Bengal News: ಈ ವರ್ಷ ಭಾರತದಲ್ಲಿ ನಡೆದ ಪ್ರಮುಖ ಕಾರ್ಯಗಳಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕೂಡ ಒಂದು. ಎಲ್ಲರೂ ಜನವರಿ 22ರಂದು ರಾಮಲಲ್ಲಾನನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದರು. ಬಳಿಕ ಅಯೋಧ್ಯೆಗೆ ಭೇಟಿ ನೀಡಿ, ಎಷ್ಟೋ ಜನ, ರಾಮಲಲ್ಲಾನ ದರ್ಶನವೂ ಮಾಡಿದ್ದಾರೆ. ಹಾಗಂತ ಇನ್ನೂ ಕೂಡ ರಾಮಲಲ್ಲಾನ ಪ್ರಸಿದ್ದತೆ ಏನೂ ಕಡಿಮೆಯಾಗಿಲ್ಲ.
ಇದೀಗ ಸೋಶಿಯಲ್ ಮೀಡಿಯಾ ತುಂಬ ನಡೆದಾಡುವ ರಾಮಲಲ್ಲಾನದ್ದೇ ಸದ್ದು. ಹೌದು ಓರ್ವ ಬಾಲಕ, ಛದ್ಮವೇಷ ಸ್ಪರ್ಧೆಯಲ್ಲಿ ರಾಮಲಲ್ಲಾನ ವೇಷ ಧರಿಸಿದ್ದಾನೆ. ಇವನ ದೇಹವನ್ನು ಕಪ್ಪು ಶಿಲೆಯ ರೀತಿ ಮಾಡಲಾಗಿದ್ದು, ಹೇರ್ ಸ್ಟೈಲ್, ಲುಕ್ ಎಲ್ಲವೂ ರಾಮ ಲಲ್ಲಾನ ರೀತಿಯೇ ರೆಡಿ ಮಾಡಲಾಗಿದೆ. ಅಬೀರ್ ಎಂಬ ಬಾಲಕನಿಗೆ ಆಶೀಶ್ ಕುಂಡು ಎಂಬ ವ್ಯಕ್ತಿ ತನ್ನ ಪತ್ನಿಯ ಸಹಾಯದೊಂದಿಗೆ, ಮೇಕಪ್ ಮಾಡಿದ್ದಾರೆ.
ಆಶೀಶ್ ಮೂಲತಃ ಬಂಗಾಳದವರು. ಇವರು ಬ್ಯೂಟಿಪಾರ್ಲರ್ ಇಟ್ಟುಕೊಂಡಿದ್ದು, ಇದೇ ಇವರ ಮೂಲ ಆದಾಯದ ದಾರಿಯಾಗಿದೆ. ಆಶೀಶ್ ತಮ್ಮ ಪತ್ನಿಯೊಂದಿಗೆ ಸೇರಿ, ಈ ಬಾಲಕನಿಗೆ ಥೇಟ್ ರಾಮಲಲ್ಲಾನ ರೀತಿ ಮೇಕಪ್ ಮಾಡಿದ್ದಾರೆ. ಇದಕ್ಕಾಗಿ ಮಾರುಕಟ್ಟೆಯಿಂದ ಕೆಲ ಮೇಕಪ್ ಸಾಮಗ್ರಿಗಳನ್ನು ಖರೀದಿಸಿದ್ದಲ್ಲದೇ, ಮನೆಯಲ್ಲೇ ಕೆಲ ವಸ್ತುಗಳನ್ನು ತಯಾರಿಸಿ, ಮೇಕಪ್ ಮಾಡಿದ್ದಾರೆ.
ಬರೀ ಬಾಲಕನಿಗಷ್ಟೇ ಮೇಕಪ್ ಮಾಡಿದ್ದಲ್ಲದೇ, ರಾಮಮಂದಿರದಲ್ಲಿರುವ ಬಾಲಕರಾಮನ ರೀತಿಯೇ, ಅಲಂಕಾರ ಮಾಡಿದ್ದಾರೆ. ಇಲ್ಲಿನ ಫೋಟೋದಲ್ಲಿ ನೀವು ಇದನ್ನು ನೋಡಬಹುದು.
ಶಾಲೆಯಿಂದ ಬರುತ್ತಿದ ಬಾಲಕಿ ಮೇಲೆ ರಸ್ತೆಯಲ್ಲೇ ಲೈಂ*ಗಿಕ ಕಿರುಕುಳ: ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು




