ಮಹದೇವಪುರ: ಈ ಬಾರಿ ಚುನಾವಣೆಯಲ್ಲಿ ವೃದ್ಧರಿಗೆ ಮತಗಟ್ಟೆಗೆ ಬರಲಾಗುವುದಿಲ್ಲವೆಂದು, ಮನೆಯಲ್ಲೇ ಕುಳಿತು ಓಟ್ ಮಾಡುವ ಅವಕಾಶ ಕೊಟ್ಟಿದ್ದರೂ ಕೂಡ, ಕೆಲವು ಶತಾಯುಶಿಗಳು ಮತಗಟ್ಟೆಗೆ ಬಂದು, ವೋಟ್ ಮಾಡಿದ್ದಾರೆ. ಮಹದೇವಪುರದ, ಮಂಡೂರಿನ ಶತಾಯುಷಿ ಕಮಲಮ್ಮ ನಾರಾಯಣಸ್ವಾಮಿ (103) ಅವರು ತಮ್ಮ ಮೊಮ್ಮಗ ತೇಜಸ್ ಗೌಡರೊಂದಿಗೆ ಆಗಮಿಸಿ, ಮತದಾನ ಮಾಡಿದ್ದಾರೆ.
ಯಾದಗಿರಿ: ಸುರಪುರ ತಾಲೂಕಿನ ನಗನೂರಿನಲ್ಲಿ 105 ವರ್ಷದ ವೃದ್ಧೆ ಕಾರಿನಲ್ಲಿ ಬಂದು ಮತ ಚಲಾಯಿಸಿ ಹೋದರು. ದೇವಕ್ಕಮ್ಮ ಸಿದ್ದರಾಮರೆಡ್ಡಿ ಎಂಬ ಅಜ್ಜಿ, ತಮ್ಮ ಮೊಮ್ಮಗನ ಜೊತೆ ಕಾರಿನಲ್ಲಿ ಬಂದು ಓಟ್ ಮಾಡಿದರು.

ಬಳ್ಳಾರಿ: ಬಳ್ಳಾರಿಯಲ್ಲಿ 103 ವರ್ಷದ ಅಜ್ಜಿ, ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ಅಲ್ಲದೇ, ತಾನು ಗಟ್ಟಿಮುಟ್ಟಾಗಿದ್ದೇನೆ, ನನಗೆ ಮನೆಯಲ್ಲೇ ಕುಳಿತು ವೋಟ್ ಮಾಡುವ ಅವಶ್ಯಕತೆ ಇಲ್ಲ. ನಾನು ಮತಗಟ್ಟೆಗೇ ಬಂದು ಮತ ಚಲಾಯಿಸುತ್ತೇನೆ ಎಂದು ಹೇಳಿ, ಮತ ಚಲಾಯಿಸಿದ್ದಾರೆ.

ಹೊಳೆನರಸಿಪುರ: ಇನ್ನೊಂದೆಡೆ ಹೊಳೆ ನರಸಿ ಪುರದಲ್ಲಿ ಶತಾಯುಷಿ ಅಜ್ಜಿ ಬೋರಮ್ಮ, ಮತಗಟ್ಟೆಗೆ ಬಂದು ಓಟ್ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ನನಗೆ 100 ವರ್ಷವಾಗಿದೆ. ಓಟ್ ಮಾಡಲು ಖುಷಿಯಾಯ್ತು. ಎಲ್ಲರೂ ಒಟ್ ಮಾಡಿ, ಎಲ್ಲರಿಗೂ ಒಳ್ಳೆಯದದಾಗಲಿ, ಚೆನ್ನಾಗಿ ಬದುಕಲಿ ಎಂದು ಆಶೀರ್ವದಿಸಿದ್ದಾರೆ.

