National News: ವ್ಯಕ್ತಿಯೋರ್ವ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಮದ್ದು ತೆಗೆದುಕೊಂಡು ಮೊದಲ ರಾತ್ರಿಗೆ ಬಂದಿದ್ದು, ಪತ್ನಿಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಾನೆ. ಈ ವೇಳೆ ಪತ್ನಿಗೆ ಗಾಯವಾಗಿದ್ದು, ಆಕೆ ಸಾವನ್ನಪ್ಪಿದ್ದಾಳೆ. ಉತ್ತರಪ್ರದೇಶದ ಹಮೀರ್‌ಪುರದಲ್ಲಿ ಈ ಘಟನೆ ನಡೆದಿದ್ದು, ಈ ಕೆಲಸ ಮಾಡಿದ ಭೂಪ ಎಂಜಿನಿಯರ್ ಆಗಿದ್ದಾನೆ.
ಈತ ವಿದ್ಯಾವಂತನಾಗಿದ್ದೂ ಇಂಥ ಎಡವಟ್ಟು ಮಾಡಿದ್ದಕ್ಕೆ, ಜನ ಹಿಗ್ಗಾಮುಗ್ಗಾ ನಿಂದಿಸಿದ್ದಾರೆ. ಈತ ಮಾಡಿದ ಕೆಲಸಕ್ಕೆ ಪತ್ನಿಯನ್ನು ಸ್ಥಳೀಯ ಆಸ್ಪತ್ರೆಗೂ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. 2 ದಿನಗಳ ಕಾಲ ಆಕೆಗೆ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ಸಾವನ್ನಪ್ಪಿದ ವಧುವಿನ ಕುಟುಂಬಸ್ಥರು. ಹುಡುಗನ ಕುಟುಂಬದ ಮೇಲೆ ಪ್ರಕರಣ ದಾಖಲಿಸಿದ್ದು, ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದಾರೆ.
ಆದರೆ ಪತಿ ಮನೆಗೆ ಬೀಗ ಹಾಕಿ, ಕುಟುಂಬ ಸಮೇತ ಊರಿನಿಂದ ಪರಾರಿಯಾಗಿದ್ದಾನೆ. ಆದರೆ ಇಲ್ಲಿನ ಪೊಲೀಸರು ನಮಗೆ ಇಂಥ ದೂರು ಯಾವುದೂ ಬಂದಿಲ್ಲ. ದೂರು ಬೂಂದರೆ ಖಂಡಿತ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಇನ್ನು ಆಕೆಗೆ ಚಿಕಿತ್ಸೆ ನೀಡಿದ ವೈದ್ಯರು ಹೇಳಿದ ಹೇಳಿಕೆ ಶಾಕ್ ನೀಡುವಂಥದ್ದಾಗಿದೆ. ಪತಿ ವಯಾಗ್ರ ಸೇವಿಸಿ, ಸಂಭೋಗಕ್ಕೆ ಬಂದಿದ್ದು, ಪತ್ನಿಯ ಜೊತೆ ಅದ್ಯಾವ ಮಟ್ಟಿಗೆ ದೈಹಿಕ ಸಂಪರ್ಕ ಹೊಂದಿದ್ದಾನೆ ಎಂದರೆ, ಸಾಮೂಹಿಕ ಅತ್ಯಾಚಾರಕ್ಕೆ ಸಮವಾಗುವ ರೀತಿ ದೈಹಿಕ ಸಂಪರ್ಕ ಹೊಂದಿದ್ದಾನೆ. ಹಾಗಾಗಿ ಆಕೆ ಸಾವನ್ನಪ್ಪಿದ್ದಾಳೆ ಎಂದಿದ್ದಾರೆ.