International News: ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್- ಹಮಾಸ್ ಯುದ್ಧ ಶುರುವಾಗಿ 40 ದಿನಗಳು ದಾಟಿದೆ. ಆದರೂ ಕೂಡ ಇನ್ನೂ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. ಇಸ್ರೇಲ್ ಸೇನೆ ಹಮಾಸ್ ಉಗ್ರರನ್ನು ಬುಡ ಸಮೇತ ತೆಗೆದುಹಾಕುವ ನಿರ್ಧಾರ ಮಾಡಿದಂತಿದೆ. ಅಲ್ ಶಿಫಾ ಆಸ್ಪತ್ರೆಗೆ ದಾಳಿ ಮಾಡಿರುವ ಇಸ್ರೇಲ್ ಸೇನೆ, ಅಲ್ಲಿನ ಹಮಾಸ್ ಕಮಾಂಡ್ ಸೆಂಟರ್ ನಾಶ ಮಾಡಿದೆ. ಇನ್ನು ಹಲವು ವರ್ಷಗಳಿಂದ ಇ್ದದ, ಹಮಾಸ್ ಉಗ್ರರ ಸಂಸತ್ತ ಕಟ್ಟಡವನ್ನೇ ಇಸ್ರೇಲ್ ಸೇನೆ ವಶಕ್ಕೆ ಪಡೆದಿದೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿದ್ದು, ಹಮಾಸ್ ಉಗ್ರರ ಸಂಸತ್ ಕಟ್ಟಡದಲ್ಲಿ ಇಸ್ರೇಲ್ ಸೈನಿಕರು, ಇಸ್ರೇಲ್ ಬಾವುಟ ಹಿಡಿದು, ಇನ್ನು ಇದು ನಮ್ಮ ಅಧೀನವೆಂದು, ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇನ್ನು ಇದರೊಂದಿಗೆ ಹಮಾಸ್‌ನಲ್ಲಿ ಹಲವು ವರ್ಷಗಳಿಂದ ಉಗ್ರರ ಗುಂಪಿನಲ್ಲಿದ್ದ, ಹಿರಿಯ ಉಗ್ರರನ್ನೆಲ್ಲ ಇಸ್ರೇಲ್ ಸೇನೆ, ಹತ್ಯೆ ಮಾಡಿದೆ. ಈ ಉಗ್ರರ ಗುಂಪು ಗಾಜಾದ ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸುತ್ತಿದ್ದು, ಆಸ್ಪತ್ರೆಗಳನ್ನು ತಮ್ಮ ಬೀಡು ಮಾಡಿಕೊಂಡಿತ್ತು. ಅಲ್ಲಿನ ಸಿಬ್ಬಂದಿ, ವೈದ್ಯರು, ರೋಗಿಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿತ್ತು.
ಈ ಬಗ್ಗೆ ಮಾಹಿತಿ ಪಡೆದಿದ್ದ ಇಸ್ರೇಲ್ ಸೇನೆ, ಒಂದೊಂದೇ ಆಸ್ಪತ್ರೆಗಳನ್ನು ಸುತ್ತುವರೆದು. ಹಲವು ದಿನಗಳಿಂದ ಕಾರ್ಯಾಚರಣೆ ನಡೆಸಿ, ದಾಳಿ ಮಾಡಿದೆ. ಹಲವು ಹಮಾಸ್ ನೆಲೆಗಳನ್ನು ಧ್ವಂಸ ಮಾಡಿ, ಶಸ್ತಾಸ್ತ್ರಗಳನ್ನು, ಉಗ್ರರನ್ನು ವಶಕ್ಕೆ ಪಡೆದಿದೆ. ಇಸ್ರೇಲ್ ಸೇನೆಯ ಈ ಕಾರ್ಯಾಚರಣೆಗಳನ್ನು ನೋಡಿದರೆ, ಇನ್ನು ಕೆಲವೇ ದಿನಗಳಲ್ಲಿ ಹಮಾಸ್ ಉಗ್ರರನ್ನು ಸದೆಬಡೆದು, ಇಸ್ರೇಲ್ ಪ್ರಧಾನಿ ನೆತನ್ಯಾಹು ಕೊಟ್ಟ ಮಾತಿನಂತೆ, ಗಾಜಾವನ್ನು ನಿಶಸ್ತ್ರೀಕರಣ ಮಾಡುವ ದಿನ ದೂರವಿಲ್ಲವೆಂಬಂತೆ ಕಾಣುತ್ತಿದೆ.
Picture circulating online shows troops of the IDF's Golani Brigade inside Gaza's parliament building in Gaza City, after capturing the site. pic.twitter.com/daxuEw0FEx
— Emanuel (Mannie) Fabian (@manniefabian) November 13, 2023
1000ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಹಮಾಸ್ ಕಮಾಂಡರ್ ಹತ್ಯೆ..
ಗಾಜಾದ ಮಕ್ಕಳ ಆಸ್ಪತ್ರೆಯಲ್ಲಿ ಸುರಂಗ ನಿರ್ಮಿಸಿದ ಉಗ್ರರು: ವೀಡಿಯೋ ರಿಲೀಸ್ ಮಾಡಿದ ಇಸ್ರೇಲ್ ಸೇನೆ