Friday, February 21, 2025

Latest Posts

ಕಲಬುರಗಿಯಲ್ಲಿ ಕಾರ್ಮಿಕನ ಶವ ಎಳೆದೊಯ್ದ ಕೇಸ್: ಅಮಾನವೀಯ ಕೃತ್ಯ ಎಂದ ಸಚಿವ ಲಾಡ್

- Advertisement -

Dharwad News: ಧಾರವಾಡ: ಕಲಬುರಗಿಯಲ್ಲಿ ಕಾರ್ಮಿಕನ ಶವ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದ್ದಾರೆ.

ಇದು ಒಂದು ಅಮಾನವಿಯ‌ ಕೃತ್ಯ. ಮನುಷ್ಯನಿಗೆ ಮನುಷ್ಯತ್ವ ಇಲ್ಲ ಎನ್ನುವಂತ ಸಮಾಜ ನಿರ್ಮಾಣ ಆಗಿದೆ ಎಂದು ಅನಿಸುತ್ತಿದೆ. ಹಿಂದೆ‌ ವಿಜಯಪುರದಲ್ಲಿ‌ ಕೂಡಾ ಒಬ್ಬನಿಗೆ ಥಳಿಸಿದ್ದ ಪ್ರಕರಣ ನಡೆದಿದೆ. ಇಲ್ಲಿ ಕಾರ್ಮಿಕರೇ ಅಲ್ಲಿ ಶವ‌ ಎಳೆದೊಯ್ಧ ಪ್ರಕರಣ ನಡೆದಿದೆ. ನಾನು ಎಸ್ ಪಿಗೆ ಈ ಬಗ್ಗೆ ಮಾತಾಡಿದ್ದೇನೆ. ಕೆಲವರು ಅರೆಸ್ಟ ಕೂಡಾ ಆಗಿದ್ದಾರೆ.

ನಮ್ಮ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನ ಕೂಡಾ ಮಾತಾಡಿದ್ದೇನೆ. ಇದಕ್ಕೆ‌‌ ನಾನು ವಿಷಾದ ಕೂಡಾ ವ್ಯಕ್ತ‌ ಪಡಿಸ್ತೇನೆ. ಎಲ್ಲ ಫ್ಯಾಕ್ಟರಿ ಮಾಲಿಕರು ಈ ತರಹದ ಘಟನೆ ನಡೆದಾಗ ಹೆಣಕ್ಕೆ ಗೌವರ ಕೊಡಬೇಕು. ಆದರೆ ಈಗ ಎಂತ ಸಮಾಜ ಸೃಷ್ಟಿಯಾಗಿದೆ ಎಂದು ನೋವಾಗುತ್ತಿದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

- Advertisement -

Latest Posts

Don't Miss