Friday, April 18, 2025

Latest Posts

ಗುತ್ತಿಗೆದಾರನ ಬಳಿ 75 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ.. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ PWD ಇಂಜಿನಿಯರ್

- Advertisement -

National News: ಮಧ್ಯಪ್ರದೇಶ: ಗ್ವಾಲಿಯಾರ್ನಲ್ಲಿ ಲಂಚ ಪಡೆಯುತ್ತಿದ್ದ PWD ಇಂಜಿನಿಯರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪಂಕಜ್ ಗುಪ್ತಾ ಎಂದು ಗುರುತಿಸಲಾಗಿದೆ.

ಪಿ ಕೆ ಗುಪ್ತಾ ಎಕ್ಸಿಕ್ಯೂಟೀವ್ ಇಂಜಿನಿಯರಿಂಗ್ ಬಿಲ್ ಪಾಸ್ ಮಾಡಲು ಬಂದ ಗುತ್ತಿಗೆದಾರ ಮಹೇಂದ್ರ ಸಿಂಗ್ ಎಂಬವರ ಬಳಿ, 75 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಕಂಗಾಲಾದ ಮಹೇಂದ್ರ ಸಿಂಗ್ 55 ಸಾವಿರ ಲಂಚ ನೀಡಿದ್ದಾರೆ.

ಮಹೇಂದ್ರ ಸಿಂಗ್ ಅವರು ಭಿಂಡ್ ಜಿಲ್ಲೆಯ ಕಲೆಕ್ಟರ್ ಅವರ ಬಂಗಲೆಯಲ್ಲಿ 3 ಲಕ್ಷ ರೂಪಾಯಿ ಮೌಲ್ಯದ ವಿದ್ಯುತ್ ಫಿಟ್ಟಿಂಗ್ ಕೆಲಸ ಮಾಡಿದರು. ಬಳಿಕ ಬಿಲ್ ಪಾಸ್ ಮಾಡಲು PWD ಕಾರ್ಯನಿರ್ವಾಹಕ ಇಂಜಿನಿಯರ್ ಪಂಕಜ್ ಕುಮಾರ್ ಗುಪ್ತಾ ಅವರ ಮನೆ ಬಾಗಿಲಿಗೆ ಹೋದರು. ಆದರೆ ಪಂಕಜ್ ಗುಪ್ತಾ ಒಂದೆರಡಲ್ಲ ಬರೋಬ್ಬರಿ 75 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟರು. ಬಳಿಕ ಗುತ್ತಿಗೆದಾರರು ಹಾಗೋ ಹೀಗೋ ₹55 ಸಾವಿರ ನೀಡಿದ್ದಾರೆ.

ಇನ್ನು ಹಣ ಕೊಟ್ಟರು PWD ಅಧಿಕಾರಿ ಗುತ್ತಿಗೆದಾರನ ಬಳಿ ಮತ್ತಷ್ಟು ಹಣ ಕೇಳಿದ್ದಾನೆ. ಇದರಿಂದ ಬೇಸತ್ತ ಗುತ್ತಿಗೆದಾರ ಮಹೇಂದ್ರ ಸಿಂಗ್ ಪೋಲೀಸರ ಬಳಿ ದೂರು ನೀಡಿದ್ದಾರೆ. ಬಳಿಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಆರೋಪಿ ಪಂಕಜ್ ಕುಮಾರ್ ಗುಪ್ತನನ್ನ ಬಂಧಿಸಿದ್ದಾರೆ.

ಇನ್ನು ಬಂಧನದಿಂದ ತಪ್ಪಿಸಿಕೊಳ್ಳಲು PWD ಪಿ.ಕೆ ಗುಪ್ತಾ ಪೊಲೀಸರ ಕಾಲು ಮುಗಿಯುತ್ತಾ, ಅಣ್ಣಾ ನಾನು ಸಾಯುತ್ತೇನೆ, ನಿನ್ನ ಪಾದಮುಟ್ಟುತ್ತೇನೆ, ಹೃದಯಾಘಾತವಾಗುತ್ತಿದೆ ಎಂದು ಹೈಡ್ರಾಮಾ ಮಾಡಿದ್ದಾನೆ.

ಮೈಸೂರು ಕೇಂದ್ರ ಕಾರಾಗೃಹದ ಕಾಂಪೌಂಡ್ ಹಿಂಭಾಗ ಗಾಂಜಾ ಮಾರಾಟ, ಅಬಕಾರಿ ಪೊಲೀಸರ ದಾಳಿ

ರಜೌರಿಯಲ್ಲಿ ಗುಂಡಿನ ಚಕಮಕಿ: ಕನ್ನಡಿಗ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮ

Zameer Ahmed Khan ವಾಸ್ತವ್ಯವಿದ್ದ ಹೋಟೆಲ್ ಮೇಲೆ ತಡರಾತ್ರಿ ಪೊಲೀಸರ ದಾಳಿ

- Advertisement -

Latest Posts

Don't Miss