Sunday, September 8, 2024

Latest Posts

ಈ ರಾಶಿಯ ಹೆಣ್ಣು ಮಕ್ಕಳನ್ನು ಅಷ್ಟು ಸುಲಭವಾಗಿ ಮೋಸ ಮಾಡಲು ಸಾಧ್ಯವಿಲ್ಲ.

- Advertisement -

Horoscope: ಹೆಣ್ಣು ಮಕ್ಕಳ ಜೊತೆ ಸ್ನೇಹ ಬೆಳೆಸಿ, ಬಳಿಕ ಅವರಿಗೆ ಮೋಸ ಮಾಡಿದ ಎಷ್ಟೋ ಕೇಸ್ ಬಗ್ಗೆ ನಾವು ಕೇಳಿರುತ್ತೇವೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಹೆಣ್ಣು ಮಕ್ಕಳಿಗೆ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ನೀವು ಯಾವ ಹೆಣ್ಣು ಮಕ್ಕಳಿಗೆ ಮೋಸ ಮಾಡಿದರೂ, ಈ ಎರಡು ರಾಶಿಯ ಹೆಣ್ಣು ಮಕ್ಕಳಿಗೆ ಮೋಸ ಮಾಡಲು ಸಾಧ್ಯವಾಗುವುದಿಲ್ಲ. ಅದು ಯಾವ ರಾಶಿ ಅಂತಾ ತಿಳಿಯೋಣ.

ಮಿನ ರಾಶಿ ಮತ್ತು ಕರ್ಕ ರಾಶಿಯ ಹೆಣ್ಣು ಮಕ್ಕಳಿಗೆ ನೀವು ಅಷ್ಟು ಸುಲಭವಾಗಿ ಮೋಸ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಇವರ ಸಿಕ್ಸ್ತ್ ಸೆನ್ಸ್ ಆ ರೀತಿಯಾಗಿ ವರ್ಕ್ ಆಗುತ್ತದೆ. ಇವರಿಗೆ ಯಾರ ಮೇಲೆ ನಂಬಿಕೆ ಇಡಬೇಕು, ಯಾರನ್ನು ನಂಬಬಾರದು ಅಂತಾ ಎದುರಿನವರ ಮಾತು ಕೇಳಿದ ತಕ್ಷಣ ಗೊತ್ತಾಗುತ್ತದೆ. ಹಾಗಾಗಿ ಇವರನ್ನು ನೀವು ಅಷ್ಟು ಸುಲಭವಾಗಿ ಮೋಸ ಮಾಡಲು ಸಾಧ್ಯವಾಗುವುದಿಲ್ಲ.

ಇನ್ನು ಕರ್ಕ ರಾಶಿ ಮತ್ತು ಮೀನ ರಾಶಿಯವರು ಸೂಕ್ಷ್ಮ ಸ್ವಭಾವದವರು. ಸದಾ ಕಾಲ ಮೌನವಾಗಿರುತ್ತಾರೆ. ಹೆಚ್ಚು ಮಾತನಾಡುವುದಿಲ್ಲ. ಏಕೆಂದರೆ, ಇವರು ನಾಚಿಕೆ ಸ್ವಭಾವದವರು. ಭಾವನಾತ್ಮಕ ಜೀವಿಗಳು. ಎಲ್ಲರನ್ನೂ ನಂಬಿದರೂ, ನಂಬಿ ಮೋಸ ಹೋಗುವಷ್ಟು ನಂಬುವುದಿಲ್ಲ. ಯಾರಿಗೂ ಕೆಟ್ಟದು ಬಯಸುವುದಿಲ್ಲ. ಆದರೆ ತಮಗೆ ಕೆಟ್ಟದು ಬಯಸುವವರನ್ನು ಸುಮ್ಮನೆ ಬಿಡುವುದಿಲ್ಲ.

ಸಣ್ಣ ಸುಳಿವು ಸಿಕ್ಕರೂ ಪಟ್ ಅಂತಾ ಎಚ್ಚೆತ್ತುಕೊಳ್ಳುವ ಮೀನ ಮತ್ತು ಕರ್ಕ ರಾಶಿಯ ಹೆಣ್ಣು ಮಕ್ಕಳು, ಎದುರಿನವರ ಮಾತಿನಲ್ಲಿ ಕಪಟವಿದ್ದರೆ, ಅಂಥವರಿಂದ ದೂರ ಉಳಿದು ಬಿಡುತ್ತಾರೆ. ಅಕಸ್ಮಾತ್ ಮನೆಯಮಂದಿಯೇ ಆ ರೀತಿ ಇದ್ದರೂ, ಅವರಿಂದ ಹೇಗೆ ದೂರವಿರಬೇಕು ಅಂತಾ ಅವರು ಚೆನ್ನಾಗಿ ಅರಿತಿರುತ್ತಾರೆ. ಹಾಗಾಗಿ ನೀವು ಮೀನ ಮತ್ತು ಕರ್ಕ ರಾಶಿಯವರನ್ನು ಅಷ್ಚು ಸುಲಭವಾಗಿ ಮೋಸ ಮಾಡಲು ಸಾಧ್ಯವಿಲ್ಲ.

- Advertisement -

Latest Posts

Don't Miss