Saturday, July 20, 2024

Latest Posts

ರಾಯಚೂರಿನಲ್ಲಿ ಜನಾಶೀರ್ವಾದ ಯಾತ್ರೆ

- Advertisement -

www.karnatakatv.net : ರಾಯಚೂರು : ಕೇಂದ್ರ ಸಚಿವ ಭಗವಂತ ಖುಬಾ ನೇತೃತ್ವದಲ್ಲಿ ನಡೆಯುತ್ತಿರುವ ಜನಾಶೀರ್ವಾದ ಯಾತ್ರೆ ಇದಾಗುದ್ದು, ಸಚಿವರು ಶಕ್ತಿನಗರದ‌ ಮೂಲಕ ಯಾತ್ರೆ ಆರಂಭಿಸಿದರು. ರಾಯಚೂರಿನ ‌ಶಕ್ತಿ ನಗರದಲ್ಲಿ ಕೇಂದ್ರದಲ್ಲಿ ಸಚಿವರಿಗೆ ಭರ್ಜರಿ ಸ್ವಾಗತ ಕೋರಲಾಯಿತು. ಬಿಜೆಪಿ ಮುಖಂಡರಿಂದ ಹಾಗೂ ಕಾರ್ಯಕರ್ತರರಿಂದ ಸಚಿವರಿಗೆ ಜನಾಶೀರ್ವಾದ ಯಾತ್ರೆಗೆ ಅದ್ಧೂರಿ ‌ಸ್ವಾಗತ ಕೋರಲಾಯಿತು.

ಇನ್ನು ರಾಯಚೂರು ಜಿಲ್ಲೆಯ ವಿವಿದೆಡೆ ಅಂದರೆ ಗ್ರಾಮಾಂತರ ಕ್ಷೇತ್ರದ ಹಲವೆಡೆ ಜನಾಶೀರ್ವಾದ ಯಾತ್ರೆ ನಡೆಯಿತು. ಈ ಒಂದು ಜನಾಶೀರ್ವಾದ ಯಾತ್ರೆಯಲ್ಲಿ ಕಲ್ಯಾಣ ‌ಕರ್ನಾಟಕದ ಶಾಸಕರು ಹಾಗೂ ಸಂಸದರು ಭಾಗಿಯಾಗಿದ್ದರು. ದೇವಸೂಗೂರು ಗ್ರಾಮದ ಶ್ರೀ ಸುಗುರೇಶ್ವರ ದೇವಸ್ಥಾನದಲ್ಲಿ ‌ದರ್ಶನ ಪಡೆದ ಸಚಿವರು, ಯರಮರಸ್ ಮೂಲಕ ನಗರ ಪ್ರವೇಶಿಸಿದರು. ಆ ಬಳಿಕ ಚಿಕ್ಕ ಸೂಗೂರು ಮಠಕ್ಕೆ ಕೇಂದ್ರ ಸಚಿವ ಖೂಬಾ ಭೇಟಿ ನೀಡಿ ಆಶಿರ್ವಾದ ಪಡೆದರು.. ಇನ್ನು ಶಕ್ತಿನಗರದಿಂದ ತೆರೆದ ವಾಹನದಲ್ಲಿಯೇ ಸಚಿವರ‌ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ಕಾರ್ಯಕರ್ತರು, ಹೂವಿನ ಸುರಿಮಳೆಗೈಯ್ದರು. ರಾಯಚೂರಿನ ಎಸ್ ಪಿ ಕಚೇರಿ ಮುಂದೆ ಮೂರು ಜೆಸಿಬಿಗಳನ್ನ ನಿಲ್ಲಿಸಿ ಹೂ ಮಳೆಯಿಂದ ನಗರಕಗಕೆ  ಸಚಿವರನ್ನ ಸ್ವಾಗತ ಕೋರಲಾಯಿತು… ಇದೇ ವೇಳೆ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಆದ್ರೆ

ಸಚಿವರೂ ಸೇರಿದಂತೆ ಜನಪ್ರತಿನಿಧಿಗಳು ಕಾರ್ಯಕರ್ತರು ಈ ವೇಳೆ ಕೋವಿಡ್ ನಿಯಮಗಳನ್ನ ಗಾಳಿಗೆ ತೂರಿದರು. ಮೆರವಣಿಗೆ ಬಳಿಕ  ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆ ನಡೆಯಿತು.

ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು

- Advertisement -

Latest Posts

Don't Miss