Sunday, December 22, 2024

Latest Posts

ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಹ್ಯಾಟ್ರಿಕ್‌ ಹೀರೋ- ಸೂಪರ್‌ ಡಾನ್ಸರ್‌.!

- Advertisement -

ಡಾ. ಶಿವರಾಜ್‍ಕುಮಾರ್ ಕನ್ನಡ ಚಿತ್ರ ರಂಗದ ಹೆಮ್ಮೆಯ ನಟ. ಇವರು ‘ಆನಂದ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಶಿವಣ್ಣ ನಟಿಸಿದ ಮೊದಲ ಮೂರೂ ಚಿತ್ರಗಳು 100 ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಎಂಬ ಬಿರುದ್ದನ್ನು ಪಡೆದವರು. ಇಂದಿಗೆ ನಮ್ಮೆಲ್ಲರ ಶಿವಣ್ಣನಾಗಿ ಎಲ್ಲರ ಮನಸ್ಸಲ್ಲಿ ಮನೆ ಮಾತಾಗಿದ್ದಾರೆ.

ಇನ್ನು ಪ್ರಭುದೇವ ಅವರ ಬಗ್ಗೆ ಹೇಳುವುದಾದರೆ ಇವರು ಮಾಡದಂತಹ ನಾಟ್ಯವೇ ಇಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಆತ ಹೆಜ್ಜೆ ಇಟ್ಟದ್ದೆಲ್ಲಾ ನಾಟ್ಯವೇ. ಹಾಗೂ ಭಾರತೀಯ ಚಿತ್ರರಂಗ ಕಂಡ ಅಪೂರ್ವ ಪ್ರತಿಭೆಗಳಲ್ಲಿ ಒಬ್ಬರು ಎಂದು ಹೇಳಬಹುದು.

ಇದೀಗ ಹ್ಯಾಟ್ರಿಕ್‌ ಹೀರೋ ಮತ್ತು ಸೂಪರ್‌ ಡಾನ್ಸರ್‌ ಕಾಂಬಿನೇಶನ್‌ನಲ್ಲಿ ಹೊಸ ಸಿನಿಮಾ ಸದ್ಯದಲ್ಲೇ ಶುರುವಾಗ್ತಿದೆ. ಯೋಗರಾಜ್‌ ಭಟ್‌ ನಿರ್ದೇಶನದಲ್ಲಿ ಹೊಸ ಸಿನಿಮಾ ಬರ್ತಿದ್ದು, ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಮತ್ತು ಪ್ರಭುದೇವ ಒಟ್ಟಿಗೆ ನಟಿಸುತ್ತಿದ್ದಾರೆ. ಇನ್ನು ಈ ಸಿನಿಮಾ ಮುಹೂರ್ತ ಇದೆ ಜೂ.9ರಂದು ನಡೆಯಲಿದ್ದು, ಬೆಂಗಳೂರಿನಲ್ಲಿಯೇ ಚಿತ್ರೀಕರಣ ಆರಂಭವಾಗಲಿದೆ.

ಯೋಗರಾಜ್‌ ಭಟ್‌ ಅಂದರೆ ಮೊದಲಿಗೆ ನೆನಪಾಗೋದು ಕಾಮಿಡಿ ಝೋನರ್ ನಂತಹ ಸಿನಿಮಾಗಳು. ಆದರೆ ಈ ಸಿನಿಮಾ ಇದುವರೆಗೂ ಮಾಡಿರುವ ಸಿನಿಮಾಗಳಿಗಿಂತ ತುಂಬ ವೆತ್ಯಾಸವಿದೆಯಂತೆ. ಈ ಸಿನಿಮಾ ಬಿಗ್‌ ಬಜೆಟ್‌ ಜತೆಗೆ ದೊಡ್ಡ ನಟರ ತಂಡ ಇರುವುದರಿಂದ ಹೊಸ ರೀತಿಯ ಸಿನಿಮಾ ಅಗಲಿದೆಯಂತೆ.

ಇನ್ನು ಈ ಸಿನಿಮಾ ಬಗ್ಗೆ ನಿರ್ದೇಶಕ ಯೋಗರಾಜ್‌ ಭಟ್‌ ಮಾತನಾಡಿ, ‘ಶಿವರಾಜ್‌ಕುಮಾರ್‌ ಮತ್ತು ಪ್ರಭುದೇವ ಕಾಂಬಿನೇಶನ್‌ನಲ್ಲಿ ಮೂಡಿ ಬರಲಿರುವ ಸಿನಿಮಾ ಆ್ಯಕ್ಷನ್‌ ಡ್ರಾಮಾ ಸಬ್ಜೆಕ್ಟ್ ಹೊಂದಿದೆ. ಈಗಾಗಲೇ ಕಥೆ ಕೇಳಿ ಶಿವಣ್ಣ ಮತ್ತು ಪ್ರಭುದೇವ ಥ್ರಿಲ್‌ ಆಗಿದ್ದಾರೆ. ಜೂ.9ರಂದು ಮುಹೂರ್ತ ಮಾಡಿ 10ರಿಂದ ಚಿತ್ರೀಕರಣ ಆರಂಭಿಸಲು ಪ್ಲಾನ್‌ ಮಾಡಿದ್ದೇವೆ. ರಾಕ್‌ಲೈನ್‌ ವೆಂಕಟೇಶ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವರಾಜ್‌ಕುಮಾರ್‌ ಅಭಿಮಾನಿಗಳಿಗೆ ಮತ್ತು ಪ್ರಭುದೇವ ಅಭಿಮಾನಿಗಳಿಗೆ ಇಷ್ಟವಾಗುವಂತಹ ಸಿನಿಮಾ ಇದು’ ಎಂದು ತಿಳಿಸಿದ್ದಾರೆ.

ಹಾಗೂ ಈ ಸಿನಿಮಾ ಬಗ್ಗೆ ಶಿವರಾಜ್‌ಕುಮಾರ್‌ ಕೂಡ ಮಾತನಾಡಿದ್ದು, ‘ಭಟ್ಟರು ಒಳ್ಳೆ ಕಥೆ ಮಾಡಿಕೊಂಡು ಬಂದಿದ್ದಾರೆ. ಜತೆಗೆ ಪ್ರಭುದೇವ ಕೂಡ ನಟಿಸುತ್ತಿದ್ದಾರೆ ಎಂದಾಗ ಒಪ್ಪಿಕೊಳ್ಳಲೇಬೇಕಾಯಿತು. ಎಲ್ಲದಕ್ಕೂ ಸಮಯ ಮಾಡಿಕೊಂಡು ಕೆಲಸ ಮಾಡಬೇಕು. ಜನರನ್ನು ಎಷ್ಟು ದಿನ ಆಗುತ್ತದೋ ಅಷ್ಟು ದಿನ ರಂಜಿಸುತ್ತಲೇ ಇರುತ್ತೇನೆ’ ಎಂದಿದ್ದಾರೆ.

ಇನ್ನು ಈ ಸಿನಿಮಾಗೆ ಸಂತೋಷ್‌ ರೈ ಪಾತಾಜೆ ಸಿನಿಮಾಟೋಗ್ರಾಫರ್‌ ಆಗಿ ಕೆಲಸ ಮಾಡಲಿದ್ದು, ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಈ ಸಿನಿಮಾಗಿದೆ. ಆದರೆ ನಾಯಕಿಯರ ಆಯ್ಕೆ ಆಗದಿರುವ ಕಾರಣ ಸದ್ಯದಲ್ಲೇ ಎಲ್ಲವೂ ಫೈನಲ್‌ ಆಗಲಿದೆಯಂತೆ.

ಪ್ರಭುದೇವ ಮತ್ತು ಶಿವಣ್ಣ ಒಳ್ಳೆಯ ಡ್ಯಾನ್ಸರ್ ಆಗಿರುವುದರಿಂದ ಈ ಸಿನಿಮಾದಲ್ಲಿ ಡಾನ್ಸ್ ಹೆಚ್ಚಾಗಿ ಇರುವುದ ಎಂದು ಕಾದು ನೋಡಬೇಕಿದೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ 

 

- Advertisement -

Latest Posts

Don't Miss