Tuesday, April 15, 2025

Latest Posts

ಪತ್ನಿ ಗರ್ಭಿಣಿಯಾಗಲೆಂದು ಎಡವಟ್ಟು ಮಾಡಿದ ಪತಿ..

- Advertisement -

International News: ಫರ್ಟಿಲಿಟಿ ಸಮಸ್ಯೆ ಹೊಂದಿರುವ ಪತಿ, ತನ್ನ ಪತ್ನಿ ಗರ್ಭಿಣಿಯಾಗಲೆಂದು, ತನ್ನ ವೀರ್ಯದಲ್ಲಿ ತನ್ನ ತಂದೆಯ ವೀರ್ಯವನ್ನು ಸೇರಿಸಿ, ಎಡವಟ್ಟು ಮಾಡಿದ್ದಾನೆ.

ಲಂಡನ್‌ನಲ್ಲಿ ಈ ಘಟನೆ ನಡೆದಿದ್ದು, ಐವಿಎಫ್ ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಾಗದೇ, ಪತಿ ಈ ಕೆಲಸ ಮಾಡಿದ್ದಾನೆಂದು ತಿಳಿದು ಬಂದಿದೆ. ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರಿಗೆ ಲೈಂಗಿಕ ಸಮಸ್ಯೆ, ಬಂಜೆತನ ಇದ್ದಲ್ಲಿ, ಅಂಥವರಿಗೆ ಮಕ್ಕಳಾಗುವುದಿಲ್ಲ. ಇದನ್ನು ಫರ್ಟಿಲಿಟಿ ಸಮಸ್ಯೆ ಎನ್ನುತ್ತಾರೆ. ಹಾಗಾಗಿ ಅಂಥವರು ಐವಿಎಫ್ ಚಿಕಿತ್ಸೆ ತೆಗೆದುಕೊಂಡಾಗ, ಆ ಚಿಕಿತ್ಸೆ ಸಕ್ಸಸ್ ಆದಲ್ಲಿ, ಅಂಥವರಿಗೆ ಮಕ್ಕಳಾಗುತ್ತದೆ. ಆದರೆ ಅದಕ್ಕೆ ಲಕ್ಷ ಲಕ್ಷ ದುಡ್ಡು ಬೇಕು.

ದುಡ್ಡು ಕಟ್ಟಿದರೂ ನಿಮಗೆ ಮಕ್ಕಳಾಗುತ್ತದೆ ಅನ್ನೋ ಗ್ಯಾರಂಟಿ ಇರುವುದಿಲ್ಲ. ಹಾಗಾಗಿ ಅಷ್ಟು ದುಡ್ಡು ಕಟ್ಟಲಾಗದ ಪತಿ, ತನ್ನ ವೀರ್ಯದಲ್ಲಿ ತಂದೆಯ ವೀರ್ಯ ಸೇರಿಸಿ, ಪತ್ನಿಯನ್ನು ಗರ್ಭಿಣಿ ಮಾಡಲು ಪ್ರಯತ್ನಿಸಿದ್ದಾನೆ. ಪತ್ನಿಗೆ ಮಗುವಾಗಿ ಆ ಮಗುವಿಗೆ ಈಗ 5 ವರ್ಷವಾಗಿದೆ. ಈಗ ಸುದ್ದಿ ಹೊರಬಿದ್ದಿದ್ದು, ಡಿಎನ್‌ಎ ಪರೀಕ್ಷೆ ಮಾಡಿದಾಗ, ಈ ವಿಷಯ ಬೆಳಕಿಗೆ ಬಂದಿದೆ.

ಈ ಬಗ್ಗೆ ಹಲವು ವರ್ಷಗಳ ಹಿಂದೆ ಕೋರ್ಟ್‌ನಲ್ಲಿ ಕೂಡ ಕೇಸ್ ದಾಖಲಾಗಿ, ವಿಚಾರಣೆಗಳು ಸಹ ನಡೆದಿದೆ. ಇದೀಗ ತೀರ್ಪು ಹೊರಬಿದ್ದಿದೆ. ಈ ವಿಚಾರಣೆ ನಡೆಯುವಾಗ, ಪತಿ ಮಾಡಿದ ಕೆಲಸದ ಬಗ್ಗೆ ಗೊತ್ತಾಗಿದೆ. ಆದರೆ ಮಗುವಿಗೆ ತನ್ನ ಸ್ವಂತ ತಂದೆ ಯಾರೆಂದು ತಿಳಿಸಲು ಪಿತೃತ್ವ ಪರೀಕ್ಷೆ ಮಾಡಿಸುವುದು ಬಿಡುವುದು ಕುಟುಬಂಕ್ಕೆ ಬಿಟ್ಟಿದ್ದು ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಮದ್ಯನೀತಿ ಪ್ರಕರಣ: ಕೊನೆಗೂ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾದ ದೆಹಲಿ ಸಿಎಂ

ಉತ್ತರಪ್ರದೇಶದಲ್ಲಿ ಇನ್ನು 6 ತಿಂಗಳು ಪ್ರತಿಭಟನೆ ನಡೆಸುವಂತಿಲ್ಲ: ಸಿಎಂ ಯೋಗಿ ಆದಿತ್ಯನಾಥ್

ಉತ್ತರಪ್ರದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಯತ್ನಿಸಿದವರ ಬಂಧನ

- Advertisement -

Latest Posts

Don't Miss