Horoscope: ಕೆಲವು ರಾಶಿಗಳು ಕೆಲವು ಸ್ವಭಾವಗಳನ್ನು ಹೊಂದಿರುತ್ತಾರೆ. ಕೆಲವರಿಗೆ ಬೇಗ ಕೋಪ ಬರುತ್ತದೆ. ಕೆಲವರು ಅಳುಬುರುಕರು. ಕೆಲವರು ಸದಾ ಕಾಲ ನಗು ನಗುತ್ತಲಿರುವವರು. ಹೀಗೆ ಕೆಲವರದ್ದು ಕೆಲವು ಸ್ವಭಾವ. ಆದರೆ ಇಂದು ನಾವು ಹೆಚ್ಚು ನಾಚಿಕೆ ಉಳ್ಳ ರಾಶಿಯವರ ಬಗ್ಗೆ ಹೇಳಲಿದ್ದೇವೆ.
ಮೇಷ: ಮೇಷ ರಾಶಿಯವರು ಹೆಚ್ಚು ನಾಚಿಕ“ಳ್ಳುವ ರಾಶಿಯವರು. ಇವರು ತುಂಬಾ ಬೋಲ್ಡ್, ಧೈರ್ಯವಂತರು, ಹಿಡಿದ ಕೆಲಸ ಮಾಡಿ ಮುಗಿಸುವವರು ಹೌದಾದರೂ, ಕೆಲವು ಬಾರಿ ಇವರ ಈ ನಾಚಿಕೆ ಸ್ವಭಾವ ಕೆಲವು ಕೆಲಸ ಮಾಡಲು ಹಿಂಜರಿಯುವಂತೆ ಮಾಡುತ್ತದೆ.
ಕರ್ಕ: ಕರ್ಕ ರಾಶಿಯವರ ಮಾತು ಕಡಿಮೆ. ಏಕೆಂದರೆ, ಇವರು ಯರ ಬಳಿಯಾದರೂ ಮಾತನಾಡುವಾಗ ನಾಚಿಕ“ಳ್ಳುತ್ತಾರೆ. ಹೀಗಾಗಿ ಇವರಿಗೂ ಹೆಚ್ಚು ನಾಚಿಕೆ ಸ್ವಭಾವ ಎನ್ನಬಹುದು.
ತುಲಾ: ತುಲಾ ರಾಶಿಯವರು ಆಕರ್ಷಕರಾಗಿ ಮಾತನಾಡುತ್ತಾರೆ. ಶಿಸ್ತಿನಿಂದ ಇರುವುದರಿಂದ ಇವರು ನೋಡಲು ಕೂಡ ಚೆಂದವಾಗಿರುತ್ತಾರೆ. ಆದರೂ ಇವರಿಗೆ ನಾಚಿಕೆ ಹೆಚ್ಚು. ವಿಶೇಷವಾಗಿ ಬಾಳ ಸಂಗಾತಿ ಪರಿಚಯದ ಬಗ್ಗೆ ಅಥವಾ ಯಾವುದಾದರೂ ನೆನಪಿನ ಬಗ್ಗೆ ಮಾತನಾಡಿದಾಗ, ಇವರು ಹೆಚ್ಚು ನಾಚುತ್ತಾರೆ.
ಮೀನ: ಮೀನ ರಾಶಿಯವರು ಮುಂಚೆಯೇ ಮೃದು ಸ್ವಭಾವದವರು. ಮಾತನಾಡಲು ಹಿಂಜರಿಯುವವರು. ಕಲ್ಪನಾ ಲೋಕದಲ್ಲಿರುವವರು. ಕನಸುಗಾರರು. ಅದೇ ರೀತಿ ಹೆಚ್ಚು ನಾಚಿಕೆ ಸ್ವಭಾವ ಉಳ್ಳವರು.




