Monday, April 14, 2025

Latest Posts

ಕೊಂಬಿನಿಂದ ತಿವಿದು ಬಾಲಕಿಯನ್ನು ಬಿಸಾಕಿದ ಹಸು- ವೀಡಿಯೋ ವೈರಲ್

- Advertisement -

National News: ಚೆನ್ನೈ: ಶಾಲೆಯಿಂದ ಬರುತ್ತಿದ್ದ ಬಾಲಕಿಯ ಮೇಲೆ ಹಸುವೊಂದು ದಾಳಿ ಮಾಡಿದ್ದು, ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.

ತಮಿಳುನಾಡಿನಲ್ಲಿ ಈ ಘಟನೆ ನಡೆದಿದ್ದು 9 ವರ್ಷದ ಬಾಲಕಿ ಆಯೇಷಾ, ತನ್ನ ಗೆಳತಿಯೊಂದಿಗೆ ಶಾಲೆಯಿಂದ ಮನೆಗೆ ಬರುತ್ತಿದ್ದಳು. ಈ ವೇಳೆ ಬೀದಿಯಲ್ಲಿದ ಬಿಡಾಡಿ ಹಸು, ಆಕೆಯನ್ನು ತನ್ನ ಕೊಂಬಿನಿಂದ ಎತ್ತಿ ಬಿಸಾಕಿದೆ. ಅಲ್ಲದೇ, ಒದ್ದು ಹಿಂಸೆ ಕೊಟ್ಟಿದೆ. ಈಕೆಯ ರಕ್ಷಣೆಗೆ ಹಲವರು ಧಾವಿಸಿದ್ದು, ಹಸುವಿಗೆ ಒಮ್ಮೆ ಹೊಡೆದೋಡಿಸಿದ್ದಾರೆ. ಆದರೂ ಬಿಡದ ಹಸು, ಮತ್ತೂ ಈಕೆಯ ಮೇಲೆ ದಾಳಿ ಮಾಡಿದೆ. ಕೊನೆಗೆ ವ್ಯಕ್ತಿಯೋರ್ವ ಕೋಲಿನಿಂದ ಬಡಿದು ಹಸುಗಳನ್ನು ಓಡಿಸಿ, ಮಗುವಿನ ರಕ್ಷಣೆ ಮಾಡಿದ್ದಾರೆ. ಬಳಿಕ ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ದೃಶ್ಯ ರೆಕಾರ್ಡ್ ಆಗಿದ್ದು, ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಮಕ್ಕಳು, ಪೋಷಕರು ಬಿಡಾಡಿ ದನಗಳ ಬಗ್ಗೆ ಎಚ್ಚರವಹಿಸಬೇಕಾಗಿದೆ.

ಪ್ರತಿಪಕ್ಷದ ನಾಯಕನ ಸ್ಥಾನ ಆಗಸ್ಟ್ 15 ರ ನಂತರ ತೀರ್ಮಾನ: ಬಸವರಾಜ ಬೊಮ್ಮಾಯಿ

ಆ. 27 ರಂದು ಏಕಕಾಲದಲ್ಲಿ 11 ಸಾವಿರ ಕಡೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ: ಡಿ.ಕೆ. ಶಿವಕುಮಾರ್

‘ರಾಹುಲ್ ಗಾಂಧಿ ಮಧ್ಯಪ್ರವೇಶಿಸಲಿ: ಇಲ್ಲದಿದ್ದರೆ ಕರ್ನಾಟಕ ಎಟಿಎಂ ಅಂತ ಸಾಬೀತು’

- Advertisement -

Latest Posts

Don't Miss