Wednesday, August 6, 2025

Latest Posts

‘ಶ್ರೀರಾಮನೇ ಕಾಲ್ಪನಿಕ ಎಂದಿದ್ದ ಕಾಂಗ್ರೆಸ್, ಈಗ ಈ ರೀತಿ ಹೇಳಿಕೆ ಕೊಟ್ಟು ಹಿಂದೂ ಸಮಾಜವನ್ನು ಕೆಣಕುತ್ತಿದೆ’

- Advertisement -

Political News: ಸಿಎಂ ಸಿದ್ದರಾಮಯ್ಯರಿಗೆ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಇನ್ನೂ ಆಹ್ವಾನ ಬಂದಿಲ್ಲ ಎಂಬ ವಿಷಯದ ಬಗ್ಗೆ ಮಾತನಾಡುವಾಗ, ಮಾಜಿ ಸಚಿವರಾದ ಹೆಚ್.ಆಂಜನೇಯ, ಸಿದ್ದರಾಮಯ್ಯನವರೇ ರಾಮ, ಅವರೇಕೆ ಅಲ್ಲಿ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ವಿರೋಧಿಸಿರುವ ಮಾಜಿ ಶಾಸಕ ಪ್ರೀತಂ ಗೌಡ, ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ಅವಕಾಶ ಸಿಕ್ಕಾಗಲೆಲ್ಲಾ ಸನಾತನ ಹಿಂದೂ ಸಮಾಜವನ್ನು ವಿರೋಧಿಸಿಕೊಂಡೇ ಬಂದಿರುವ ಸಿಎಂ ಸಿದ್ದರಾಮಯ್ಯನವರನ್ನು ಮಾಜಿ ಸಚಿವ ಹೆಚ್.ಆಂಜನೇಯ ಅವರು ಶ್ರೀರಾಮನಿಗೆ ಹೋಲಿಸಿದ್ದಾರೆ! ಆಂಜನೇಯ ಅವರೇ, ನೀವು ಅನ್ಯಾಯ-ಅಕ್ರಮ ಮಾಡುವ ಸಿದ್ದರಾಮಯ್ಯನವರನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನಿಗೆ ಹೋಲಿಸಿ ಸಮಸ್ತ ಹಿಂದೂ ಸಮಾಜಕ್ಕೆ ಅವಮಾನಿಸದಿರಿ! ಶ್ರೀರಾಮನೇ ಕಾಲ್ಪನಿಕ ಎಂದಿದ್ದ ಕಾಂಗ್ರೆಸ್, ಈಗ ಈ ರೀತಿ ಪ್ರಚೋದನಾಕಾರಿ ಹೇಳಿಕೆಗಳನ್ನು ಕೊಟ್ಟು ಹಿಂದೂ ಸಮಾಜವನ್ನು ಕೆಣಕುತ್ತಿದೆ ಎಂದು ಪ್ರೀತಂ ಗೌಡ ಆಕ್ರೋಶ ಹೊರಹಾಕಿದ್ದಾರೆ.

ನಿನ್ನೆ ಚಿತ್ರದುರ್ಗದಲ್ಲಿ ಮಾತನಾಡಿ ಮಾಜಿ ಸಚಿವರು, ನಮ್ಮ ಸಿದ್ದರಾಮಯ್ಯನವರೇ ರಾಮ. ಅವರೇಕೆ ರಾಮನಿಗೆ ಪೂಜೆ ಮಾಡಬೇಕು. ಸಿದ್ದರಾಮಯ್ಯವರನ್ನು, ಅಯೋಧ್ಯಾ ರಾಮ ಮಂದಿರ ಉದ್ಘಾಟನೆಗೆ ಕರೆಯದಿದ್ದದ್ದೇ ಒಳ್ಳೆದಾಯ್ತು. ಅವರ ಊರಲ್ಲೂ ರಾಮಮಂದಿರವಿದೆ. ಸಿದ್ದರಾಮಯ್ಯನಹುಂಡಿಯಲ್ಲೇ ರಾಮ ಮಂದಿರವಿದೆ. ಅವರು ಅಲ್ಲೇ ಪೂಜೆ ಮಾಡುತ್ತಾರೆ. ಅಯೋಧ್ಯೆಗೆ ಯಾಕೆ ಹೋಗಬೇಕು..? ಅದು ಬಿಜೆಪಿಯ ರಾಮ. ಬಿಜೆಪಿಯವರು ಅವರನ್ನು, ಇವರನ್ನು ಕರೆಸಿಕೊಂಡು ಭಜನೆ ಮಾಡುತ್ತಾರೆ. ಮಾಡಿಕೊಳ್ಳಲಿ. ನಮಗೇನಾಗಬೇಕು..? ನಮ್ಮ ರಾಮ ಎಲ್ಲೆಡೆಯೂ ಇದ್ದಾನೆ ಎಂದು ಹೇಳಿದ್ದಾರೆ.

ಅಲ್ಲದೇ ನಮ್ಮ ರಾಮ ಎದೆಯಲ್ಲೇ ಇದ್ದಾನೆ. ನಾನು ಆಂಜನೇಯ. ಆಂಜನೇಯ ಏನು ಮಾಡಿದ್ದಾನೆಂದು ಗೊತ್ತಲ್ವಾ..? ನಮ್ಮ ಸಮುದಾಯದಲ್ಲಿ ಹಲವರ ಹೆಸರೆಲ್ಲ ಹೀಗೆ ಇದೆ. ರಾಮ, ಹನುಮ, ಆಂಜನೇಯ ಈ ರೀತಿಯಾಗಿಯೇ ಹೆಸರಿದೆ. ಧರ್ಮ ಧರ್ಮಗಳ ನಡುವೆ ಒಡಕು ತರುತ್ತಿದ್ದಾರೆ. 14 ವರ್ಷ ನೋಡಿದ್ದಾರೆ. ಇನ್ನೂ ಒಂದು ಧರ್ಮದವರನ್ನು ಒಲೈಸಿದರೆ, ಅವರು ವೋಟ್ ಹಾಕುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಆಂಜನೇಯ ಹೇಳಿದ್ದಾರೆ.

ಅಯೋಧ್ಯಾ ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಅಭಿನಂದನೆಗಳ ಮಹಾಪೂರ..

‘ಹುಬ್ಬಳ್ಳಿಯ ರಾಮ ಜನ್ಮಭೂಮಿ ಹೋರಾಟ ಬಂಧನ ಮತ್ತು ಅಯೋಧ್ಯೆಗೂ ಯಾವುದೇ ಸಂಬಂಧವಿಲ್ಲ’

‘ನನ್ನನ್ನೂ ಬಂಧಿಸುತ್ತೀರಾ..? ಧೈರ್ಯಾ ಇದೆಯಾ ಈ ಸರ್ಕಾರಕ್ಕೆ..?’

- Advertisement -

Latest Posts

Don't Miss