International News: ಗಾಜಾದ ಆಸ್ಪತ್ರೆಯೊಂದರಲ್ಲಿ ಸಾವಿರಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ, ಹಮಾಸ್ ಉಗ್ರರ ಕಮಾಂಡರ್‌ನನ್ನು, ಇಸ್ರೇಲ್ ಸೇನೆ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಿದೆ.
ಆಸ್ಪತ್ರೆಯ ಸಿಬ್ಬಂದಿ ಮತ್ತು ರೋಗಿಗಳು ಸೇರಿ ಸಾವಿರಕ್ಕೂ ಹೆಚ್ಚು ಜನರನ್ನು, ಈ ಉಗ್ರರ ಕಮಾಂಡರ್ ಅಹಮದ್ ಸಿಯಾಮ್ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ. ಅಲ್ಲದೇ, ಯುದ್ಧದ ಸಮಯದಲ್ಲಿ ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸಿಕೊಳ್ಳುತ್ತಿದ್ದನೆಂದು, ಇಸ್ರೇಲ್ ಸೇನೆ ತಿಳಿಸಿದೆ. ಈತ ಹಮಾಸ್‌ನ ನಾಸೇರ್ ರಾಡ್‌ವಾನ್ ಕಂಪನಿಯಲ್ಲಿ ಕಮಾಂಡರ್ ಆಗಿದ್ದ.
ಅಕ್ಟೋಬರ್ 7ಕ್ಕೆ ಶುರುವಾಗಿದ್ದ ಇಸ್ರೇಲ್ ಹಮಾಸ್ ಯುದ್ಧದಲ್ಲಿ ಸಾವಿರಕ್ಕೂ ಮೀರಿ ಇಸ್ರೇಲ್ ಸೇನಾ ಕಾರ್ಯಕರ್ತರು, ನಾಗರಿಕರು ಸಾವನ್ನಪ್ಪಿದ್ದರೆ, ಅದಕ್ಕೆ ಪ್ರತೀಕಾರವಾಗಿ, ಇಸ್ರೇಲಿಗರು ನಡೆಸಿದ್ದ ದಾಳಿಯಲ್ಲಿ, 11 ಸಾವಿರಕ್ಕೂ ಹೆಚ್ಚು ಪ್ಯಾಲೇಸ್ತಿನ್ ನಾಗರಿಕರು ಸಾವನ್ನಪ್ಪಿದ್ದಾರೆ. ಇನ್ನು ಕದನ ವಿರಾಮವೇ ಇಲ್ಲ ಎಂದಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, ದಿನಕ್ಕೆ 4 ಗಂಟೆಯಷ್ಟೇ ಕದನ ವಿರಾಮ ಉಳಿದ 20 ಗಂಟೆ ಯುದ್ಧ ನಡೆಯುತ್ತಲೇ ಇರುತ್ತದೆ ಎಂದಿದ್ದಾರೆ.
ಆ ನಾಲ್ಕು ಗಂಟೆಯೊಳಗೆ ಜನ ಸುರಕ್ಷಿತ ತಾಣಗಳಿಗೆ ಅಥವಾ ಇನ್ಯಾವುದೇ ಸ್ಥಳಗಳಿಗೆ ತೆರಳುವುದಿದ್ದರೆ, ತೆರಳಬಹುದು ಎಂದು ನೇತನ್ಯಾಹು ಹೇಳಿದ್ದಾರೆ. ಉಳಿದ 20 ಗಂಟೆಗಳಲ್ಲಿ ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಲ್ಲಿ ಶೆಲ್ ದಾಳಿ, ರಾಕೇಟ್ ದಾಳಿಯಾಗುವ ಸಾಧ್ಯತೆ ಇದೆ. ಇನ್ನು ಗಾಜಾದಲ್ಲಿ ಅಡಗಿ ಕುಳಿತು ಪ್ರಾಣ ಉಳಿಸಿಕೊಳ್ಳಲು ಯಾವುದೇ ಸುರಕ್ಷಿತ ತಾಣಗಳಿಲ್ಲ. ಹಾಗಾಗಿ ಅಲ್ಲಿನ ಜನ ಸಾವು ಬರುವುದು ಖಚಿತವೆಂದೇ ದಿನ ದೂಡುತ್ತಿದ್ದಾರೆ.
ಸಿದ್ದರಾಮಯ್ಯ ಬಿಟ್ಟಿ ಭಾಗ್ಯ ಕೊಟ್ಟು ಅಧಿಕಾರ ಪಡೆದಿದ್ದಾರೆ: ಮುರುಗೇಶ್ ನಿರಾಣಿ
‘ಜನರ ಹಿತವನ್ನು ಮರೆತು, ಸಿಎಮ್ ಡಿಸಿಎಮ್ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ’