Hubli News: ಕಷ್ಟಪಟ್ಟು ಸಾಲಾ ಸೋಲಾ ಮಾಡಿ ಹೊಲದಲ್ಲಿ ಕಡಲೆ ಬೆಳೆದು ಜಮಿನೀನಲ್ಲಿ ಕಿತ್ತು ಬಣವಿ ಹಾಕಿದ್ದ ಕಡಲೆ ಬಣವಿಗೆ ಕಿಡಗೇಡಿಗಳು ಬೆಂಕಿ ಹಚ್ಚಿ ಹೇಯ್ ಕೃತ್ಯ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಕಳೆದ ದಿನರಾತ್ರಿ ನಡೆದಿದ್ದು, ರೈತ ಬೆಚ್ಚಿಬಿದಿದ್ದಾನೆ.
ಭೀಮಪ್ಪ ಸುಂಕದ ಎಂಬಾತರಿಗೆ ಸೇರಿದ ಕಡಲೆ ಬಣವಿಗೆ ಬೆಂಕಿ ಹಂಚಿ ಕಿಡಿಗೇಡಿಗಳು ಹೇಯ್ ಕೃತ್ಯ ನಡೆಸಿದ್ದಾರೆ. ಕಿಡಗೇಡಿಗಳ ಮಾಡಿದ ಕೃತ್ಯದಿಂದ ಲಕ್ಷಾಂತರ ರೂ. ಮೌಲ್ಯದ ಕಡಲೆ ಬೆಂಕಿಗೆ ಆಹುತಿಯಾಗಿದೆ. ಈ ದುಷ್ಕತೃ ಮೆರೆದೆ ಕಿಡಿಗೇಡಿಗಳು ಯಾರು ಎಂಬುದು ತಿಳಿದುಬಂದಿಲ್ಲ.
ಇನ್ನೂ ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಕಿಡಿಗೇಡಿಗಳಿಂದ ಅಪಾರ ಪ್ರಮಾಣದ ಕಡಲೆ ಹಾಳಾಗಿದ್ದು, ಲಕ್ಷಾಂತರ ರೂ. ಹಾನಿಯಾಗಿದ್ದು ನಮಗೆ ಪರಿಹಾರ ಒದಗಿಸಿಕೊಡಬೇಕು ಹಾಗೂ ಇಂತಹ ಹೀನ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ನೀಡಬೇಕು. ಸಾಲ ಸೂಲಾ ಮಾಡಿ ಫಸಲು ಬೆಳೆದಿದ್ದೇವು ಆದರೆ ಎಲ್ಲಾ ಮಣ್ಣು ಪಾಲಾಗಿದೆ ಎಂದು ಭೀಮಪ್ಪ ಸುಂಕದ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಘಟನೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.