ರಾಜ್ಯದಲ್ಲೆ ಮೊಟ್ಟ ಮೊದಲ ಬಾರಿಗೆ ಪೊಲೀಸ್ ಮ್ಯೂಸಿಯಂ ನಿರ್ಮಾಣ

www.karnatakatv.net : ಬೆಳಗಾವಿ: ಬೆಳಗಾವಿಯಲ್ಲಿ ನೂತನ ಪೋಲಿಸ್ ಮ್ಯೂಸಿಯಂ ನೋಡಲೆಬೇಕಾದ ಮ್ಯೂಸಿಯಂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡುವ ಬಗ್ಗೆ ಮುಂದಿ‌ನ ದಿನಗಳಲ್ಲಿ ತೀರ್ಮಾನ.ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದಲ್ಲಿ ನೂತನ ಪೊಲೀಸ್ ಮ್ಯೂಸಿಯಂ ಸ್ಥಾಪಿಸಲಾಗಿದ್ದು. ಇದನ್ನು ಡಿಜಿಪಿ ಪ್ರವೀಣ್ ಸೂದ್ ಉದ್ಘಾಟಿಸಿದ್ದಾರೆ.

ನಗರದ ಪೊಲೀಸ್ ಹೆಡ್‌ಕ್ವಾರ್ಟರ್ಸ್​ನಲ್ಲಿ ನಿರ್ಮಿಸಿರುವ ಪೊಲೀಸ್ ವಸ್ತು ಸಂಗ್ರಹಾಲಯದಲ್ಲಿ ಇಲಾಖೆ ಈ ಮೊದಲು ಬಳಸುತ್ತಿದ್ದ ಉಪಕರಣ, ಸಮವಸ್ತ್ರ, ನಿಷ್ಕ್ರಿಯವಾದ ಗ್ರೆನೇಡ್‌ಗಳು, ಎಫ್‌ಎಸ್‌ಎಲ್ ಹಾಗೂ ಇನ್ವೆಸ್ಟಿಗೇಷನ್ ಕಿಟ್‌ಗಳು, ಪೊಲೀಸ್ ಬ್ಯಾಂಡ್‌ನಲ್ಲಿ ಬಳಸುತ್ತಿದ್ದಂತಹ ವಾದ್ಯವೃಂದದ ಹಳೆಯ ಉಪಕರಣಗಳನ್ನು ಸಂಗ್ರಹಿಸಿಡಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಪೋಲಿಸ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಳಸುತ್ತಿರುವ ಸಾಮಗ್ರಿಗಳನ್ನ ಈ ಮ್ಯೂಸಿಯಂನಲ್ಲಿ ಇಟ್ಟಿದ್ದು ಪೋಲಿಸರು ತಮ್ಮ ರಕ್ಷಣೆ ಯಾವ ರೀತಿ ಮಾಡಿಕೊಳ್ಳುತ್ತಿದ್ದರು ಮತ್ತು ಗಲಭೆಯನ್ನ ಯಾವ ರೀತಿಯಲ್ಲಿ ಎದುರಿಸುತ್ತಿದ್ದರು ಎನ್ನುವುದನ್ನ ಈ ಮ್ಯೂಸಿಯಂ ಮೂಲಕ ತಿಳಿದುಕೊಳ್ಳಬಹುದಾಗಿದೆ  ಮತ್ತು ಹೊಸದಾಗಿ ಪೋಲಿಸ್ ಇಲಾಖೆಯಲ್ಲಿ ಸೆರ್ಪಡೆಗೊಳ್ಳುವ ಸಿಬ್ಬಂದಿಗಳಿಗೆ ಈ ಕುರಿತು ಮಾಹಿತಿ ತಿಳಿದುಕೊಳ್ಳಲು ಅನುಕೂಲ ಆಗುವ ನಿಟ್ಟಿನಲ್ಲಿ ಈ ಮ್ಯೂಸಿಯಂನ್ನು ಬೆಳಗಾವಿ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪನೆ ಮಾಡಲಾಗಿದೆ.

ಈ ಹಿಂದೆ ಪೊಲೀಸರು ಧರಿಸುತ್ತಿದ್ದ ಸಮವಸ್ತ್ರ, ಗಲಭೆ ನಿಯಂತ್ರಿಸಲು ಬಳಸುತ್ತಿದ್ದ ಸಾಮಗ್ರಿಗಳು, ಲಾಠಿ, ರಕ್ಷಣಾ ಕವಚ, ಮೆಟಲ್ ಡಿಟೆಕ್ಟರ್, ಈ ಹಿಂದೆ ಬಾಂಬ್ ನಿಷ್ಕ್ರಿಯ ದಳ ಬಳಸುತ್ತಿದ್ದ ಉಪಕರಣಗಳು ಸೇರಿದಂತೆ ಹಲವು ವಸ್ತುಗಳು ಇದರಲ್ಲಿ ಪ್ರದರ್ಶನಕ್ಕಿವೆ.

ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಅವರಿಗೆ ಈ ರೀತಿ ಪೊಲೀಸ್ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕೆಂಬ ಆಲೋಚನೆ ಬಂದಿದೆ. ನಂತರ ಅವರು ನಗರದ ಮರಾಠಾ ಲೈಟ್ ಇನ್ಫೆಂಟ್ರಿ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಲಹೆ ಪಡೆದು‌ ಇದನ್ನು ಸ್ಥಾಪಿಸಿದ್ದಾರೆ. ಶಾಲೆಗಳು ಆರಂಭವಾದ ಬಳಿಕ ತಿಂಗಳಲ್ಲಿ ಒಂದೆರಡು ದಿನ ಒಂದೊಂದು ಶಾಲೆಯ ವಿದ್ಯಾರ್ಥಿಗಳ ವೀಕ್ಷಣೆಗೆ ವ್ಯವಸ್ಥೆ ಮಾಡುವ ಚಿಂತನೆ ಇದೆ.‌ ಮುಂಬರುವ ದಿನಗಳಲ್ಲಿ ನಮಗೆ ಲಭ್ಯವಾಗುವ ಹಳೆಯ ಉಪಕರಣಗಳನ್ನು ಸುವ್ಯವಸ್ಥಿತವಾಗಿ ಇಡುವಂತಹ ವ್ಯವಸ್ಥೆ ಮಾಡಬಹುದು ಎಂದು ತಿಳಿದು ಬಂದಿದೆ.

ಪೊಲೀಸ್ ಮ್ಯೂಸಿಯಂ ಕುರಿತು ಮಾತನಾಡಿದ ಬೆಳಗಾವಿ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಬೆಳಗಾವಿ ಹಳೆಯ ಜಿಲ್ಲೆ. ಬ್ರಿಟಿಷರ ಕಾಲದಲ್ಲಿಯೂ ಇದು ಜಿಲ್ಲಾ ಕೇಂದ್ರವಾಗಿತ್ತು‌. ಇಲ್ಲಿರುವ ಪೊಲೀಸ್ ಇಲಾಖೆಗೆ 120 ವರ್ಷಗಳ ಇತಿಹಾಸವಿದ್ದು.ಈ ಹಿಂದಿನ ಇತಿಹಾಸ ಹಾಗೂ ವಾಸ್ತವ ಮತ್ತು 120 ವರ್ಷಗಳ ಇತಿಹಾಸದಲ್ಲಿ ಆದ ಬದಲಾವಣೆ ಬಗ್ಗೆ ಜನರಿಗೆ ತಿಳಿ ಹೇಳುವ ಸಣ್ಣ ಪ್ರಯತ್ನವೇ‌ ಪೊಲೀಸ್ ವಸ್ತು ಸಂಗ್ರಹಾಲಯ ಎಂದರು.

ಈ ಮ್ಯೂಸಿಯಂನಿಂದ ಮುಂಬರುವ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೂ ಅನುಕೂಲವಾಗುತ್ತೆ. ಇದರ ಎದುರು 1972ರಲ್ಲಿ ಬಳಸುತ್ತಿದ್ದ ಮೂವಿಂಗ್ ರಿಪೇರ್ ಬಸ್ ಸಹ ಇಡಲಾಗಿದೆ. ಯಾವುದಾದರೂ ಪೊಲೀಸ್ ವಾಹನ ಕೆಟ್ಟು ಹೋದರೆ, ಆ ಸ್ಥಳಕ್ಕೆ ಹೋಗಿ ವಾಹನ ರಿಪೇರಿ ಮಾಡುವ ಕೆಲಸಕ್ಕೆ ಇದನ್ನು ಬಳಸಲಾಗುತ್ತಿತ್ತಂತೆ.

ಈ ಮ್ಯೂಸಿಯಂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡುವ ಬಗ್ಗೆ ಮುಂದಿ‌ನ ದಿನಗಳಲ್ಲಿ ತೀರ್ಮಾನಿಸಲಾಗುವುದು. ಶಾಲೆಗಳು ಆರಂಭವಾದ ಬಳಿಕ ತಿಂಗಳಲ್ಲಿ ಒಂದೆರಡು ದಿನ ಒಂದೊಂದು ಶಾಲೆಯ ವಿದ್ಯಾರ್ಥಿಗಳ ವೀಕ್ಷಣೆಗೆ ವ್ಯವಸ್ಥೆ ಮಾಡುವ ಚಿಂತನೆ ಇದೆ.‌ ಮುಂಬರುವ ದಿನಗಳಲ್ಲಿ ನಮಗೆ ಲಭ್ಯವಾಗುವ ಹಳೆಯ ಉಪಕರಣಗಳನ್ನು ಸುವ್ಯವಸ್ಥಿತವಾಗಿ ಇಡುವಂತಹ ವ್ಯವಸ್ಥೆ ಮಾಡ್ತೀವಿ ಎಂದು ತಿಳಿಸಿದ್ದಾರೆ.

ನಾಗೇಶ ಕುಂಬಳಿ ಕರ್ನಾಟಕ ಟಿವಿ ಬೆಳಗಾವಿ

About The Author