ಬಿಗ್‌ಬಾಸ್ ಸ್ಪರ್ಧಿ ಮಾಡಿದ್ದ ರೀಲ್ಸ್‌ನಿಂದ ಕಳೆದು ಹೋಗಿದ್ದ ಪುರುಷ, ಮಂಗಳಮುಖಿಯಾಗಿ ಪತ್ತೆ

Bigg Boss News: ಬಿಗ್‌ಬಾಸ್ ಮುಗಿದರೂ ಕೂಡ ಅದರ ಸುದ್ದಿ ಮಾತ್ರ ಮುಗಿಯುತ್ತಿಲ್ಲ. ಆದರೆ ಈ ಬಾರಿ ಸಿಕ್ಕಿರುವ ಸುದ್ದಿ ಮಾತ್ರ, ವಿಚಿತ್ರವಾಗಿದೆ.

7 ವರ್ಷದ ಹಿಂದೆ ರಾಮನಗರದ ಲಕ್ಷ್ಮಣ್ ರಾವ್ ಎಂಬ ವ್ಯಕ್ತಿ ಸಾಲ ಮಾಡಿ ಪತ್ನಿ, ಮಕ್ಕಳನ್ನು ಬಿಟ್ಟು ಹೋಗಿದ್ದ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ಕೂಡ ನಡೆಸುತ್ತಿದ್ದರು. ಇದೀಗ 7 ವರ್ಷದ ಬಳಿಕ, ಆ ವ್ಯಕ್ತಿ ಪತ್ತೆಯಾಗಿದ್ದು, ಆತ ಪುರುಷನಿಂದ ಮಂಗಳಮುಖಿಯಾಗಿ ಬದಲಾಗಿದ್ದಾನೆ.

ಇನ್ನು ಈತ ಸಿಕ್ಕಿದ್ದು ಹೇಗೆ ಎಂದರೆ, ಬಿಗ್‌ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ಮಂಗಳಮುಖಿ ನೀತು ಅವರನ್ನು ವೆಲ್‌ಕಮ್ ಮಾಡಲು ಈ ಲಕ್ಷ್ಮಣ್ ರಾವ್ ಮತ್ತು ಇತರ ಮಂಗಳಮುಖಿಯರು ಹೋಗಿದ್ದರು. ಅಲ್ಲಿ ನೀತುಗೆ ಆರತಿ ಮಾಡಿ, ಅದರ ರೀಲ್ಸ್ ಮಾಡಲಾಗಿತ್ತು. ಈ ರೀಲ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಲಾಗಿತ್ತು. ಇದನ್ನು ನೋಡಿದ ರಾಮನಗರ ಪೊಲೀಸರು, ಸಂಶಯ ಪಟ್ಟು, ಆ ಮಂಗಳಮುಖಿಯನ್ನು ಠಾಣೆಗೆ ಕರೆಸಿದಾಗ, ಆ ಮಂಗಳಮುಖಿಯೇ ಲಕ್ಷ್ಮಣ್ ಎಂದು ಗೊತ್ತಾಯಿತು.

ಬಳಿಕ ಲಕ್ಷ್ಮಣ್ ಅವರ ಕುಟುಂಬವನ್ನು ಠಾಣೆಗೆ ಕರೆಸಿ, ವಿಷಯ ತಿಳಿಸಲಾಗಿದೆ. ಆದರೆ ಲಕ್ಷ್ಮಣ್ ತಾನೀಗ ಮಂಗಳಮುಖಿಯಾಗಿ ಬದಲಾಗಿದ್ದು, ಕುಟುಂಬಸ್ಥರ ಜೊತೆ ಹೋಗದೇ, ತಾನು ಮಂಗಳಮುಖಿಯರೊಂದಿಗೆ ಇರುತ್ತೇನೆ ಎಂದಿದ್ದಾರೆ. ಇದೀಗ ನಾಪತ್ತೆ ಕೇಸ್ ಕ್ಲೋಸ್ ಮಾಡಲಾಗಿದೆ.

‘ಜ್ಞಾನ ವ್ಯಾಪಿ ಎಂಬ ಹೆಸರಿನ ಮಸೀದಿ ಎಲ್ಲಿಯೂ ಇಲ್ಲ. ಔರಂಗಜೇಬ್ ಒಡೆದ ದೇವಸ್ಥಾನ ಅದು.’

2024ರ ಕೇಂದ್ರ ಬಜೆಟ್‌ನಲ್ಲಿ ಲಕ್ಷದ್ವೀಪದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

ತಮ್ಮ ಅಧಿಕಾರಾವಧಿಯ ಯೋಜನೆಗಳ ಸಾಧನೆ ವಿವರಿಸಿದ ಸಚಿವೆ ನಿರ್ಮಲಾ ಸೀತಾರಾಮನ್

About The Author