Hubli News: ಹುಬ್ಬಳ್ಳಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನರಾಗಿರುವ ಹಿನ್ನೆಲೆ, ಹುಬ್ಬಳ್ಳಿಯಲ್ಲಿ ಮಾತನಾಡಿರುವ ಮಾಜಿ ಸಿಎಂ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ಈಡಿ ದೇಶ ಇವತ್ತು ದುಃಖದಲ್ಲಿ ಮುಳುಗಿದೆ. ಒಬ್ಬ ವ್ಯಕ್ತಿ ಇಲ್ಲದಾಗ ಆ ವ್ಯಕ್ತಿಯ ಮಹತ್ವ ಗೊತ್ತಾಗುತ್ತೆ. ಸಾಧಾರಣ ರಾಜಕಾರಣಿ ಅಲ್ಲಾ, ಬ್ಯಾಂಕ್ ಕೆಲಸ ಮಾಡಿ, ಪೈನಾನ್ಸ್ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಆಕಸ್ಮಿಕವಾಗಿ ರಾಜಕಾರಣಿ ಎಂದು ಗುರುತಿಸಲ್ಪಡುವ ವ್ಯಕ್ತಿ ರಾಜಕೀಯದ ಚಿಂತೆ ಇರಲಿಲ್ಲ. ಜಾಗತೀಕರಣ, ಆಧುನೀಕರಣ, ಉದಾರೀಕರಣ ಬಹಳಷ್ಟು ಒತ್ತು ನೀಡಿದ್ದರು. ಆರ್ಥಿಕ ಸುಧಾರಣೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ರಾಜಕೀಯ ಶುದ್ದೀಕರಣ ಮಾಡಲು ಹೊರಟ್ಟಿದ್ದರು.
ಅವರ ಪಕ್ಷ ಅವರಿಗೆ ಅವಕಾಶ ಕೊಡಲಿಲ್ಲ. ಮಿತ ಭಾಷಿ, ಆರ್ಥಿಕ ತಜ್ಞರು, ಸರಳ ಸಜ್ಜನ ರಾಜಕಾರಣಿ. ಮನಮೋಹನ್ ಸಿಂಗ್ ಹಾಕಿಕೊಟ್ಟ ಅಡಿಪಾಯದಲ್ಲಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲಕರಣ ಮತ್ತು ಆರ್ಥಿಕ ಅಭಿವೃದ್ಧಿ ಹೆಚ್ಚು ಒತ್ತು ನೀಡಿದ ವ್ಯಕ್ತಿ. ಅವರ ಕುಟುಂಬಕ್ಕೆ ದಃಖ ಭರಿಸುವ ಶಕ್ತಿಯನ್ನ ದೇವರು ನೀಡಲಿ ಎಂದು ಬೊಮ್ಮಾಾಯಿ ಹೇಳಿದ್ದಾರೆ.