Political News: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಘರವಾಪ್ಸಿಯಿಂದ ಬಿಜೆಪಿ ರಾಕ್ ಆಗಿದ್ದರೆ, ಕಾಂಗ್ರೆಸ್ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಶಾಕ್ ಆಗಿದ್ದಾರೆ.. ಆದರೆ ಧಾರವಾಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಆಮುಖಂಡರು ಭಾರಿ ಸಂತದಲ್ಲಿದ್ದಾರೆ.. ಶೆಟ್ಟರ್ ಕಾಂಗ್ರೆಸ್ ಗೆ ಬಂದು ಕಿತ್ತಿಕೊಂಡ ಸ್ಥಾನಗಳ ಆಕಾಂಕ್ಷಿಗಳು ಸಂಭ್ರಮದಲ್ಲಿದ್ದು, ಕಾಂಗ್ರೆಸ್ ಅಂಟಿಕೊಂಡಿದ್ದ ಪೀಡೆ ತೊಲಗಿತು ಅಂತ ಕಾರ್ಯಕರ್ತರು ಖುಷಿಯಲ್ಲಿದ್ದಾರೆ…
ಅಪಮಾನದ ಕಾರಣ ಹೇಳಿ ಕಮಲ ಬಿಟ್ಟು ಕೈ ಹಿಡಿದ ಶೆಟ್ಟರ್ ಕಾಂಗ್ರೆಸ್ ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದ್ದು ಗೊತ್ತೆಯಿದೆ. ಇದು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಶೆಟ್ಟರ್ ಖುಷಿಕೊಟ್ಟಿದ್ದರೂ, ಸ್ಥಳೀಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ನೋವಿಗೂ ಕೂಡ ಕಾರಣವಾಗಿತ್ತು. ಆದರೆ ಹೈಕಮಾಂಡ್ ಆದೇಶಕ್ಕೆ ತಲೆ ಭಾಗಿ ಮುಖಂಡರು ಮತ್ತು ಕಾರ್ಯಕರ್ತರು ಶೆಟ್ಟರ್ ನ್ನು ಸಹಿಸಿಕೊಂಡು, ಸಾಕಷ್ಟು ತ್ಯಾಗಳನ್ನು ಮಾಡಿದ್ದರು. ಇದನ್ನೆಲ್ಲ ಮರೆತು ಶೆಟ್ಟರ್ ವಾಪಸು ಬಿಜೆಪಿ ಸೇರಿದಂತೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದರೂ, ಒಲ್ಲದ ಮನಸ್ಸಿನಿಂದ ಶೆಟ್ಟರ್ ನ್ನು ಒಪ್ಪಿಕೊಂಡಿದ್ದ ಕಾರ್ಯಕರ್ತರ ಸಂತಸಕ್ಕೆ ಕಾರಣವಾಗಿದೆ.
ಶೆಟ್ಟರ್ ಪಕ್ಷ ಸೇರಿದ ಕೂಡಲೇ ವಿಧಾನ ಸಭಾ ಕ್ಷೇತ್ರವನ್ನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ್, ರಜತ್ ಉಳ್ಳಾಗಡ್ಡಿ ಮಠ, ಸಲೀಂ ಅಹಮ್ಮದ್ ಬಿಟ್ಟುಕೊಡಬೇಕಾಯಿತು. ಇನ್ನೂ ಕ್ಷೇತ್ರದ ಪಾಲಿಕೆ ಸದಸ್ಯರು ಶೆಟ್ಟರ್ ಮೇಲಿನ ಮುನಿಸು ಬಿಟ್ಟು ಚುನಾವಣೆ ಮಾಡಿದರು.. ಹೀಗಿದ್ದರೂ ಶೆಟ್ಟರ್ ಚುನಾವಣೆಯಲ್ಲಿ ಸೋತರು.. ಈ ಬೆನ್ನಲ್ಲೇ ಶೆಟ್ಟರ್ ವಿಧಾನ ಪರಿಷತ್ ಸದಸ್ಯರಾಗಲು ಶಿವಾನಂದ ಡಂಗನವರ್, ವಿನೋದ್ ಸೂಟಿ, ಇಸ್ಮಾಯಿಲ್ ತಮಟಗಾರ, ರಾಬರ್ಟ್ ದದ್ದಾಪುರಿ ತಮ್ಮ ಆಸೆ ಕೈ ಬಿಡಬೇಕಾಯಿತು. ಈಗ ಶೆಟ್ಟರ್ ಪಕ್ಷ ಬಿಟ್ಟ ಬೆನ್ನಲ್ಲೇ ತ್ಯಾಗ ಮಾಡಿದವರ ಕನಸುಗಳು ಮತ್ತೆ ಚಿಗುರುತ್ತಿವೆ.
ಇನ್ನೂ ಜಗದೀಶ್ ಶೆಟ್ಟರ್ ಗೆ ಪಕ್ಷದಲ್ಲಿ ಗೌರವ ನೀಡಬೇಕಾಗಿದ್ದ ಅನಿವಾರ್ಯತೆ ಸ್ವತಃ ಉಸ್ತುವಾರಿ ಸಚಿವ ಸಂತೋಷ ಲಾಡ್ ಎದುರಾಗಿತ್ತು. ಸಚಿವರಾಗಿದ್ದರೂ ಮಾಜಿ ಸಿಎಂ ಎನ್ನುವ ಕಾರಣಕ್ಕೆ ಪಕ್ಷ ಸಭೆ, ಸಮಾರಂಭಗಳಲ್ಲಿ ಶೆಟ್ಟರ್ ಒಲ್ಲದ ಮನಸ್ಸಿನಿಂದ ಮನ್ನಣೆ ನೀಡಲಾಗುತ್ತಿತ್ತು. ಇನ್ನೂ ಲೋಕಸಭಾ ಚುನಾವಣಾ ಧಾರವಾಡ ಟಿಕೆಟ್ ಸಹ ಶೆಟ್ಟರ್ ಎನ್ನುವ ಮಾತು ಕೇಳಿ ಬರುತ್ತಲೇ, ಸಂತೋಷ ಲಾಡ್ ಗೂ ಅಸಮಾಧಾನ ಆರಂಭವಾಗಿತ್ತು. ಆದರೆ ಇದನ್ನು ಬಹಿರಂಗವಾಗಿ ಹೇಳಿಕೊಳ್ಳಲಾದ ಪರಿಸ್ಥಿತಿ.. ಈಗ ಬಹಿರಂಗವಾಗಿಯೇ ಸಂತೋಷ ಲಾಡ್ ಶೆಟ್ಟರ್ ಪಕ್ಷ ಬಿಟ್ಟಿದ್ದು ಬಹಳಷ್ಟು ಸಂತಸ ತಂದಿದೆ ಅಂತ ಹೇಳಿಕೆ ನೀಡಿದ್ದಾರೆ..
ಒಟ್ಟಿನಲ್ಲಿ ಶೆಟ್ಟರ್ ನಿರ್ಗಮನದಿಂದ ಕಾಂಗ್ರೆಸ್ ಸಂತಸದ ವಾತಾವರಣ ನಿರ್ಮಾಣವಾಗಿದ್ದಂತೂ ಸತ್ಯ.. ಆದರೆ ಶೆಟ್ಟರ್ ಸಲುವಾಗಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಮಾಡಿದ ತ್ಯಾಗ ವ್ಯರ್ಥವಾಯಿತು ಎಂಬುವುದು ನೊಂದ ಕಾರ್ಯಕರ್ತರ ಮಾತು..
ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ
ಕಾಂಗ್ರೆಸ್ ಪಕ್ಷದಲ್ಲಿ ಜಗದೀಶ್ ಶೆಟ್ಟರ್, ಅವರಿಗೆ ಯಾವುದೇ ಅನ್ಯಾಯ, ಅವಮಾನ ಆಗಿಲ್ಲ: ಸಿಎಂ
‘ಕಳೆದ ಬಾರಿ ಬಂದಾಗ ಮೊಟ್ಟೆ ಎಸೆದಿದ್ದರು, ಈ ಬಾರಿ ಹೂವಿನ ಸುರಿಮಳೆ ಸುರಿಸಿದ್ದಾರೆ’
27ರಂದು ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆ, 900ಕ್ಕೂ ಹೆಚ್ಚು ಅಪೇಕ್ಷಿತರು: ಪ್ರೀತಂ ಗೌಡ




