕ್ಷಿಸಿ, ವಿಕೃತಕಾಮಿಯನ್ನು ಎನ್‌ಕೌಂಟರ್ ಮಾಡಿ ಮುಗಿಸಿದ್ದಾರೆ. ಇದೆಲ್ಲರ ಹಿಂದಿರುವ ಒಂದೇ ಒಂದು ಕಾರಣ ಅಂದ್ರೆ, ಬಾಲಕಿಗೆ ನ್ಯಾಯ ಕೊಡಿಸುವ ಉದ್ದೇಶ.

ಎಸ್.. ಬೆಳಗಾವಿ ಮೂಲದ ಪಿಎಸ್‌ಐ ಅನ್ನಪೂರ್ಣ ಅವರಿಗೆ ಶೌರ್ಯ ಅನ್ನೋದು ಚೆನ್ನಮ್ಮನ ನೆಲದ ರಕ್ತದಲ್ಲೇ ಬಂದಿದೆ. ಅನ್ನಪೂರ್ಣ ಅತ್ಯಾಚಾರಕ್ಕೊಳಗಾಗಿ ಸತ್ತ ಬಾಲಕಿಯ ಮೃತದೇಹವನ್ನು ಆಸ್ಪತ್ರೆಯಲ್ಲೇ ನೋಡಿದ್ದರು. ಎಷ್ಟಾದರೂ ಹೆಣ್ಣಲ್ಲವೇ..? ಇನ್ನೊಂದು ಹೆಣ್ಣಿನ ಸ್ಥಿತಿ ನೋಡಿ, ಪಿಎಸ್‌ಐ ಅನ್ನಪೂರ್ಣ ಕೂಡ ಕಣ್ಣೀರು ಹಾಕಿದ್ದರು. ಅಲ್ಲದೇ, ಬಾಲಕಿಯನ್ನು ನೋಡಿ, ಈಕೆಯ ಅತ್ಯಾಚಾರ ಮಾಡಿದವನನ್ನು ಸುಮ್ಮನೆ ಬಿಡುವುದಿಲ್ಲವೆಂದು ಅಲ್ಲೇ ಪಣ ತೊಟ್ಟಿದ್ದರು.

ಮುಂದಿನ ತಿಂಗಳು ಮದುವೆ ಇದ್ದರು ಕೂಡ, ಅದನ್ನೆಲ್ಲ ಲೆಕ್ಕಿಸದೇ, ಬಾಲಕಿಗೆ ನ್ಯಾಯ ಕೊಡಿಸಬೇಕೆಂದು ಪಣ ತೊಟ್ಟ ಅನ್ನಪೂರ್ಣ, ಅತೀ ದೊಡ್ಡ ರಿಸ್ಕ್ ತೆಗೆದುಕೊಳ್ಳಲು ನಿರ್ಧರಿಸಿದರು. ಇಲ್ಲಿ ಬೇರೆ ಬೇರೆ ತಂಡಗಳನ್ನು ರಚಿಸಿದ್ದರು ಕೂಡ, ಆರೋಪಿ ಸಿಕ್ಕಿದ್ದು ಮಾತ್ರ ಅನ್ನಪೂರ್ಣ ಅವರ ತಂಡಕ್ಕೆನೇ. ಈ ವೇಳೆ ಆತ್ಮರಕ್ಷಣೆಗಾಗಿ ಅನ್ನಪೂರ್ಣ ಆರೋಪಿಯ ಮೇಲೆ 5 ಸುತ್ತು ಗುಂಡಿನ ದಾಳಿ ಮಾಡಿದ್ದರು. 2 ಗುಂಡು ಗಾಳಿಯಲ್ಲಿ ತೇಲಿ, ಮೂರನೇಯದು ಮಿಸ್ ಆಗಿ, ನಾಲ್ಕನೇಯ ಗುಂಡು ಕಾಲಿಗೆ ಬಿದ್ದು, 5ನೇಯ ಗುಂಡು ಅತ್ಯಾಚಾರಿಯ ಎದೆ ಸೀಳಿತ್ತು. ಅಲ್ಲಿಗೆ, ಬಾಲಕಿಗೆ ನ್ಯಾಯ ಕೊಡಿಸುವ ಅನ್ನಪೂರ್ಣ ಅವರ ಆಸೆ ಪೂರ್ಣಗೊಂಡಿತ್ತು.

ಈ ವೇಳೆ ಅನ್ನಪೂರ್ಣ ಅವರಿಗೆ ಸೇರಿ ಇನ್ನು ಕೆಲ ಪೊಲೀಸರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಎಲ್ಲರಿಗೂ ಆಸ್ಪತ್ರೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಂಥ ದಿಟ್ಟ ಪೊಲೀಸ್ ಅಧಿಕಾರಿಗಳು ನಮ್ಮ ರಾಾಜ್ಯಕ್ಕೆ ಬೇಕು. ಹೀಗೆ ಅತ್ಯಾಚಾರ ಮಾಡುವವರನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಬೇಕು ಎನ್ನುತ್ತಿರುವ ಸಾರ್ವಜನಿಕರು ಲೇಡಿ ಸಿಂಗ್ಂ ಅನ್ನಪೂರ್ಣ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

- Advertisement -

Latest Posts

Don't Miss