Uttara Pradesh: ಪ್ರಯಾಗರಾಜನ ಮಹಾಕುಂಭಮೇಳ ನಡೆಯುವ ಜಾಗವನ್ನು ಉತ್ತರಪ್ರದೇಶ ಸರ್ಕಾರ ಹೊಸ ಜಿಲ್ಲೆಯಾಗಿ ಘೋಷಣೆ ಮಾಡಿದೆ. ಈ ಹೊಸ ಜಿಲ್ಲೆಗೆ ಮಹಾಕುಂಭಮೇಳ ಜಿಲ್ಲೆ ಅಂತಲೇ ಕರೆಯಲಾಗುತ್ತದೆ.
2025ರಲ್ಲಿ ಕುಂಭ ಮೇಳ ನಡೆಯಲಿದ್ದು, ಅದಕ್ಕೂ ಮುನ್ನವೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ವರ್ಷ ನಡೆಯುವ ಮಹಾಕುಂಭ ಮೇಳವನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಮಹಾಕುಂಭಮೇಳ ಎಂದು ಹೆಸರಿಡಲಾದ ಈ ಹೊಸ ಜಿಲ್ಲೆ, 67 ಗ್ರಾಮಗಳನ್ನು ಒಳಗೊಂಡಿದೆ. ಈ ಜಿಲ್ಲೆಯಲ್ಲಿ ಈಗಾಗಲೇ ಮಹಾಕುಂಭ ಮೇಳಕ್ಕೆ ಏನೇನು ತಯಾರಿ ಬೇಕೋ, ಆ ಎಲ್ಲ ತಯಾರಿಗಳನ್ನು ನಡೆಸಲಾಗುತ್ತಿದೆ. 12 ವರ್ಷಗಳಿಗೆ ಒಮ್ಮೆ ಬರುವ ಮಹಾಕುಂಭ ಮೇಳವು 2025 ಜನವರಿ 13ರಿಂದ ಫೆಬ್ರವರಿ 26ವರೆಗೆ ನಡೆಯಲಿದೆ.
ಮಹಾಕುಂಭ ಮೇಳಕ್ಕೆ ಹೇಗೆ ತಯಾರಿ ನಡೆಸಲಾಗಿದೆ ಎಂದು ಪರಿಶೀಲನೆ ನಡೆಸಲು ಪ್ರಧಾನಿ ಮೋದಿ, ಮಹಾಕುಂಭಮೇಳ ಜಿಲ್ಲೆಗೆ ಡಿಸೆಂಬರ್ 13ರಂದು ಆಗಮಿಸಲಿದ್ದಾರೆ.