ಶಿವಮೊಗ್ಗಕ್ಕೆ ಆಗಮಿಸಿದ ಪ್ರಪ್ರಥಮ ಸ್ಟಾರ್ ಏರ್ ಲೈನ್ಸ್ ವಿಮಾನ !

Shivamogga News: ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪ್ರಪ್ರಥಮ ಸ್ಟಾರ್ ಏರ್ ಲೈನ್ಸ್ ವಿಮಾನ ಹೈದರಾಬಾದ್ ನಿಂದ ಶಿವಮೊಗ್ಗೆ ಬಂದಿಳಿದಿದೆ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನೂತನ ಸ್ಟಾರ್ ಏರ್ ಲೈನ್ಸ್ ವಿಮಾನವನ್ನು ಸಂಸದ ಬಿ.ವೈ. ರಾಘವೇಂದ್ರ ಬರಮಾಡಿಕೊಂಡರು. ಬಳಿಕ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸದ ರಾಘವೇಂದ್ರರಿಗೆ ಏರ್ಪೋರ್ಟ್ ಅಧಿಕಾರಿಗಳು, ಸ್ಥಳೀಯ ಕಾರ್ಪೋರೇಟರ್ ಗಳು ಸಾಥ್ ನೀಡಿದರು. ಶಾಸಕರಾದ ಎಸ್.ಎನ್. ಚನ್ನಬಸಪ್ಪ, ರುದ್ರೇಗೌಡ, ಡಿ.ಎಸ್. ಅರುಣ್ ಉಪಸ್ಥಿತರಿದರು.

ಸ್ಟಾರ್ ಏರ್ ಲೈನ್ಸ್ ವಿಮಾನವು ಗೋವಾ, ಹೈದರಾಬಾದ್, ತಿರುಪತಿ ಮಾರ್ಗವಾಗಿ ಸಂಚರಿಸಲಿವೆ. ಈಗಾಗಲೇ ಶಿವಮೊಗ್ಗ ಬೆಂಗಳೂರು ನಡುವೆ ಇಂಡಿಗೋ ವಿಮಾನ ಸಂಚರಿಸುತ್ತಿವೆ. ಇದರೊಂದಿಗೆ ಶಿವಮೊಗ್ಗ ಏರ್ಪೋರ್ಟ್ಗೆ ಮತ್ತೊಂದು ಸಂಸ್ಥೆ ವಿಮಾನ ಸೇರ್ಪಡೆಯಾಗಿದೆ.

ಶೀಘ್ರದಲ್ಲೆ ನೂತನ ಸಾರಿಗೆ ಮಸೂದೆ: ಸಚಿವ ಸಂತೋಷ್ ಲಾಡ್‌

ಒಣಗಿದ ಬೆಳೆ ತಂದು ಡಿಸಿಗೆ ತೋರಿಸಿದ ಜೆಡಿಎಸ್ ಬರ ಅಧ್ಯಯನ ತಂಡ

ಮಾನವೀಯತೆ ಮೆರೆದ ಆಟೋ ಚಾಲಕ: ಆಟೋದಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಮಹಿಳೆಗೆ ವಾಪಾಸ್

About The Author