ಹೊಸದಿಲ್ಲಿ:ಚೊಚ್ಚಲ ಟಿ20ಯಲ್ಲಿ ನಾಯಕನಾಗಿ ಆಡಿದ ರಿಷಭ್ ಪಂತ್ಗೆ ಕಳೆದ ರಾತ್ರಿ ಮರೆಯಲಾಗದ ಕಹಿ ಅನುಭವವಾಗಿದೆ.
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ದ.ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಸೋಲು ಕಂಡಿತು.
ಆದರೆ ಟಿ20 ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ ಮಾಜಿ ವಿಶ್ವ ಚಾಂಪಿಯನ್ ಭಾರತ 200 ರನ್ ಗಳ ಮೊತ್ತವನ್ನು ಡಿಫೆಂಡ್ ಮಾಡುವಲ್ಲಿ ಎಡವಿದೆ.
ಸತತ 12 ಪಂದ್ಯಗಳನ್ನು ಗೆದ್ದಿದ್ದ ಭಾರತ 13ನೇ ಪಂದ್ಯವನ್ನು ಕೈಚೆಲ್ಲಿ ವಿಶ್ವ ದಾಖಲೆ ಬರೆಯುವ ಕನಸು ಭಗ್ನಗೊಂಡಿತು.
ಈ ಹಿಂದೆ 12 ಬಾರಿ 200ಕ್ಕೂ ಹೆಚ್ಚು ರನ್ ಗಳಿಸಿ ಪಂದ್ಯವನ್ನು ಗೆದ್ದು ಕೊಂಡಿತ್ತು.
ಇದರಲ್ಲಿ 2007ರ ಟಿ20 ವಿಶ್ವಕಪ್ ಪಂದ್ಯ ಕೂಡ ಸೇರಿದೆ. ಕಳೆದ ವರ್ಷ ಟಿ20 ವಿಶ್ವಕಪ್ನಲ್ಲಿ ಭಾರತ ಅಫ್ಘಾನಿಸ್ತಾನ ವಿರುದ್ಧ 200ಕ್ಕೂ ಹೆಚ್ಚು ರನ್ ಪೇರಿಸಿ 66 ರನ್ ಗಳ ಅಂತರದಿಂದ ಗೆದ್ದುಕೊಂಡಿತು.
ಈ ಪಂದ್ಯದ ಮೂಲಕ ದ.ಆಫ್ರಿಕಾ ಕೂಡ ದಾಖಲೆ ಬರೆದಿದೆ. ಕೊನೆಯ 10 ಓವರ್ ಗಳಲ್ಲಿ 126 ಚಚ್ಚಿ ವಿಶ್ವ ದಾಖಲೆ ಬರೆದಿದೆ.