ಹಾಸನ: ಬದಲಿ ರಸ್ತೆ ವ್ಯವಸ್ಥೆ ಮಾಡದೇ ಮತ್ತು ಯಾರಿಗೂ ತಿಳಿಸದೇ ಹೊಸ ಸೇತುವೆ ಮಾಡುವುದಾಗಿ ಏಕಾಏಕಿ ಹಳೇ ಸೇತುವೆಯನ್ನು ಹೊಡೆದು ಹಾಕಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ ಎಂದು ಇಲ್ಲಿನ ಸುತ್ತಮುತ್ತಲ ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದಲ್ಲದೇ ಹಿಡಿ ಶಾಪ ಹಾಕಿದ್ದಾರೆ.
ಈ ರೀತಿ ಮಾಡುವುದರಿಂದ ನಿಮ್ಮ ನಾಶ ನೀವೇ ಮಾಡಿಕೊಳ್ಳುತ್ತೀರಿ..
      ಬೈಪಾಸ್ ಮೂಲಕ ಹಾಲುವಾಗಿಲು ಶಂಕರನಹಳ್ಳಿ, ಮಗ್ಗೆ ಮತ್ತು ಶೆಟ್ಟಿಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಿಗೆ ಹೋಗುವ ಸೇತುವೆ ರಸ್ತೆಯಲ್ಲಿ ಹೊಸ ಸೇತುವೆ ಮಾಡುವುದಾಗಿ ಏಕಾ ಏಕಿ ಬಂದು ಹೊಡೆದು ಹಾಕಲಾಗಿದೆ. ಈ ಸೇತುವೆ ಹೊಡೆಯಲಾಗುತ್ತಿದೆ ಎಂದು ಯಾವ ಪ್ರಕಟಣೆ ಮತ್ತು ನಾಮಫಲಕ ಕೂಡ ಹಾಕಿರುವುದಿಲ್ಲ. ಇದು ಗ್ರಾಮಸ್ಥರಿಗೂ ಕೂಡ ತಿಳಿದಿಲ್ಲ. ಶಾಲಾ-ಕಾಲೇಜಿಗೆ ತೆರಳಲು, ಗಾರೆ ಕೆಲಸ ಮಾಡಲು, ಕೂಲಿ ಕೆಲಸ ಸೇರಿದಂತೆ ಪ್ರತಿನಿತ್ಯ ಅನೇಕರು ವಿವಿಧ ಉದ್ದೇಶಕ್ಕಾಗಿ ಓಡಾಡುತ್ತಾರೆ.
ಈ ರಸ್ತೆ ಇರುವುದು ಒಂದೆ. ಇದು ಬಿಟ್ಟರೇ ಐದಾರು ಕಿ.ಮೀ ದೂರದಿಂದ ಬಳಸಿ ಬರಬೇಕಾಗುತ್ತದೆ. ಇನ್ನು ಸಣ್ಣ ರಸ್ತೆಗಳಲ್ಲಿ ಬಸ್ ಹೋಗಲು ಅವಕಾಶವಾಗುತ್ತಿಲ್ಲ. ಆದರೇ ಈಗ ಏಕಾಏಕಿ ಸೇತುವೆ ಹೊಡೆದು ಹಾಕಿದರೇ ಇದಕ್ಕೆ ಯಾರು ಹೊಣೆ? ಈ ಬಗ್ಗೆ ಇಲ್ಲಿನ ಸುತ್ತ ಮುತ್ತಲ ಗ್ರಾಮ ಪಮಚಾಯಿತಿ ಅಧಿಕಾರಿಗಳಿಗೆ ಮಾಹಿತಿ ಇಲ್ಲವಂತೆ. ಇಂತಹ ಸಮಸ್ಯೆಯಿಂದ ಈ ಭಾಗದಲ್ಲಿ ಬಸ್ ಸೇರಿದಂತೆ ಯಾವ ವಾಹನಗಳು ಹೋಗಲು ಸಾಧ್ಯವಾಗದೇ ಬೇರೆ ರಸ್ತೆಯಲ್ಲಿ ಸಂಚರಿಸಿದೆ. ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎನ್ನುವ ಬಗ್ಗೆ ಯಾವ ಯೋಚನೆ ಮಾಡಿದೇ ಸೇತುವೆ ಹೊಡೆದು ಹಾಕಿದ್ದಾರೆ. ಇಂತಹ ಅಧಿಕಾರಿಗಳಿಗೆ ನಾವು ಏನು ಮಾಡಬೇಕು ಎಂದು ಅಸಮಧಾನವ್ಯಕ್ತಪಡಿಸಿದರು.
ಊಟ ಮಾಡುವ ಮುನ್ನ ಅನ್ನವನ್ನ ದೇವರಿಗೆ ನೈವೇದ್ಯ ಮಾಡಬೇಕು ಅಂತಾ ಹೇಳೋದ್ಯಾಕೆ ಗೊತ್ತಾ..?
ಸಾರ್ವಜನಿಕರಿಗೆ ಸಮಸ್ಯೆ ಆಗುವ ಬಗ್ಗೆ ಮೊದಲೇ ಸೂಚಕ ಪಳಕ ಹಾಕಿ ಕಾಮಗಾರಿ ಅವಧಿ ಬಗ್ಗೆ ಮಾಹಿತಿ ಕೊಡಬೇಕಾಗಿತ್ತು. ಇಲ್ಲಿ ಯಾವುದೇ ಕಾಲ್ ದಾರಿಗಳಿಲ್ಲ. ಮೊದಲು ಬದಲಿ ದಾರಿಗಳನ್ನು ತಾತ್ಕಲಿಕ ನಿರ್ಮಿಸಿದ ಬಳಿಕ ಯಾವುದೇ ರಸ್ತೆ ಆಗಲಿ, ಸೇತುವೆ ಆಗಲಿ ಕೆಡವ ಬೇಕು. ಇದನ್ನೆಲ್ಲಾ ಗಾಳಿಗೆ ತೂರಿ ಸೇತುವೆ ಕೆಡವು ಕಾಮಗಾರಿ ಮಾಡಲಾಗುತ್ತಿದೆ. ಇದರಿಂದ ಇಲ್ಲಿನ ಸುತ ಮುತ್ತಲ ಜನರು ಸಮಸ್ಯೆ ಎದುರಿಸಬೇಕಾಗಿದೆ. ಇನ್ನು ಇಲ್ಲಿನ ಜನನಾಯಕರು ಏನು ಮಾಡುತ್ತಿದ್ದಾರೆ ಎಂದು ವಿಜಯ ನಗರದ ವಿಜಯಕುಮಾರ್ ಹಾಗೂ ಇತರರು ಆಕ್ರೋಶವ್ಯಕ್ತಪಡಿಸಿದರು. ಕೂಡಲೇ ಈಬಗ್ಗೆ ಗಮನವಹಿಸಿ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

