ಹುಂಡಿಗೆ ಹಾಕಿದ್ದ ನೋಟಿನಲ್ಲಿ ಬರೆದಿದ್ದ ಕೋರಿಕೆ ಕಂಡು ದೇಸ್ಥಾನ ಆಡಳಿತ ಮಂಡಳಿ ಶಾಕ್

Anantapura News: ನಾವು ನೀವು ಹಲವು ಬಾರಿ ಹುಂಡಿಯ ಹಾಕಿದ ಹಣದ ಮೇಲೆ ಬೇಗ ಮದುವೆ ಮಾಡಿಸು, ಬೇಗ ಮನೆ ಖರೀದಿಸುವ, ನಿರ್ಮಿಸುವ ಭಾಗ್ಯ ನೀಡು, ಹೀಗೆ ಇತ್ಯಾದಿ ಕೋರಿಕೆಗಳನ್ನು ಕೇಳಿದ್ದನ್ನು ನೋಡಿರುತ್ತೇವೆ. ಅಪರೂಪಕ್ಕೆ ಯಾರದ್ದಾದರೂ ಸಾವು ಬಯಸಿದ ಕೋರಿಕೆಯನ್ನೂ ಸಹ ನಾವು ನೋಡಿರುತ್ತೇವೆ. ಅದೇ ರೀತಿ ಇಲ್ಲೋರ್ವರು ದೇವರಿಗೆ ಸಲ್ಲಿಸಿದ ಹಣದ ಮೇಲೆ ನನ್ನ ಅತ್ತೆ ಬೇಗ ಸಾಯಲಿ ಎಂದು ಬೇಡಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದ ಸಮಯದಲ್ಲಿ ಕಾಣಿಕೆ ಎಣಿಸುತ್ತಿದ್ದವರಿಗೆ 20 ರೂಪಾಯಿ ನೋಟ್ ಸಿಕ್ಕಿದೆ. ಈ ನೋಟಿನಲ್ಲಿ ನನ್ನ ಅತ್ತೆ ಬೇಗ ಸಾಯುವಂತೆ ಮಾಡು ಎಂದು ದೇವರಲ್ಲಿ ಕೇಳಲಾಗಿದೆ. ಈ ನೋಟ್ ನೋಡಿ ಇಲ್ಲಿನ ಆಡಳಿತ ಮಂಡಳಿಯವರು ಶಾಕ್ ಆಗಿದ್ದಾರೆ.

ಇನ್ನು ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿದ್ದಂತೆ, ಜನರು ಇದಕ್ಕೆ ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಮನೆಯಲ್ಲಿ ಮಾನಸಿಕ ನೆಮ್ಮದಿ ಹಾಳಾದಾಗ ಇಂಥ ವಿಚಾರಗಳೆಲ್ಲವೂ ಮನಸ್ಸಿಗೆ ಬರುತ್ತದೆ ಎಂದು ಕೆಲವರು ಬರೆದಿದ್ದಾರೆ. ಇನ್ನು ಕೆಲವರು ಬೇರೆಯವರ ಸಾವು ಬಯಸುವುದು ಉತ್ತಮವಲ್ಲ ಎಂದಿದ್ದಾರೆ. ಮತ್ತೆ ಕೆಲವರು ಈ ಬಗ್ಗೆ ಹಾಸ್ಯ ಮಾಡಿದ್ದಾರೆ.

About The Author