ಹೈದರಾಬಾದ್(ಫೆ.21): ಮದುವೆ ಎಂದರೆ ಸಂಬ್ರಮ ಅದರಲ್ಲೂ ಹೆಣ್ಣಿನ ಮನೆಯಲ್ಲಂತೂ ಸಡಗರವೋ ಸಡಗರ ಅಳಿಯನಿಗೆ ಕೊಡಬೇಕಾಗಿರುವ ವರದಕ್ಷಣೆ ವರೋಪಚಾರ ಗಂಗಳ ತಂಬಿಗಿ ಬಿರೂ ಮಂಚ ಫ್ರಿಜ್ ವಅಷಿಂಗ್ ಮಷಿನ್ ಹೀಗೆ ಹಲವಾರು ರೀತಿಯಲ್ಲಿ ಅಳಿಯನಿಗೆ ಅಂಗಡಿಯಿಂದ ಖರಿಧಿಸಿ ಪ್ರತಿಒಂದನ್ನು ಹೊಸದೆ ಕೊಡುವುದು ವಾಡಿಕೆ . ಇಷ್ಟಿಲ್ಲ ಸಂಭ್ರಮ ಮನೆ ಮಾಡಿರುವಾಗ ಸಡನ್ನಾಗಿ ಮದುವೆ ನಿಂತು ಹೋದರೆ ಏನು ಮಾಡೋದು .ಈಗ ಇದೆ ರೀತಿಯ ಘಟನೆಯೊಂದು ಹೈದರಬಾದ್ನಲ್ಲಿ ನಡೆದಿದೆ.
ಅಳಿಯನಿಗೆ ಕೊಡಬೇಕಿದ್ದ ಸಾಮಾನುಗಳಲ್ಲಿ ಹೆಂಡತಿಯ ಅಪ್ಪ ಎಲ್ಲವನ್ನುಖರಿದಿ ಮಾಡಿ ಮಂಚ ಮಾತ್ರ ಹಳೆಯದನ್ನು ಕೊಟ್ಟಿರುತ್ತಾರೆ. ಇದನ್ನು ಮನಗಂಡ ಮದುಮಗ ತಾಳಿ ಕಟ್ಟುವ ಸಮಯದಲ್ಲಿ ನನ್ನ ಮಾವ ನನಗೆ ಹಳೆಯ ಮಂಚವನ್ನು ಕೊಟ್ಟಿದ್ದಾನೆ ಇಲ್ಲ ಎಂದಿದ್ದರೆ ಇಲ್ಲ ವೆಂದು ಹೇಳಬೇಕಿತ್ತು ಅದೆಲ್ಲ ಬಿಟ್ಟು ಸಕೆಂಡ್ ಹ್ಯಾಂಡ್ ಮಂಚವನ್ನು ಏಕೆ ಕೊಡಬೆಕಿತ್ತು ಎಂದು ತಕರಾರು ತೆಗೆದು ತಾಳಿ ಕಟ್ಟದೆ ಎದ್ದಿದ್ದಾನೆ .
ಇದೀಗ ಯುವತಿಯ ತಂದೆ ಚಂದ್ರಯ್ಯನಗುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು ಜಕ್ರಿನ್ ಅವರನ್ನು ಮದುವೆಯಾಗುವಂತೆ ಮನವೊಲಿಸಿದರು. ಕೊನೆಗೂ ಶಾಂತವಾದ ಯುವಕ ಮದುವೆಯಾಗಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾನೆ. ಆದರೆ ಇಲ್ಲಿ ಮತ್ತೊಂದು ಟ್ವಿಸ್ಟ್ ಇದೆ. ಇಂತಹ ಸಣ್ಣ ಕಾರಣಕ್ಕೆ ಮದುವೆಯಾಗಲು ನಿರಾಕರಿಸಿದ ವ್ಯಕ್ತಿಯನ್ನು ಮದುವೆಯಾಗುವುದರಲ್ಲಿ ಅರ್ಥವಿಲ್ಲ ಎಂದು ಈಗ ವಧು ನಿರ್ಧರಿಸಿದ್ದಾಳೆ. ಇದರೊಂದಿಗೆ ಈ ಮದುವೆಯ ಕಥೆ ಮತ್ತೊಂದು ತಿರುವು ಪಡೆದುಕೊಂಡಿದೆ.




